ಮೇ 3, 2024
eNews Land
ಸುದ್ದಿ

ಅಣ್ಣಿಗೇರಿ: ಇಸ್ರೋ ವಿಜ್ಞಾನಿ ಆರ್.ವಿ.ನಾಡಗೌಡರಿಂದ ವಿದ್ಯಾರ್ಥಿಗಳ ಜೊತೆ ಸಂವಾದ

ಇಎನ್‌ಎಲ್ ಅಣ್ಣಿಗೇರಿ: ಅಣ್ಣಿಗೇರಿ ಪಟ್ಟಣದ ಅಮೃತೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜ ಹಾಗೂ ನಿಜಲಿಂಗಪ್ಪ ಶಿವಪ್ಪ ಹುಬ್ಬಳ್ಳಿ ಬಾಲಕಿಯರ ಪ್ರೌಢಶಾಲೆ ಆಶ್ರಯದಲ್ಲಿ ಜರುಗಿದ ವಿದ್ಯಾರ್ಥಿಗಳೊಂದಿಗೆ ಇಸ್ರೋ ವಿಜ್ಞಾನಿಗಳ ಸಂವಾದ. ಚಂದ್ರಯಾನ-1 ಹಾಗೂ ಚಂದ್ರಯಾನ-2 ಚಂದ್ರನ ಮೇಲೆ ಅಪ್ಪಳಿಸಿ ಅಲ್ಲಿ ಭಾರತದ ಹೆಗ್ಗುರುತು ಮಾಡುವುದಾಗಿತ್ತು. ಚಂದ್ರಯಾನ-2 ವಿಫಲವಾಗಲು ಕೆಲ ತಾಂತ್ರಿಕ ತೊಂದರೆಗಳು ಕಾರಣ, ಚಂದ್ರಯಾನ-3 ಚಂದ್ರನ ಮೇಲೆ ವಿಕ್ರಮ ಲ್ಯಾಂಡರ್ ನಿಧಾನವಾಗಿ ಇಳಿಸಿ ಚಂದ್ರನ ಮೇಲೆ ಅಧ್ಯಯನದ ಗುರಿ ಹೊಂದಲಾಗಿತ್ತು. ಚಂದ್ರನ ದಕ್ಷಿಣ ಧ್ರುವದ ಮೇಲೆ ವಿಕ್ರಮಲ್ಯಾಂಡರ್ ಇಳಿಸಿದ ಮೊದಲ ದೇಶ ಭಾರತ. ಚಂದ್ರಯಾನ ಕೈಗೊಂಡ ಜಗತ್ತಿನ ನಾಲ್ಕನೆಯ ದೇಶ. ಎಪ್ಪತ್ತರ ದಶಕದಲ್ಲಿ ಮೊಟ್ಟ ಮೊದಲಿಗೆ ರಷ್ಯಾ ಮತ್ತು ಅಮೇರಿಕಾ ಚಂದ್ರಯಾನ ಕೈಗೊಂಡು ನಿರೀಕ್ಷಿತ ಯಶಸ್ಸು ಸಿಗದೇ ಸ್ಥಗಿತಗೊಂಡಿದ್ದವು. ಆದರೆ ಚಂದ್ರಯಾನದoತಹj ಯೋಜನೆಯಲ್ಲಿ ಭಾರತದ ಯಶಸ್ಸಿನ ಪ್ರಮಾಣ ಅಧಿಕ ಎಂದು ಹೆಮ್ಮೆಯಿಂದ ಹೇಳಬಹುದು. ಚಂದ್ರಯಾನ 140 ಕೋಟಿ ಜನರ ಆಶಯದ ಪ್ರತೀಕ. ಇದರಿಂದ ವಿಜ್ಞಾನಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಎಂದು ಚಂದ್ರಯಾನ-3 ರ ಯಶಸ್ವಿನ ಹಿಂದಿರುವ ಇಸ್ರೋದ ವಿಜ್ಞಾನಿಯಾದ ರಾಮನಗೌಡ ವೆಂಕನಗೌಡ6 ನಾಡಗೌಡರ ಹೇಳಿದರು.

ಅಣ್ಣಿಗೇರಿ ಶಿಕ್ಷಣ ಸಂಸ್ಥೆಯ ಅಮೃತೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜ ಹಾಗೂ ನಿಜಲಿಂಗಪ್ಪ ಶಿವಪ್ಪ ಹುಬ್ಬಳ್ಳಿ ಬಾಲಕಿಯರ ಪ್ರೌಢಶಾಲೆ ಆಶ್ರಯದಲ್ಲಿ ಜರುಗಿದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ

‌ವಿದ್ಯಾರ್ಥಿನಿ ಕಾವ್ಯಾ ಹವಾಲ್ದಾರ
ಚಂದ್ರಯಾನ ನೌಕೆ ತನ್ನ ಕಾರ್ಯ ಮುಗಿಸಿ ಮತ್ತೆ ಭೂಮಿಗೆ ಮರುಳುವುದೆ?
ಚಂದ್ರ ಮತ್ತು ಭೂಮಿಯ ನಡುವೆ ಕಾಲಮಾನ ೧೪ ದಿನಗಳ ವ್ಯತ್ಯಾಸವಿದೆ. ಚಂದ್ರಯಾನ ನೌಕೆ ಈಗ . ಅದು ಎಚ್ಚರಗೊಂಡ ನಂತರ ಅದರಲ್ಲಿರುವ ಇಂಧನದ ಮೇಲೆ ಅದು ಅವಲಂಬಿತವಾಗಿರುತ್ತದೆ.

‌ವಿದ್ಯಾರ್ಥಿನಿ ಯಶೋಧಾ ತಹಶೀಲ್ದಾರ
ವಿಕ್ರಮಲ್ಯಾoಡರ್ ನಿಯಂತ್ರಣ ಭೂಮಿಯಿಂದ ಹೇಗೆ ಸಾಧ್ಯ?
ಸೂಕ್ಷ್ಮ ತರಂಗಗಳ ಮೂಲಕ ನಿಯಂತ್ರಣ ಸಾಧ್ಯ.

ಚಂದ್ರಯಾನ-2 ಇದರ ವೆಚ್ಚ 600 ಕೋಟಿ ಆದರೆ ಚಂದ್ರಯಾನದ ವೆಚ್ಚ ಅದಕ್ಕಿಂತಲೂ ತುಂಬಾ ಕಡಿಮೆಇದೆ.ಇದು ಹೇಗೆ?
ಚಂದ್ರಯಾನ-2 ರ ನೌಕೆ ಹಾಗೆಯೇ ಇತ್ತು. ಅದನ್ನು ಬಳಿಸಿ ಕಡಿಮೆ ಖರ್ಚಿನಲ್ಲಿ ಚಂದ್ರಯಾನ-2 ಯಶಸ್ವಿಗೊಳಿಸಲಾಯಿತು.

‌ವಿದ್ಯಾರ್ಥಿ ಪ್ರಸನ್ನ ಇಂಗಳಹಳ್ಳಿ
ಚಂದ್ರನ ಮೇಲಿರುವ ಮಣ್ಣಿಗೂ ಭೂಮಿಯ ಮೇಲಿರುವ ಮಣ್ಣಿಗೂ ಇರುವ ವ್ಯತ್ಯಾಸವೇನು?
ಚoದ್ರನ ಮೇಲಿರುವ ಮಣ್ಣು ಲೂಸ್ ಸ್ವಾಯಿಲ್

‌ವಿದ್ಯಾರ್ಥಿನಿ ಶಂಕ್ರಮ್ಮ ಹೊಸಮನಿ
ಚಂದ್ರನ ಮೇಲೆ ಎಲಿಯನ್ಸ್ ಇವೆಯೆ?
ಇಲ್ಲ. ಯಾಕೆಂದರೆ ಅಲ್ಲಿ ಜೀವಿಗಳಿಗೆ ಬೇಕಾದ ವಾತಾವರಣ ಇಲ್ಲ.

ಉಪಗ್ರಹ ಉಡಾವಣೆಯಿಂದ ಇಂಗಾಲದ ಡೈ ಆಕ್ಸೈಡ ಬಿಡುಗಡೆಯಾಗಿ ಪರಿಸರ ಕೆಡುತ್ತದೆ. ಕಾರಣ ಉಪಗ್ರಹ ಉಡಾವಣೆಯಲ್ಲಿ ಇಂಧನದ ಬದಲಾಗಿ ವಿದ್ಯುತ್ ಎಕೆ ಬಳಿಸಬಾರದು?
ಬಳಸಬಹುದು, ಆದರೆ ವಿದ್ಯುತ್ತಿನ ಶಕ್ತಿ ಸಾಕಾಗದು. ಕಾರಣ ಉಪಗ್ರಹ ಚಂದ್ರನನ್ನು ತಲುಪಲು ಹೆಚ್ಚು ಕಾಲಾವಕಾಶ ಬೇಕಾಗುತ್ತದೆ.

‌ವಿದ್ಯಾರ್ಥಿನಿ ಕುಮಾರಿ ಮಾಯಣ್ಣವರ
ನಿಮ್ಮ ಮುಂದಿನ ಯೋಜನೆ ಎನು?
ಮಾನವನನ್ನು ಚಂದ್ರನ ಮೇಲೆ ಕಳಿಸುವುದು. ಅಲ್ಲಿಯ ಖನಿಜಾಂಶಗಳನ್ನು ಸಂಗ್ರಹಿಸಿ ಅಧ್ಯಾಯನ ಮಾಡುವುದು.

‌ಚಂದ್ರನ ಮೇಲೆ ಯಾವ ಖನೀಜ ಹೇರಳವಾಗಿದೆ?
ಹೀಲಿಯಂ ಹೇರಳವಾಗಿದೆ ಎಂದು ತಿಳಿದು ಬಂದಿದೆ.

ಶಿಕ್ಷಣ ಸಂಸ್ಥೆ ಚೇರಮನ್ ಆರ್.ಎ.ದೇಸಾಯಿ ಅವರು ಇಸ್ರೋ ವಿಜ್ಞಾನಿ ಆರ್.ವಿ.ನಾಡಗೌಡರ ಅವರನ್ನು ಸನ್ಮಾನಿಸಿದರು. ಪ್ರಧಾನ ಗುರುಗಳಾದ ಎನ್.ಎಸ್.ಮೇಲ್ಮುರಿ ಸ್ವಾಗತಸಿ, ಅಧ್ಯಕ್ಷತೆಯನ್ನು ರಮೇಶ ಜಂಗಲ ವಹಿಸಿ, ಯು.ಎಸ್.ಗೌಡರ್ ಪರಿಚಯ ಭಾಷಣ ಮಾಡಿ, ಜಿ.ವಾಯ್ ಕೊರವರ ನಿರೂಪಿಸಿ, ವರುಣಾ ಬೆಟದೂರ ಸಂಗಡಿಗರು ಪ್ರಾರ್ಥಿಸಿದರು. ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗ, ಸೇರಿದಂತೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Related posts

ಐಪಿಎಲ್; ಚೆನ್ನೈ ಮಣಿಸಿ ಸೇಡು ತೀರಿಸಿಕೊಂಡ ಕೊಲ್ಕತ್ತಾ

eNewsLand Team

EXPERIMENTAL STOPPAGES OF TRAINS AT BOBBILI STATION ಬೊಬ್ಬಿಲಿ ನಿಲ್ದಾಣದಲ್ಲಿ ರೈಲುಗಳ ಪ್ರಾಯೋಗಿಕ ನಿಲುಗಡೆಗಳು

eNEWS LAND Team

ಸರ್ಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಶ: ಶಾಸಕ ಪ್ರಸಾದ ಅಬ್ಬಯ್ಯ “ಸನ್ಮಾನದ ಹಾರ ತುರಾಯಿಗಳ ಬದಲು, ಶೈಕ್ಷಣಿಕ ಸಾಮಗ್ರಿಗಳ ದೇಣಿಗೆ ನೀಡಿ”

eNEWS LAND Team