36 C
Hubli
ಮೇ 2, 2024
eNews Land
ಸುದ್ದಿ

ವಿದ್ಯಾರ್ಥಿಗಳ ಯಶಸ್ವಿಗೆ ಪ್ರೋತ್ಸಾಹ ಅವಶ್ಯಕ: ಡಾ.ಮೋಹನ ಅಣ್ಣಿಗೇರಿ

ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ಗೋಳು ಕೇಳುವರ‍್ಯಾರು?

 

ಇದನ್ನು ಓದಿ:ಜನಪದ ಕಲೆ ಆಧುನಿಕ ಕಲೆಗಳಿಗೆ ತಾಯಿಬೇರು: ವಿಜಯಶ್ರೀ ಹಿರೇಮಠ

ಇಎನ್‌ಎಲ್‌ ಅಣ್ಣಿಗೇರಿ: ವಿದ್ಯಾರ್ಥಿಗಳ ಯಶಸ್ಸಿಗೆ ಪ್ರೋತ್ಸಾಹ ಅವಶ್ಯಕ. ತಂದೆ-ತಾಯಿ, ಶಿಕ್ಷಕವೃoದ, ಹಿತೈಷಿಗಳು ಪ್ರೋತ್ಸಾಹ ದೊರೆತರೆ ವಿದ್ಯಾರ್ಥಿಗಳು ಯಶಸ್ಸಿನ ಗುರಿ ಮುಟ್ಟಲು ಸಾಧ್ಯವೆಂದು ಡಾ.ಮೋಹನ ಎಸ್.ಅಣ್ಣಿಗೇರಿ ಹೇಳಿದರು.

ಇದನ್ನು ಓದಿಸಾಹಿತಿ ಅಮೃತೇಶ್ವರ ತಂಡರಗೆ ಮಕ್ಕಳ ಮಾಣಿಕ್ಯ ಪ್ರಶಸ್ತಿ
ಪಟ್ಟಣದ ಎಂ.ಬಿ.ಹಳ್ಳಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಮರ್ಸ ವಿಭಾಗದಿಂದ ಆಯೋಜಿಸಿದ ಜೆನ್ ಫೆಸ್ಟ್-2023 ಕಾರ್ಯಕ್ರಮ ಉದ್ಘಾಟಿಸಿ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ನಂತರ ಮಾತನಾಡಿ,ವಿದ್ಯಾರ್ಥಿಗಳು ತಮ್ಮಲ್ಲಿಡಗಿರುವ ಅಭಿರುಚಿ ಪ್ರತಿಭೆ ಹೊರ ಚಿಮ್ಮಿದಾಗ ಮಾತ್ರ ಉತ್ತಮ ಮಾರ್ಗದರ್ಶಕರು ಸಿಗಲು ಸಾಧ್ಯ. ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನದ ತಂತ್ರಗಳನ್ನು ಅರಿತರೇ ಸಮಾಜದಲ್ಲಿ ಉನ್ನತ ಸ್ಥಾನಮಾನಗಳಿಸಲು ಸಾಧ್ಯವೆಂದು ಸಲಹೆ ನೀಡಿದರು.
ಪ್ರಾಂಶುಪಾಲರಾದ ಡಾ.ಮೋತಿಲಾಲ್ ರಾಠೋಡ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಧೈರ್ಯ,ಶೌರ್ಯ,ಸಾಹಸ, ದೈವ ಸಂಕಲ್ಪ, ಜೊತೆಗೆ ಸಾಧಿಸುವ ಛಲ, ಧೃಡಸಂಕಲ್ಪ, ಪರಿಶ್ರಮದ ಸಾಧನೆಯಿದ್ದಾಗ ಮಾತ್ರ ಯಶಸ್ಸಿನ ಸಾಧಕರಾಗಲು ಸಾಧ್ಯ. ವ್ಯಕ್ತಿಯ ವಿಚಾರಧಾರೆ ಅವರ ಭವಿಷ್ಯ ನಿರ್ಧರಿಸುವ ಮಾನದಂಡವಾಗಿದೆ. ವಿದ್ಯಾರ್ಥಿಗಳು ಹುಟ್ಟಿ ಬೆಳೆದ ಸಂಸ್ಕಾರ, ಸಹವಾಸ, ಪರಿಸರ, ಭಾವೀ ವ್ಯಕ್ತಿತ್ವ ನಿರ್ಮಾಣದಲ್ಲಿ ಪರೋಕ್ಷ ಪಾತ್ರವಹಿಸುವ ಮೂಲಕ ಜೀವನದ ಸಫಲತೆ ವಿಫಲತೆಗೆ ಕಾರಣವಾಗುತ್ತದೆಂದು ಹೇಳಿದರು.

ಇದನ್ನು ಓದಿCANCELLATION, PARTIAL CANCELLATION, DIVERSION, RESCHEDULING AND REGULATION OF TRAINS / ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ
ಕಾಮರ್ಸ್ ವಿಭಾಗದ ಮುಖಸ್ಥೆ ಶೋಭಾ ಎನ್. ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಐ.ಕ್ಯೂ.ಎ.ಸಿ. ಸಂಯೋಜಕಿ ಡಾ.ವಿದ್ಯಾ ಹಡಗಲಿ, ಕನ್ನಡ ವಿಭಾಗದ ಮುಖ್ಯಸ್ಶ ಅಣ್ಣಪ್ಪ ರೊಟ್ಟಿಗ್ವಾಡ. ಉಪನ್ಯಾಸಕ ಡಾ.ಕಿರಣಕುಮಾರ ರಾಯರ್. ರಾಜ್ಯಶಾಸ್ತ್ರ ವಿಭಾಗ ಮುಖಸ್ಥೆ ಭಾರತಿ ಮಣ್ಣೂರ. ಕಾಮರ್ಸ್ ವಿಭಾಗ ಪ್ರಾಧ್ಯಾಪಕ ಫಕ್ಕೀರಪ್ಪ ಆನಿ. ಗ್ರಂಥಪಾಲಕ ಶೀಧರ ಲೋಣಕರ, ಅಧ್ಯಾಪಕರ ವೃಂದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ದೀಪಾ ಇಸರಿ ಪ್ರಾರ್ಥಿಸಿದರು. ಜ್ಯೋತಿ ಹುಬ್ಬಳ್ಳಿ ಸ್ವಾಗತಿಸಿದರು. ವಿಜಯಲಕ್ಷ್ಮೀ ಶಾನಭೋಗರ ನಿರೂಪಿಸಿದರು. ಶಮಿಶಾಬೇಗಂ ಸುರಣಗಿ ವಂದಿಸಿದರು.

ಇದನ್ನು ಓದಿಪೌರಸೇವಾ ನೌಕರರ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

 

Related posts

ಧಾರವಾಡ ಜಿಲ್ಲೆಯಾದ್ಯಂತ ಮಳೆ ಶಾಲೆ,ಕಾಲೇಜುಗಳಿಗೆ ಇಂದು ರಜೆ

eNewsLand Team

ಹುಬ್ಬಳ್ಳಿಯಲ್ಲಿ ಹರಿದ ನೆತ್ತರು! ಇಬ್ಬರಿಗೆ‌ ಚಾಕು ಇರಿತ, ಪೊಲೀಸ್ ಬೇಟೆ ಶುರು!!

eNewsLand Team

ಸೂಫಿ ಸಂತರು ಶಿರಸಂಗಿ ಲಿಂಗರಾಜರ ಅಭಿನವ ಸಂಬಂಧಕ್ಕೆ ಸಾಕ್ಷಿಯಾಗಿದೆ:ಬಸವಲಿಂಗ ಶ್ರೀಗಳು.

eNEWS LAND Team