30 C
Hubli
ಮೇ 6, 2024
eNews Land
ರಾಜಕೀಯ

ಪಕ್ಷೇತರವಾಗಿ ನಿಂತ್ರು ನವಲಗುಂದದಲ್ಲಿ ಗೆಲ್ಲುತ್ತೇನೆ; ಇನ್ ಡೈರೆಕ್ಟ್ ಆಗಿ ತೆನೆ ಹೊರುವ ಅಗತ್ಯ ನನಗಿಲ್ಲ ಎಂದರಾ ಕೋನರಡ್ಡಿ?!!

ಇಎನ್ಎಲ್ ಧಾರವಾಡ: ವಿಧಾನಪರಿಷತ್ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಬೆಂಬಲಿಸುತ್ತಿದ್ದೇನೆ‌ ಎಂದ ಜೆಡಿಎಸ್ ಮಾಜಿ ಶಾಸಕ ಎನ್ ಹೆಚ್ ಕೋನರಡ್ಡಿ, ನಾನು ಪಕ್ಷೇತರವಾಗಿ ನಿಂತರೂ ನವಲಗುಂದದಲ್ಲಿ ಗೆಲ್ಲುತ್ತೇನೆ ಎನ್ನುವ ಮೂಲಕ ಪರೋಕ್ಷವಾಗಿ ಜೆಡಿಎಸ್ ಅಗತ್ಯ ನನಗಿಲ್ಲ ಎಂದು ಹೇಳಿದ್ದಾರೆ.

ಬುಧವಾರ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಸಲೀಂ ಅಹ್ಮದ್ ಪರ ಪ್ರಚಾರ ಮಾಡುತ್ತಿದ್ದೇನೆ. ಮುಂದಿನ ನಿರ್ಧಾರವನ್ನು ಎರಡೂ ತಿಂಗಳ‌ ನಂತರ ತಿಳಿಸಿಸುತ್ತೇನೆ ಎಂದರು.

ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕ್ಷೇತ್ರದ ಜನತೆಯ ಜೊತೆ ಮಾತನಾಡಿ ನಿರ್ಧರಿಸುತ್ತೇನೆ. ನಮ್ಮ ನಾಯಕರಾದ ದೇವೆಗೌಡ್ರು,ಹೆಚ್.ಡಿ.ಕೆ. ಸಿದ್ದರಾಮಯ್ಯ, ಡಿಕೆಶಿ ಜೊತೆ ಚರ್ಚಿಸಿ ನಿರ್ಧರಿಸುತ್ತೇನೆ ಎಂದರು.

ನಾನು ಪಕ್ಷೇತರವಾಗಿ ನಿಂತ್ರು ನವಲಗುಂದದಲ್ಲಿ ಗೆಲ್ಲುತ್ತೇನೆ. ಆದರೆ ಸದ್ಯ ನಾನು ರೈತರ ಪರ ಹೋರಾಟ ಅಷ್ಟೆ ನನ್ನ ಗುರಿ‌ ಎಂದು ಹೇಳಿದರು.
ಸಿಎಂ ಬೊಮ್ಮಾಯಿ ಈ ಅಧಿವೇಶನದಲ್ಲಿ ಮಹದಾಯಿ ಯೋಜನೆ ಕಾಮಗಾರಿ ಘೋಷಣೆ ಮಾಡಲಿ.

ರೈತರು ಬೆಳೆ ವಿಮೆ ಬಗ್ಗೆ ಸಾಕ್ಷಷ್ಟು ತೊಂದರೆ ಅನುಭವಿಸಿದ್ದಾರೆ. ಆ ಬಗ್ಗೆ ಹೋರಾಟ ಮಾಡುತ್ತೇವೆ.
ಶೀಘ್ರದಲ್ಲೆ ಹುಬ್ಬಳ್ಳಿಯಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿಯವರೆಗ ಪಾದಯಾತ್ರೆ ಮಾಡಿ ಸರ್ಕಾರವನ್ನು ಎಚ್ಚರಿಸುವ‌ ಕೆಲಸ ಮಾಡುತ್ತೇವೆ ಎಂದರು.

ವಿಮೆ ಸ್ಕ್ಯಾಮ್ ಬಗ್ಗೆ ದೂರು ನೀಡಿದರೂ
ಪೊಲೀಸರು ಕ್ರಮ ಕೈಗೊಂಡಿಲ್ಲ. ಹೀಗಾಗಿ ಪಾದಯಾತ್ರೆ ಮಾಡುತ್ತೇವೆ ‌ಬೆಳಗಾವಿಯ ಅಧಿವೇಶನ ಸಮಯದಲ್ಲಿ ಪಾದಯಾತ್ರೆ ನಡೆಸುವುದಾಗಿ ತಿಳಿಸಿದರು‌.

Related posts

ಬಿಜೆಪಿ ಜನಸ್ವರಾಜ್ ಯಾತ್ರೆಗೆ ಚಾಲನೆ: ಮುಖ್ಯಮಂತ್ರಿ ಬೊಮ್ಮಾಯಿ

eNewsLand Team

ಲೋಕಸಭೆ ಚುನಾವಣೆಗೆ ಪೂರಕವಾಗಿ ರಾಜ್ಯದಲ್ಲಿ ಬಿಜೆಪಿಗೆ ಜನಾದೇಶ: ಡಾ.ಕೆ.ಸುಧಾಕರ್

eNEWS LAND Team

ರಾಜ್ಯಕ್ಕೆ ಶಾ; ಸಾರ್ವತ್ರಿಕ ಚುನಾವಣೆ ತಯಾರಿಗೆ‌ ಅಡಿಗಲ್ಲು? ಕೋರ್ ಕಮೀಟಿ ಸಭೆ ಸೆಂಟರ್ ಆಫ್ ಎಟ್ರಾಕ್ಷನ್!! 

eNewsLand Team