37 C
Hubli
ಮೇ 5, 2024
eNews Land
ವಿದೇಶ ಸುದ್ದಿ

 ದ.ಆಫ್ರಿಕಾದ ಹೋರಾಟಗಾರ ಡೆಸ್ಮಂಡ್‌ ಟುಟು ನಿಧನ

ಇಎನ್ಎಲ್ ಡೆಸ್ಕ್; ದಕ್ಷಿಣ ಆಫ್ರಿಕಾದ ಧರ್ಮಗುರು, ವರ್ಣಭೇದ ನೀತಿ ವಿರೋಧಿ ಹೋರಾಟಗಾರ, ನೊಬೆಲ್‌ ಪುರಸ್ಕೃತ  ಡೆಸ್ಮಂಡ್‌ ಟುಟು (90) ಭಾನುವಾರ ಕೊನೆಯುಸಿರೆಳೆದಿದ್ದಾರೆ.
ಭಾನುವಾರ ಬೆಳಗಿನ ಜಾವ ಕೇಪ್‌ ಟೌನ್‌ನಲ್ಲಿ ಅವರು ಅಸುನೀಗಿದ್ದಾಗಿ ದ. ಆಫ್ರಿಕಾ ಅಧ್ಯಕ್ಷ ಸಿರಿಲ್‌ ರಾಮಫೋಸಾ ಪ್ರಕಟಿಸಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಕಪ್ಪು ವರ್ಣೀಯರ ವಿರುದ್ಧ ನಡೆಯುತ್ತಿದ್ದ ಅನ್ಯಾಯ ಮತ್ತು ಅಕ್ರಮಗಳ ವಿರುದ್ಧ ದನಿಯೆತ್ತಿ, ಅವರಿಗಾಗಿ ಹೋರಾಟ ನಡೆಸಿದ ಹೆಗ್ಗಳಿಕೆ ಅವರದ್ದು. ಅಹಿಂಸಾತ್ಮಕವಾಗಿಯೇ ಅಂಥ ಕಿರುಕುಳದ ವಿರುದ್ಧ ಹೋರಾಟ ನಡೆಸಿ ಗೆದ್ದಿದ್ದಾರೆ. ಇದರ ಜತೆಗೆ ತೃತೀಯ ಲಿಂಗಿಗಳ ಪರವಾಗಿ ಹೋರಾಟ ನಡೆಸಿದ್ದ ಅವರಿಗೆ 1984ರಲ್ಲಿ ನೊಬೆಲ್‌ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Related posts

ಅಣ್ಣಿಗೇರಿ ತಾಲೂಕಿನ ಜೈನ ಸಮಾಜ ಬಾಂಧವರಿಂದ ಜೈನಮುನಿ ಹತ್ಯೆ ಖಂಡಿಸಿ ಮೌನಪ್ರತಿಭಟನೆ

eNewsLand Team

ಕ್ರೆಡಿಟ್ ಕಾರ್ಡ್ ಲಿಮಿಟ್ ಹೆಚ್ಚಿಸ್ತೀವಿ ಎಂದು ಇದ್ದಿದ್ದು ಕಿತ್ಕೊಂಡ್ರು!

eNewsLand Team

ಒಮಿಕ್ರೋನ್ + ಡೆಲ್ಟಾ: ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ; ಸಿಎಂ

eNewsLand Team