32 C
Hubli
ಮೇ 7, 2024
eNews Land
ಸಣ್ಣ ಸುದ್ದಿ

ಮಳೆ ಹಾನಿ ಅಧ್ಯಯನ ತಂಡದ ಎದುರು ರೈತರು ಗರಂ!

ಇಎನ್ಎಲ್ ಹುಬ್ಬಳ್ಳಿ

ಮಳೆ ಹಾನಿ ಕುರಿತು ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರದ ಅಂತರ ಇಲಾಖಾ ಅಧಿಕಾರಿಗಳ ತಂಡ ಧಾರವಾಡ ಜಿಲ್ಲೆಗೆ ಆಗಮಿಸಿ ಪರಿಶೀಲನೆ ಕೈಗೊಂಡಿದೆ.

ಹುಬ್ಬಳ್ಳಿ ನಗರದ ಶಿವಗಂಗಾ ಲೇಔಟ್, ಬೃಂದಾವನ ಕಾಲೋನಿ ಬಳಿಕ ಕಿರೆಸೂರ, ಹೆಬಸೂರ ಮತ್ತು ಕರ್ಲವಾಡ ಗ್ರಾಮಕ್ಕೆ ಭೇಟಿ ನೀಡಿದರು.

ಈರುಳ್ಳಿ, ಮೆಣಸಿನಕಾಯಿ, ಹತ್ತಿ, ಕಡಲೆ ಹಾನಿ ಕುರಿತು ರೈತರು ತಂಡದ ಎದುರು ಅಳಲು ತೋಡಿಕೊಂಡರು‌.

ಕೇಂದ್ರ ಅಧ್ಯಯನ ತಂಡದ ಸದಸ್ಯ ಕೇಂದ್ರ ಸರ್ಕಾರದ ಜಲಶಕ್ತಿ ಮಂತ್ರಾಲಯದ ಗುರುಪ್ರಸಾದ ಜೆ., ಮತ್ತು ಕೇಂದ್ರ ಸರಕಾರದ ಹಣಕಾಸು ಮಂತ್ರಾಲಯದ ಮಹೇಶ ಕುಮಾರ ಅವರಿಗೆ ಜಿಲ್ಲೆಯ ಅತಿವೃಷ್ಠಿ
( ಮಳೆ ಹಾನಿ) ಹಾನಿ ಕುರಿತು ಜಿಲ್ಲಾಧಿಕಾರಿ ನಿತೇಶ ಪಾಟೀಲ ವಿವರಣೆ ನೀಡಿದರು.

ಬೆಳೆ ವಿಮೆಯನ್ನ ನಮಗೆ ಸರಿಯಾಗಿ ಜಮಾ ಅಗುತ್ತಿಲ್ಲ.
ಬೆಳೆ ವಿಮೆ ಹಣ ಇಂದಿಗೂ ಜಮಾ ಆಗಿಲ್ಲ ಎಂದು ರೈತರ ದೂರಿದರು. ಮಳೆಗೆ ಸಂಪೂರ್ಣ ಬೆಳೆ ಹಾಳಾಗಿದ್ದು ನಮಗೆ ಶೇಕಡಾ 100ರಷ್ಟು ಪರಿಹಾರ ನೀಡಿ. ಈಗ ಎನ್ ಡಿಆರ್ ಎಫ್ ಅಡಿ ನೀಡಲಾಗುತ್ತಿರುವ ಪರಿಹಾರ ಯಾವುದಕ್ಕೂ ಸಾಕಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

Related posts

ಮಸ್ಕಿ: ಬಸಾಪುರದಲ್ಲಿ ನರೇಗಾ ಕಾರ್ಯಾಗಾರ

eNEWS LAND Team

ಕ್ರಿಕೆಟ್ ಬೆಟ್ಟಿಂಗ್; ಇಬ್ಬರು ಗಡಿಪಾರು!!

eNEWS LAND Team

ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ ಆರಂಭ; ಉತ್ಸಾದಿಂದ ಸಂಖ್ಯೆಯಲ್ಲಿ ಆಗಮಿಸುತ್ತಿರುವ ಮತದಾರ

eNEWS LAND Team