29.4 C
Hubli
ಏಪ್ರಿಲ್ 28, 2024
eNews Land
ಸುದ್ದಿ

ಬದುಕಿನಲ್ಲಿ ಸಾಧಿಸಲು ಆರೋಗ್ಯ ಮುಖ್ಯ : ಸಿ.ಎಮ್.ನಿಂಬಣ್ಣವರ

ಇಎನ್ಎಲ್ ಕಲಘಟಗಿ: ಬದುಕಿನಲ್ಲಿ ಏನನ್ನಾದರೂ ಸಾಧಿಸಲು ಆರೋಗ್ಯವೇ ಮುಖ್ಯ. ಆದ್ದರಿಂದ ಇದು ಕರ್ನಾಟಕ ಹಾಗೂ ಭಾರತ ಸರ್ಕಾರದ ಜನೋಪಯೋಗಿ ಕಾರ್ಯಕ್ರಮ ಎಂದರು. ಸ್ಥಳೀಯ ತಾಲೂಕಾ ಆಸ್ಪತ್ರೆ ಆವರಣದಲ್ಲಿ ಜರುಗಿದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಧಾರವಾಡ, ತಾಲೂಕಾ ಆರೋಗ್ಯ ಅಧಿಕಾರಿಗಳ ಕಛೇರಿ ಕಲಘಟಗಿ, ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯದ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕದ ತಾಲೂಕಾ ಮಟ್ಟದ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಮೇಳ ಉದ್ಘಾಟಿಸಿ ಮಾತನಾಡಿ ದೇಶದ ಅಭಿವೃದ್ಧಿ ಆಗಬೇಕಾದರೆ ಪ್ರತಿಯೊಬ್ಬ ನಾಗರಿಕರ ಆರೋಗ್ಯ ಮುಖ್ಯ, 20ಕ್ಕೂ ಹೆಚ್ಚು ವಿವಿಧ ರೋಗಗಳ ತಜ್ಞರು ಇಲ್ಲಿ ಬಂದಿದ್ದಾರೆ. ಪ್ರತ್ಯೇಕ ವಿಭಾಗಗಳನ್ನು ತೆರೆದು ಮಾಹಿತಿ ಹಾಗೂ ಜಾಗೃತಿ ಮೂಡಿಸುತ್ತಿದ್ದಾರೆ ಅದರಂತೆ ನಡೆದುಕೊಳ್ಳಿರಿ, ದಿನ ನಿತ್ಯದ ರೋಗಿಗಳಿಗೂ ಉತ್ತಮ ಸೇವೆ ಕೊಡಿರಿ, ಸಮಯಕ್ಕೆ ಸರಿಯಾಗಿ ಕರ್ತವ್ಯ ನಿರ್ವಹಸಿರಿ ಎಂದು ವೈಧ್ಯಾಧಿಕಾರಿಗಳಿಗೆ ಹೇಳಿದರು. ಕೋವಿಡ್ ಸಮಯದಲ್ಲಿ ಅಂಗನವಾಡಿ ಹಾಗೂ ಆಶಾಕಾರ್ಯಕರ್ತೆಯರು ದೇವರು ಮೆಚ್ಚುವ ಕೆಲಸ ಮಾಡಿದ್ದಾರೆ, ಇವರ ಪರಿಶ್ರಮದ ಫಲವಾಗಿ ಇಂದು ನಾವು ಆರೋಗ್ಯವಾಗಿದ್ದೇವೆ. ಆಯುಷ್ಮಾನ ಕಾರ್ಡನಿಂದ 5ಲಕ್ಷ ರೂ ಗಳವರೆಗೆ ಆಯ್ದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಧಾರವಾಡ ಜಿಲ್ಲಾ ಆರೋಗ್ಯ ಅಧಿಕಾರಿ ಬಿ.ಸಿ.ಕರಿಗೌಡ್ರ ದೇಶದ ಕಟ್ಟಕಡೆಯ ವ್ಯಕ್ತಿಗೂ ಉಚಿತ ಆರೋಗ್ಯ ಸೇವೆ ಸಿಗಬೇಕು ಎಂಬುದು ಸಕಾರದ ಉದ್ದೇಶವಾಗಿದೆ. ಉಚಿತವಾಗಿ ಎ.ಬಿ.ಆರ್.ಕೆ ಕಾರ್ಡ, ಹೆಲ್ತ್ ಡಿಜಿಟಲ್ ಕಾರ್ಡ ಲಭ್ಯವಿವೆ. ಹೆಚ್ಚಾಗಿ ಸಸ್ಯಾಹಾರ ಸೇವಿಸಿರಿ, ಬೇಗನೆ ಮಲಗಿ ಬೇಗನೆ ಏಳಿರಿ, ಧ್ಯಾನ ಹಾಗೂ ವ್ಯಾಯಾಮಗಳನ್ನು ನಿಯಮಿತವಾಗಿ ಮಾಡಿರಿ, ಎಲ್ಲರ ಸಹಕಾರದಿಂದ ರಾಜ್ಯವು ಕೋವಿಡ್ ಮುಕ್ತವಾಗಿದೆ, ಕೋವಿಡ್ ನಿಯಮಗಳನ್ನು ಕಡ್ಡಯವಾಗಿ ಪಾಲಿಸಿರಿ, ಈ ಮೇಳವನ್ನು ಕಲಘಟಗಿಯಿಂದ ಪ್ರಾರಂಭಿಸುತ್ತಿರುವುದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದರು. ಜಿಪಂ ಸಿ.ಇ.ಓ. ಸುರೇಶ ಇಟ್ನಾಳ ಮಾತನಾಡಿ ಸರ್ಕಾರದ ಯೋಜನೆಗಳ ಮಾಹಿತಿ ಕೊಡುವುದು ಮೇಳದ ಉದ್ದೇಶವಾಗಿದೆ. ಅನಾರೋಗ್ಯಕ್ಕೆ ತುತ್ತಾಗುವ ಮೊದಲೇ ಎಚ್ಚರಿಕೆ ವಹಿಸಿ ರೋಗ್ಯವಂತರಾಗಿ ಬಾಳಿರಿ, ಆಗ ವಿಶ್ವ ಸಂಸ್ಥೆಯ ಎಲ್ಲರಿಗೂ ಆರೋಗ್ಯ ಎಲ್ಲಡೆಯೂ ಆರೋಗ್ಯ ಎನ್ನುವುದು ಸಾಕಾರವಗುತ್ತದೆ ಎಂದರು. ಈ ಸಂದರ್ಭದಲ್ಲಿ ಹನುಮವ್ವ ಹುಲಮನಿ ಇವರಿಗೆ ಆಯುಷ್ಮಾನ್ ಕಾರ್ಡ ಕೊಡುವ ಮೂಲಕ ಚಾಲನೆ ನೀಡಿದರು.

ತಾಪಂ ಇ.ಓ. ಎಸ್.ಸಿ.ಮಠಪತಿ, ತಹಶೀಲ್ದಾರ ಯಲ್ಲಪ್ಪ ಗೊಣ್ಣೆನ್ನವರ, ಪ.ಪಂ.ಮುಖ್ಯಾಧಿಕಾರಿ ವೈ.ಜಿ.ಗದ್ದೀಗೌಡರ, ಡಾ.ಗಿರೀಶ್ ಮರಡ್ಡಿ, ಡಾ.ಬಸವರಾಜ ಬಾಸೂರ, ಡಾ.ಎಸ್.ವಿ.ನಿಂಬಣ್ಣವರ, ಡಾ.ಡಿ.ಪಿ.ಪೂಜಾರ (ಆಯುಷ್), ಶಶಿ ಪಾಟೀಲ್, ಮಾಲ್ತೇಶ ಕುಲಕರ್ಣಿ, ಕಾರ್ಯಕ್ರಮದ ಅಧ್ಯಕ್ಷರಾಗಿ ಪಪಂ.ಅಧ್ಯಕ್ಷ ಅನಸೂಯಾ ಹೆಬ್ಬಳ್ಳಿಮಠ, ಉಪಾಧ್ಯಕ್ಷೆ ಯಲ್ಲಮ್ಮ ಶಿಗ್ಲಿ, ಗಂಗಾಧರ ಗೌಳಿ, ಸುನೀಲ್ ಗಬ್ಬೂರ, ನಿಂಗಪ್ಪ ಹರಪನಹಳ್ಳಿ, ಪ್ರಮೋದ್ ಪಾಲ್ಕರ, ಮಂಜುಳಾ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು. ಸಾವಿರಾರು ಜನರು ನೊಂದಣಿ, ಮಾಹಿತಿ, ಚಿಕಿತ್ಸೆಗಳನ್ನು ಪಡೆದುಕೊಂಡರು. ಡಾ.ಎಸ್.ಎನ್. ಗಿಡ್ಡನವರ ಸ್ವಾಗತಿಸಿದರು.

Related posts

ಧಾರವಾಡದ ನಾಲ್ಕು ಪಿಎಚ್ಸಿ ವ್ಯಾಪ್ತಿಯಲ್ಲಿ ಶೇ.100ರಷ್ಟು ಕೋವಿಡ್ ಮೊದಲ ಡೋಸ್ ಲಸಿಕೆ

eNewsLand Team

ದೇಶಭಕ್ತರನ್ನು ಗೌರವಿಸಿ- ವದಂತಿಗಳನ್ನು ಹರಡದಿರಲು ಸಿಎಂ ಮನವಿ

eNEWS LAND Team

ಫ್ಯಾಷನ್‌ಯುಗ ಮಹಿಳೆಯರಿಗೆ ಪೂರಕ: ಭಾಗ್ಯಶ್ರೀ ಜಾಗೀರದಾರ

eNEWS LAND Team