35 C
Hubli
ಮಾರ್ಚ್ 28, 2023
eNews Land
ಸುದ್ದಿ

“ಅಟ್ರಾಸಿಟಿ” ಕಾನೂನು ದುರ್ಬಳಕೆ ವಿರೋಧಿಸಿ ಫೆ.18ಕ್ಕೆ ಪ್ರತಿಭಟನೆ: ಹುಣಸಿಮರದ

Listen to this article

ಇಎನ್ಎಲ್ ಕಲಘಟಗಿ: ಇತ್ತೀಚೆಗೆ “ಅಟ್ರಾಸಿಟಿ” ಕಾನೂನು ದುರ್ಬಳಕೆಯಾಗುತ್ತಿದೆ. ಇದನ್ನು ವಿರೋಧಿಸಿ ಫೆ.18 ಶುಕ್ರವಾರ ಶಾಂತಿಯುತ ಪ್ರತಿಭಟನೆ ಮಾಡೋಣ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಧಾರವಾಡ ಘಟಕದ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದರು.

ಸ್ಥಳೀಯ ಹನ್ನೆರಡುಮಠದ ಸಭಾಂಗಣದಲ್ಲಿ ಪೂರ್ವಭಾವಿ ಸಭೆಯನ್ನುದ್ದೇಶಿಸಿ, ಇತ್ತೀಚಿನ ದಿನಗಳಲ್ಲಿ “ಅಟ್ರಾಸಿಟಿ” ಕಾನೂನು ದುರ್ಬಳಕೆಯಾಗುತ್ತಿದೆ. ವೀರಶೈವ ಲಿಂಗಾಯತರ, ಸಭಾಪತಿಗಳ, ವೈದ್ಯರು, ನ್ಯಾಯಾಧೀಶರ, ಗಣ್ಯರ ಹಾಗೂ ಇನ್ನಿತರ ಅನೇಕ ಪಂಗಡಗಳ ಮೇಲೂ ದುರ್ಬಳಕೆಯಾಗುತ್ತಿದೆ. ಇದನ್ನು ವಿರೋಧಿಸಿ ಧಾರವಾಡದ ಕಡಪಾ ಮೈದಾನದಿಂದ ಜಿಲ್ಲಾಧಿಕಾರಿಗಳ ಕಛೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಇದು ದಲಿತ ಅಥವಾ ಯಾವುದೇ ಸಮಾಜದ ವಿರೋಧಿ ಪ್ರತಿಭಟನೆ ಅಲ್ಲ, ಕೇವಲ ಕಾನೂನು ದುರ್ಬಳಕೆ ವಿರುದ್ಧ ಅಷ್ಟೆ. ಇದರ ನೇತೃತ್ವವನ್ನು ರಾಜ್ಯಾಧ್ಯಕ್ಷ ಮಾಜಿ ಸಭಾಪತಿ ಎನ್.ತಿಪ್ಪಣ್ಣ ವಹಿಸಲಿದ್ದಾರೆ. ಆದ್ದರಿಂದ ತಾವೆಲ್ಲರೂ ಸಹಸ್ರ ಸಂಖ್ಯೆಯಲ್ಲಿ ಬರಲು ಕರೆ ಕೊಟ್ಟರು.
ಈ ಸಂದರ್ಭದಲ್ಲಿ ಐ.ಸಿ.ಗೋಕುಲ್, ಮಂಜುನಾಥ ಮುರಳ್ಳಿ, ನಿಂಗಪ್ಪ ಸುತಗಟ್ಟಿ, ಎಸ್.ವಿ.ತಡಸಮಠ, ಬಿ.ವೈ.ಪಾಟೀಲ್, ಮಹಾಂತೇಶ ಮಿರಾಸಿ, ಮಾತನಾಡಿದರು. ಯು.ಆರ್.ಪೀರಣ್ಣವರ, ಶಿವಪುತ್ರಯ್ಯ ತೇಗೂರಮಠ, ಸಿ.ಬಿ.ಹೊನ್ನಿಹಳ್ಳಿ, ಸಿದ್ದಣ್ಣ ಕುಂಬಾರ, ಗಂಗಾಧರ ಘಾಳಿ, ರುದ್ರಪ್ಪ ಟೊಂಗಳೆ ಮುಂತಾದವರು ಉಪಸ್ಥಿತರಿದ್ದರು.

Related posts

ವಿಧಾನ ಪರಿಷತ್ ಚುನಾವಣೆ; ಮಂದಗತಿಯ ಮತದಾನ

eNewsLand Team

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸದ ಚಿತ್ರಾವಳಿ

eNewsLand Team

ಶಾಂತಿ ಸುವ್ಯವಸ್ಥೆ ಕಾಪಾಡಲು ಸಿಎಂ  ಬೊಮ್ಮಾಯಿ ಹೇಳಿದ್ಯಾಕೆ ಗೊತ್ತಾ?

eNewsLand Team