23 C
Hubli
ಮೇ 3, 2024
eNews Land
ಸುದ್ದಿ

ಪುರಸಭೆ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳ ಟಿಕೇಟ ಆಕಾಂಕ್ಷೆಗೆ ಅಭ್ಯರ್ಥಿಗಳ ಪೈಪೋಟಿ

ಇಎನ್ಎಲ್ ಅಣ್ಣಿಗೇರಿ: ಪುರಸಭೆ ಚುನಾವಣೆ ಡಿ.27 ರಂದು ಮತದಾನ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಜೆಡಿಎಸ್.ಬಿಜೆಪಿ. ಅಮ್ ಆದ್ಮಿ ಪಕ್ಷಗಳಿಂದ ಟಿಕೇಟ್ ಪಡೆದು ಚುನಾವಣೆೆ ಅಖಾಡಕ್ಕೆ ಸ್ಪರ್ಧಿಸುವಲ್ಲಿ 23 ವಾರ್ಡ್ಗಳಲ್ಲಿ ಅಭ್ಯರ್ಥಿಗಳ ಪೈಪೋಟಿ ಭರದಿಂದ ಸಾಗಿದೆ.ಡಿ.30 ರಂದು ಮತ ಎಣಿಕೆಯಲ್ಲಿ ಮತದಾರರ ಒಲವು ಯಾವ ಪಕ್ಷಕ್ಕೆ ಜಯದ ಮಾಲೆ ಹಾಕಲಿದೆ ಎಂಬುದನ್ನು ಕಾಯ್ದು ನೋಡಬೇಕಿದೆ.

ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಡಿ.8 ರಿಂದ ಡಿ.15 ತನಕವಿದ್ದು. ಕಳೆದೆರಡು ದಿನಗಳಲ್ಲಿ ಒಬ್ಬರು ನಾಮಪತ್ರ ಸಲ್ಲಿಸಿಲ್ಲ.ಗೆಲುವಿನ ಅಭ್ಯರ್ಥಿಗಳಿಗೆ ಮಣಿಹಾಕುವಲ್ಲಿ ಪಕ್ಷಗಳ ಮುಖಂಡರು,ಪ್ರತಿ ವಾರ್ಡುಗಳಲ್ಲಿ ಸಭೆ, ಸಮುದಾಯದ ಮುಖಂಡರೊoದಿಗೆ ಚರ್ಚಿಸಿ,ಸೂಕ್ತ ಅಭ್ಯರ್ಥಿ ಗುರ್ತಿಸಿ, ಗೆಲುವಿಗೆ,ಸಂಘಟನೆ, ರಾಜಕೀಯ ರಣತಂತ್ರಗಾರಿಕೆ ರೂಪಿಸುತ್ತಿರೋದು ರಾಜಕೀಯ ತಿಕ್ಕಾಟಕ್ಕೆ ಎಡೆ ಮಾಡಿಕೊಟ್ಟಂತಿದೆ.
ಪ್ರತಿ ವಾರ್ಡ್ನಲ್ಲಿ ಪಕ್ಷದ ಬಿ-ಫಾರo ಪಡೆದು ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳು ಪೈಪೋಟಿ ನಡಿಸುತ್ತಿದ್ದು, ಪಕ್ಷದ ಟಿಕೇಟ್ ಕೈಜಾರಿದರೆ ಸಮುದಾಯದ ಪ್ರಭಲ ಅಭ್ಯರ್ಥಿಗಳು ಮತದಾರರ ಒಲವು ಗಳಿಸುವಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಲ್ಲಿ ತಿರ್ಮಾನ ಕೈಗೊಳ್ಳುವ ಚಿಂತನೆ ಮಾಡುತ್ತಿರೋದು ಕೆಲವು ವಾರ್ಡ್ಗಳಲ್ಲಿ ಕಂಡುಬರುತಿದೆ.
ಪುರಸಭೆ ಚುನಾವಣೆ ಆಡಳಿತ ಕಳೆದ ಸಲ ಜೆಡಿಎಸ್. ಪಾಲಾಗಿತ್ತು. ಅದಕ್ಕೂ ಮುನ್ನ ಕಾಂಗ್ರೆಸ್ ಪಕ್ಷದ ಆಡಳಿತವಿತ್ತು. ಸದ್ಯ ರಾಜ್ಯದಲ್ಲಿ ಬಿಜೆಪಿ ಪಕ್ಷ ಆಡಳಿತದಲ್ಲಿರುವುದರಿಂದ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಆಡಳಿತ ಚುಕ್ಕಾಣಿ ಹಿಡಿಯಬೇಕೆಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಷಣ್ಮುಖ ಗುರಿಕಾರ, ಚುನಾವಣೆ ಉಸ್ತವಾರಿ ಈರಣ್ಣ ಜಡಿ, ಬಸವರಾಜ ಯಳವತ್ತಿ, ಹಗಲಿರುಳು ಪ್ರತಿ ವಾರ್ಡಿನಲ್ಲಿ ಸಮದಾಯ ಜನರನ್ನು ಕ್ರೂಡೀಕರಿಸಿ, ಸಭೆ ನಡೆಸಿ, ಪಕ್ಷದ ಸಂಘಟನೆ, ಮೂಲಕ ಪಕ್ಷದ ಗೆಲವು ಸಾಧಿಸುವ ಸೂಕ್ತ ಅಭ್ಯರ್ಥಿ ಮಣಿಹಾಕುತಿರೋದು ಮೇಲ್ನೋಟಕ್ಕೆ ಕಾಣುತಿದೆ.

ಅಭಿಪ್ರಾಯ
ಪುರಸಭೆ ಚುನಾವಣೆ ಮಿಸಲಾತಿ ಪಟ್ಟಿಗೆ ಅನುಗುಣವಾಗಿ 23 ವಾರ್ಡುಗಳಿಗೆ ಸದ್ಯ 110 ಅಭ್ಯರ್ಥಿಗಳು ಪಕ್ಷದಿಂದ ಸ್ಪರ್ಧಿಸಲು ಅರ್ಜಿ ಮನವಿ ಸಲ್ಲಿಸಿದ್ದಾರೆ. ಸಚಿವರು, ಸಂಸದರಿoದ ಶಿಪಾರಸ್ಸು ಮಾಡುವುದರ ಜೊತೆಗೆ ಪೈಪೋಟಿ ನಡೆಸುತ್ತಿರೋದು ಪ್ರಬಲ ಜನಾಂಗ ಹೊಂದಿರುವ ಲಿಂಗಾಯತ,ಕುರುಬ, ವಾಲ್ಮೀಕಿ, ಪರಿಶಿಷ್ಟಪಂಗಡ, ಪರಿಶಿಷ್ಟ ಜಾತಿ, ಅಲ್ಪಸಂಖ್ಯಾತ,ಹಿoದುಳಿದ ವರ್ಗಗಳ ಮತಕೇತ್ರಗಳಲ್ಲಿ ಕಂಡುಬರುತಿದೆ.ಪುರಸಭೆಯ 23 ಸ್ಥಾನಗಳನ್ನು ಗೆಲ್ಲುವ ಆಕಾಂಕ್ಷೆ ಹೊಂದಿದ್ದು, ಗರಿಷ್ಟ 15 ರಿಂದ 16 ಸ್ಥಾನ ಗೆಲ್ಲುವ ಸಂಭವವಿದೆ. ಎಂದು ತಾಲೂಕ ಬಿಜೆಪಿ ಘಟಕ ಅಧ್ಯಕ್ಷ ಶಿವಾನಂದ ಹೊಸಳ್ಳಿ ಹೇಳಿದರು.

ಅಭಿಪ್ರಾಯ
ಕಾಂಗ್ರೆಸ್ ಪಕ್ಷದಿಂದ ಈವರೆಗೂ 50 ಅಭ್ಯರ್ಥಿಗಳು ಪಕ್ಷದಿಂದ ಅರ್ಜಿ ಪಡೆದು ಚುನಾವಣೆ ಸ್ಪರ್ಧಿಸುವಲ್ಲಿ ಮನವಿ ಸಲ್ಲಿಸಿದ್ದಾರೆ. ಸದ್ಯ ಪ್ರತಿವಾರ್ಡಿಗೆ 2 ರಿಂದ 3 ಅಭ್ಯರ್ಥಿಗಳು ಪಕ್ಷದ ಟಿಕೇಟಿನ ಆಕಾಂಕ್ಷಿಗಳಾಗಿದ್ದಾರೆ. ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತಕ್ಕೆ ತರುವಲ್ಲಿ ಸೂಕ್ತ ಅಭ್ಯರ್ಥಿ ಗುರ್ತಿಸಿ, ಚುನಾವಣೆ ಅಖಾಡಕ್ಕೆ ನಿಲ್ಲಿಸಿ, ಗೆಲವು ಸಾಧಿಸಲು ಸರ್ವ ಸಿದ್ದತೆಯಲ್ಲಿ ತೊಡಗಿವೆ. ಪ್ರತಿ ವಾರ್ಡಿನಲ್ಲಿ ಸಮುದಾಯದ ಎಲ್ಲಾ ಜನಾಂಗದ ಅಭ್ಯರ್ಥಿಗಳಿಗೆ ಪ್ರಾಶಸ್ತö್ಯ ನೀಡುವ ಮೂಲಕ 16 ರಿಂದ 18 ಸ್ಥಾನಗಳನ್ನು ಗೆಲ್ಲುವ ಸಂಭವವಿದೆ. ಎಂದು ತಾಲೂಕ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಂಜುನಾಥ ಮಾಯಣ್ಣವರ ಹೇಳಿದರು.

ಅಭಿಪ್ರಾಯ
ಜೆಡಿಎಸ್ ಪಕ್ಷದಿಂದ ಈವರೆಗೂ 36 ಅಭ್ಯರ್ಥಿಗಳು ಪಕ್ಷದಿಂದ ಅರ್ಜಿ ಪಡೆದು ಚುನಾವಣೆಗೆ ಸ್ಪರ್ಧಿಸುವಲ್ಲಿ ಮನವಿ ಸಲ್ಲಿಸಿದ್ದಾರೆ. ಸದ್ಯ ಪ್ರತಿವಾರ್ಡ್ಗೆ ಒಬ್ಬರಿಂದ ಇಬ್ಬರು ಅಭ್ಯರ್ಥಿಗಳು ಪಕ್ಷದ ಟಕೇಟಿನ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್ ಪಕ್ಷದ ಮಾಜಿ ಶಾಸಕರಾದ ಎನ್.ಎಚ್.ಕೋನರಡ್ಡಿ ಪಟ್ಟಣದ ಅಭಿವೃದ್ದಿಗೆ, ಕೈಗೊಂಡ ಜನಪರ ಕಾರ್ಯಕ್ರಮಗಳು ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಗೆಲವುಗೆ ವರದಾನವಾಗಬಹುದು. .ಜೆಡಿಎಸ್ ಪಕ್ಷದಿಂದ 16 ರಿಂದ 18 ಸ್ಥಾನಗಳ ಗೆಲವು ಗಿಟ್ಟಿಸುವಲ್ಲಿ ಯಶಸ್ವಿ ಯಾಗುತ್ತೇವೆಂದು ತಾಲೂಕ ಜೆಡಿಎಸ್. ಅಧ್ಯಕ್ಷ ಪ್ರದೀಪ ಲೆಂಕಿನಗೌಡ್ರ ಹೇಳಿದರು.

ಅಭಿಪ್ರಾಯ
ಅಮ್ ಆದ್ಮಿ ಪಕ್ಷವು ಪುರಸಭೆ ಚುನಾವಣೆಗೆ 23 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ನಿಲ್ಲಿಸುವಲ್ಲಿ ತಿರ್ಮಾನ ಕೈಗೊಂಡಿದೆ. ಜನಬೆಂಬಲವಿರುವ ಅಭ್ಯರ್ಥಿಗಳಿಗೆ ಟಿಕೇಟ್ ನೀಡಿ, 5 ಸ್ಥಾನ ಪಡೆದು ಪುರಸಭೆಯಲ್ಲಿ ಖಾತೆ ತೆರೆಯುವಲ್ಲಿ ಪ್ರಯತ್ನಿಸಲಾಗುವುದು.ಪಕ್ಷದ ಸಿದ್ದಾಂತ, ಭ್ರಷ್ಟಾಚಾರ ಮುಕ್ತ, ದೆಹಲಿ ಮಾದರಿ ಆಡಳಿತ ಪಟ್ಟಣದ ಪುರಸಭೆ ಆಡಳಿತಕ್ಕೆ ತರುವ ಸೂಕ್ತ ಅಭ್ಯರ್ಥಿಗಳಿಗೆ ಟಕೇಟ್ ನೀಡಲಾಗುವುದು. ಈವರೆಗೆ 9 ಅಭ್ಯರ್ಥಿಗಳು ಪಕ್ಷದ ಟಿಕೇಟ್ ಆಕಾಂಕ್ಷಿಗಳಿಗೆ ಮನವಿ ಸಲ್ಲಿಸಿದ್ದಾರೆಂದು ತಾಲೂಕ ಅಮ್ ಆದ್ಮಿ ಪಕ್ಷದ ಅಧ್ಯಕ್ಷ ಅಡಿವೆಪ್ಪ ಸೈದಾಪೂರ ಹೇಳಿದರು.

Related posts

ಅಣ್ಣಿಗೇರಿ: ಇಸ್ರೋ ವಿಜ್ಞಾನಿ ಆರ್.ವಿ.ನಾಡಗೌಡರಿಂದ ವಿದ್ಯಾರ್ಥಿಗಳ ಜೊತೆ ಸಂವಾದ

eNEWS LAND Team

ವಿದ್ಯಾರ್ಥಿಗಳ ಯಶಸ್ವಿಗೆ ಪ್ರೋತ್ಸಾಹ ಅವಶ್ಯಕ: ಡಾ.ಮೋಹನ ಅಣ್ಣಿಗೇರಿ

eNEWS LAND Team

EXTENSION OF PERIODICITY OF TRAINS

eNEWS LAND Team