25.1 C
Hubli
ಮೇ 5, 2024
eNews Land
ಆರೋಗ್ಯ ರಾಜ್ಯ ಸುದ್ದಿ

ಧಾರವಾಡಕ್ಕೂ ಒಕ್ಕರಿಸಿದ ಒಮಿಕ್ರಾನ್ ! ಡಿಸಿಯೇನೋ ಯಾರೂ ಹೆದ್ರಬೇಡಿ ಅಂತಿದಾರೆ..! ಆದ್ರೆ??

ಇಎನ್ಎಲ್ ಧಾರವಾಡ

ಧಾರವಾಡಕ್ಕೆ ಕೋವಿಡ್-19 ರೂಪಾಂತರಿ ಒಮಿಕ್ರಾನ್ ಕಾಲಿಟ್ಟಿದೆ. ಜಿಲ್ಲೆಯ 54 ವರ್ಷದ ಮಹಿಳೆಯಲ್ಲಿ ಓಮಿಕ್ರಾನ್ ಸೋಂಕು ದೃಢಪಟ್ಟಿದೆ.

ಸೋಂಕಿತ ಮಹಿಳೆಯು ಕಳೆದ ಡಿ.4 ರಂದು ಜ್ವರ ಲಕ್ಷಣ ಬಂದ ಹಿನ್ನೆಲೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿದ್ದರು. ಡಿಸೆಂಬರ್ 5ಕ್ಕೆ ಪಾಸಿಟಿವ್ ವರದಿ ಬಂದಿತ್ತು. ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ನಂತರ ಅವರ ಗಂಟಲು ದ್ರವವನ್ನು ಜಿನೋಮ ಸ್ವಿಕೆನ್ಸ್‍ಗೆ ಕಳುಹಿಸಲಾಗಿತ್ತು. ಈಗ ಅದು ಪಾಸಿಟಿವ್ ವರದಿ ಬಂದಿದೆ. ಆದರೆ ನಿಯಮಾನುಸಾರ ಎಲ್ಲ ಮುಂಜಾಗೃತೆ ವಹಿಸಿ ಸೋಂಕಿತ ಮಹಿಳೆಗೆ ಅಗತ್ಯ ಚಿಕಿತ್ಸೆ, ಔಷಧಿ ಮತ್ತು ಆರೋಗ್ಯ ಸಲಹೆ ನೀಡಿರುವುದರಿಂದ ಅವರು ಈಗ ಸಂಪೂರ್ಣ ಗುಣಮುಖರಾಗಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ನಿತೇಷ ಪಾಟೀಲ ಮಹಿಳೆ ಅಗತ್ಯ ಚಿಕಿತ್ಸೆ, ಔಷಧಿ ಪಡೆದುಕೊಂಡು ಸಂಪೂರ್ಣ ಗುಣಮುಖರಾಗಿದ್ದು, ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು‌ ಹೇಳಿದ್ದಾರೆ.

ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಪಾಸಿಟಿವ್ ಬಂದಿದ್ದ ಮಹಿಳೆಗೆ ಕಳೆದ 2 ದಿನಗಳಲ್ಲಿ 2 ಬಾರಿ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದು ಮತ್ತು ಇಂದು ಬೆಳಿಗ್ಗೆ ಒಂದು ನೆಗೆಟಿವ್ ವರದಿ ಬಂದಿವೆ. ಯಾವುದೇ ಆತಂಕಪಡುವ ಅಗತ್ಯವಿಲ್ಲ. ಮತ್ತು ಸೊಂಕಿತರ ಪ್ರಥಮ ಸಂಪರ್ಕದ 4 ಜನ ಹಾಗೂ ದ್ವಿತೀಯ ಸಂಪರ್ಕದ 133 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು ಎಲ್ಲರದ್ದು ನೆಗೆಟಿವ್ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸೋಂಕಿತ ಮಹಿಳೆಯ ವಾಸದ ಮನೆ ಹಾಗೂ ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳದಲ್ಲಿ ಅಗತ್ಯ ಮುಂಜಾಗೃತೆ ವಹಿಸಿ ಕ್ರಮ ಕೈಗೊಳ್ಳಲಾಗಿದೆ. ಮತ್ತು ಕಚೇರಿಗೆ ರಜೆ ನೀಡಲಾಗಿದೆ. ಸೋಂಕಿತ ಮಹಿಳೆಯು ಕೋವಿಡ್ ಮಾರ್ಗಸೂಚಿಗಳ ಪ್ರಕಾರ 10 ಮತ್ತು 7 ಸೇರಿ ಒಟ್ಟು 17 ದಿನ ಹೋಮ್ ಐಸೋಲೇಷನ್ ಆಗಿದ್ದು, ಇನ್ನು ಒಂದು ವಾರ ಹೋಂ ಐಸೋಲೇಷನ್‍ದಲ್ಲಿ ಇರುವಂತೆ ಸಲಹೆ ನೀಡಲಾಗಿದೆ.

ಸೋಂಕಿತ ಮಹಿಳೆ ಸಂಪೂರ್ಣ ಗುಣಮುಖ ಆಗಿರುವುದರಿಂದ ಸಾರ್ವಜನಿಕರು ಯಾವುದೇ ಭಯ, ಆತಂಕಗಳಿಗೆ ಒಳಗಾಗದೆ ಕೋವಿಡ್ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

Related posts

ಆಯುಷ್ ವಿವಿ ಸೇರಿ 8 ವಿಧೇಯಕ ಅಂಗೀಕಾರ

eNewsLand Team

ರಾಜ್ಯೋತ್ಸವಕ್ಕೆ ಸಿಎಂ ಬೊಮ್ಮಾಯಿ‌ ಚಾಲನೆ

eNEWS LAND Team

ಐಎಸ್ಎಲ್: ಇವತ್ತು ಎಟಿಕೆಎಂಬಿ V/S ಮುಂಬೈ

eNewsLand Team