39 C
Hubli
ಏಪ್ರಿಲ್ 29, 2024
eNews Land
ಜಿಲ್ಲೆ ರಾಜ್ಯ

ಹಿಜಾಬ್ ನಿರ್ಬಂಧ ಖಂಡಿಸಿ ಹುಬ್ಬಳ್ಳಿಯಲ್ಲಿ ಅಂಜುಮನ್ ಸಂಸ್ಥೆ ಬೃಹತ್ ಪ್ರತಿಭಟನೆ

ಇಎನ್ಎಲ್ ಧಾರವಾಡ: ಶಾಲಾ ಕಾಲೇಜುುಗಳಲ್ಲಿ ಹಿಜಾಬ್ ನಿರ್ಬಂಧ ಖಂಡಿಸಿ ಅಂಜುಮನ್ ಸಂಸ್ಥೆಯಿಂದ ಇಲ್ಲಿನ ತಹಸೀಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಯಿತು.

ಹಿಜಾಬ್ ಹಮಾರಾ ಹಕ್ ಹೈ‌ ಎಂದು ಘೋಷಣೆ ಕೂಗಿದ ಮುಸ್ಲಿಂ ಸಮುದಾಯದವರು ಈ ವಿವಾದವನ್ನು ಸರ್ಕಾರ ತಕ್ಷಣ ತಡೆಯಬೇಕಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಯಾವುದೇ ಭಯ ಇಲ್ಲದೆ ಶಾಲೆಗೆ‌ ಬರುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹಲವಾರು ವರ್ಷಗಳಿಂದ ಹಿಜಾಬ್ ಧರಿಸಿ ಹೆಣ್ಣು ಮಕ್ಕಳು ಶಾಲೆ ಕಾಲೇಜಿಗೆ ಬರುತ್ತಿದ್ದಾರೆ. ಇಷ್ಟು ವರ್ಷ ಇಲ್ಲದ ವಿವಾದ ಈಗ ಉಂಟಾಗಲು ಕಾರಣವೇನು? ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಸಲುವಾಗಿ ಈ ವಿವಾದ ಮೂಡಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಲೆಗಳಲ್ಲಿ ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ ಸೇರಿದಂತೆ ಗುಣಮಟ್ಟದ ಶಿಕ್ಷಣ ನೀಡುವ ಸಮಸ್ಯೆ ಇದೆ. ಇದನ್ನು ಬಗೆಹರಿಸಲು ಸರ್ಕಾರ ಮುಂದಾಗಬೇಕು. ಹಿಜಾಬ್ ವಿರೋಧಿಸಲು ಕೇಸರಿ ಶಾಲು ಧರಿಸಿ ಬರುವುದು, ಅದರಿಂದಾಗಿ ವಿದ್ಯಾರ್ಥಿಗಳ ಜೀವನ ಹಾಳಾಗುವುದು ಸರಿಯಲ್ಲ. ಎಲ್ಲರಿಗೂ ಅವರವರ ಧರ್ಮವನ್ನು ಪಾಲನೆ ಮಾಡಲು ಹಕ್ಕಿದೆ ಎಂದು ಹೇಳಿದರು.

ಅಂಜುಮನ್ ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಯೂಸುಫ್ ಸವಣೂರು, ಉಪಾಧ್ಯಕ್ಷ ಅಲ್ತಾಫ್ ಹಳ್, ಕಾಂಗ್ರೆಸ್ ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಕಿತ್ತೂರು ಸೇರಿದಂತೆ ಹಲವಾರು ಜನರಿದ್ದರು.

Related posts

ಲ್ಯಾಪ್‍ಟಾಪ್‍ ದೋಷ: ಸಿಕ್ತು ₹ 52 ಸಾವಿರ ಪರಿಹಾರ!!

eNewsLand Team

ನೈರುತ್ಯ ರೈಲ್ವೆ ಆಸ್ಪತ್ರೆಗಳಲ್ಲಿ  ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯ ಅನುಷ್ಠಾನ

eNEWS LAND Team

ಒಮಿಕ್ರೋನ್ ತಡೆಗೆ 16 ಸೂತ್ರ: ಸಿಎಂ ಬೊಮ್ಮಾಯಿ‌ ಹೇಳಿದ್ದೇನು ಗೊತ್ತಾ?

eNEWS LAND Team