27.1 C
Hubli
ಮೇ 6, 2024
eNews Land
ರಾಜ್ಯ

ಕೆಸಿಡಿ ಆವರಣದಲ್ಲಿ ಕಣವಿ ಸಾರ್ವಜನಿಕ ದರ್ಶನಕ್ಕೆ ಜಿಲ್ಲಾಡಳಿತ ಸಿದ್ಧತೆ

ಇಎನ್ಎಲ್ ಧಾರವಾಡ: ಚಂಬೆಳಕಿನ ಕವಿ, ನಾಡೋಜ ಡಾ.ಚೆನ್ನವೀರ ಕಣವಿ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. ಇಂದು ಮಧ್ಯಾಹ್ನದಿಂದ ಡಾ.ಚೆನ್ನವೀರ ಕಣವಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಕೆಸಿಡಿ ಆವರಣದಲ್ಲಿ ಇರಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಳೆದ ಜನವರಿ 15 ರಿಂದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಾಗಿ ಡಾ.ಕಣವಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆರಂಭದಲ್ಲಿ ಕೋವಿಡ್ ಸೋಂಕು ತಗುಲಿದ್ದರಿಂದ ಚಿಕಿತ್ಸೆ ನೀಡಿ, ಗುಣಮುಖಗೊಳಿಸಲಾಗಿತ್ತು. ನಂತರ ಅವರು ವಯೊಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಜಿಲ್ಲಾಡಳಿತದಿಂದ ಅಗತ್ಯ ಚಿಕಿತ್ಸೆಗೆ ಕ್ರಮವಹಿಸಲಾಗಿತ್ತು. ಮಾನ್ಯ ಮುಖ್ಯಂತ್ರಿಗಳು ಸ್ವತಃ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದರು.

ಚಿಕಿತ್ಸೆ ಫಲಿಸದೆ ಡಾ.ಕಣವಿ ಅವರು ಇಂದು ಬೆಳಿಗ್ಗೆ ನಿಧನರಾದರು.

*ಕೆಸಿಡಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ:*
ಕವಿ ಡಾ.ಚೆನ್ನವೀರ ಕಣವಿ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ಕೆಸಿಡಿ ಆವರಣದಲ್ಲಿ ಜಿಲ್ಲಾಡಳಿತದಿಂದ ಸಿದ್ದತೆ ಮಾಡಲಾಗಿದೆ.

ಅಂತ್ಯಕ್ರಿಯೆ:
ನಾಡೋಜ ಡಾ.ಚನ್ನವೀರ ಕಣವಿ ಅವರ ಅಂತ್ಯಕ್ರಿಯೆ ಇಂದು ಸಂಜೆ ಕೆಲಗೇರಿ ಸಮೀಪದಲ್ಲಿರುವ ಅವರ ಫಾರ್ಮ್ ಹೌಸದಲ್ಲಿ ಜರುಗಿಸಲು ಅವರ ಕುಟುಂಬ ಸದಸ್ಯರು ನಿರ್ಧರಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಹುಬ್ಬಳ್ಳಿಯಲ್ಲಿ ನೆನಪಿರಲಿ ಖ್ಯಾತಿಯ ನಟ ಪ್ರೇಮ್ ಹೇಳಿಕೆ ಏನು?

eNEWS LAND Team

ಬೆಳಗಾವಿಯಲ್ಲಿ ಶಾಸಕರ ಭವನ ನಿರ್ಮಾಣ ಪ್ರಸ್ತಾಪ ಬಸವರಾಜ ಹೊರಟ್ಟಿ

eNEWS LAND Team

ತೋವಿವಿ; 11ನೇ ಘಟಿಕೋತ್ಸವ : ರೈತನ ಮಗಳು ಉಮ್ಮೆಸಾರಾ’ಗೆ 16 ಚಿನ್ನದ ಪದಕ

eNewsLand Team