ಮೇ 3, 2024
eNews Land
ಜನಪದ ಸುದ್ದಿ

ಅಣ್ಣಿಗೇರಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಪದಸ್ವೀಕಾರ ನಾಳೆ

ಇಎನ್ಎಲ್ ಅಣ್ಣಿಗೇರಿ: ಪಟ್ಟಣದ ಅಮೃತೇಶ್ವರ ದೇವಸ್ಥಾನದ ಬಯಲಿನಲ್ಲಿ 20ರಂದು ರವಿವಾರ ಸಂಜೆ 6ಗಂಟೆಗೆ ಕಸಾಪ ಪದಸ್ವೀಕಾರ ಸಮಾರಂಭ ಜರುಗಲಿದೆ. ದಿವ್ಯಸಾನಿಧ್ಯವನ್ನು ದಾಸೋಹಮಠದ ಶಿವಕುಮಾರಶ್ರೀ, ಹಾಗೂ ಸೀತಗಿರಿ ಸ.ಸ.ಡಾ.ಎ.ಸಿ.ವಾಲಿ ಮಹಾರಾಜರು ವಹಿಸಲಿದ್ದಾರೆ.
ಅಧ್ಯಕ್ಷತೆಯನ್ನು ಧಾ.ಜಿ. ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ ವಹಿಸಲಿದ್ದು, ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕಾರ್ಯಕ್ರಮದ ಉದ್ಘಾಟನೆ ನೇರವೆರಿಸುವರು. ಕೆ.ಎಸ್.ಕೌಜಲಗಿ ಪ್ರಮಾಣ ವಚನ ಭೋದಿಸುವರು. ನಿಕಟ ಪೂರ್ವ ಅಧ್ಯಕ್ಷ ಪ್ರಕಾಶ ಅಂಗಡಿ ಪರಿಷತ್ತಿನ ದ್ವಜ ಹಸ್ತಾಂತರ ಮಾಡುವರು. ಪದ್ಮಶ್ರೀ ಪುರಸ್ಕೃತ ಎ.ಆಯ್.ನಡಕಟ್ಟಿನ, ಜ್ಞಾನಪದ ಪ್ರಶಸ್ತಿ ಪುರಸ್ಕೃತ ಸುಭಾಸಚಂದ್ರ ಹೊಸಮನಿ, ಹಾಗೂ ದತ್ತಿ ದಾನಿಗಳಾದ ಡಾ.ದೀಪ್ತಿ ಸಂದೀಪ ಪಾಟೀಲ. ಶ್ರೀಶೈಲ ಮೂಲಿಮನಿ, ವಿ.ಎಮ್.ಹಿರೇಮಠ, ಅವರಿಗೆ ಸನ್ಮಾನ ಜರುಗಲಿದೆ.
ಮುಖ್ಯ ಅತಿಥಿಗಳಾಗಿ ಡಾ.ಜನದತ್ತ ಹಡಗಲಿ, ಡಾ.ಎಸ್.ಎಸ್.ದೊಡ್ಡಮನಿ, ಮಂಜುನಾಥ ಅಮಾಸಿ, ಕೆ.ಎಪ್.ಕಟಗಿ, ಎಲ್.ಕೆ.ಜ್ಯೂಲಿಕಟ್ಟಿ, ಷಣ್ಮುಖಪ್ಪ ಗುರಿಕಾರ,ಚಂಬಣ್ಣ ಹಾಳದೋಟರ, ಶಿವಯೋಗಿ ಸುರಕೋಡ, ಶಿವಶಂಕಲ ಕಲ್ಲೂರ. ಪ್ರೊ.ಎಸ್.ಎಸ್.ಹರ್ಲಾಪೂರ, ಡಾ.ರಮೇಶ ಅಂಗಡಿ, ಬಿ.ಎಸ್.ಮಾಯಾಚಾರಿ ಉಪಸ್ಥಿತರಿರುವರು. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಕನ್ನಡಾಭಿಮಾನಿಗಳು, ಸರ್ವ ಸದಸ್ಯರು, ಪದಾಧಿಕಾರಿಗಳು ವಿಶೇಷ ಅಹ್ವಾನಿತರು, ಸಲಹಾ ಸಮಿತಿ ಸದಸ್ಯರು, ಸರ್ವರೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಅಣ್ಣಿಗೇರಿ ಕಸಾಪ ಅಧ್ಯಕ್ಷ ರವಿರಾಜ ವೇರ್ಣೆಕರ ವಿನಂತಿಸಿದ್ದಾರೆ.

Related posts

ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥ ಮಾಡಬೇಡಿ: ಪ್ರಭುಲಿಂಗ ರಂಗಾಪುರ

eNEWS LAND Team

ಹುಡುಗಿಯರು ಸೀರೆ ಧರಿಸುವ ಮುನ್ನ ಈ ತಪ್ಪುಗಳನ್ನು ಮಾಡಬಾರದು !!

eNEWS LAND Team

ಚುನಾವಣಾ ಜಾಹಿರಾತು : ಪೂರ್ವಾನುಮತಿ ಕಡ್ಡಾಯ

eNEWS LAND Team