ಇಎನ್ಎಲ್ ಡೆಸ್ಕ್
ಚೆನ್ನೈ: ತಮಿಳುನಾಡಿನ ಕುನೂರಿನಲ್ಲಿ ಸೇನಾ ಹೆಲಿಕಾಪ್ಟರ್ MI17-V5 ಪತನಗೊಂಡಿದ್ದು, ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸ್ಥಿತಿ ಗಂಭೀರವಾಗಿದ್ದು, ಕೊಯಿಮತ್ತೂರು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈವರೆಗೆ 11 ಅಧಿಕಾರಿಗಳು ಮೃತಪಟ್ಟಿದ್ದು, ನಾಲ್ವರ ಮೃತದೇಹ ಪತ್ತೆಯಾಗಿದೆ. ರಾವತ್ ಅವರ ಪತ್ನಿ ಮಧುಲಿಕಾ ಕೂಡ ಮೃತಪಟ್ಟಿದ್ದಾರೆ. ಈವರೆಗೆ ಮೂವರನ್ನು ರಕ್ಷಿಸಲಾಗಿದ್ದು, ಉಳಿದವರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಒಂದೂವರೆ ಗಂಟೆಗಳ ಕಾಲ ತೆಗೆದುಕೊಂಡು ಬೆಂಕಿ ನಂದಿಸಲಾಗಿದೆ.
ಸೇನೆಯ ಎರಡು ಹೆಲಿಕಾಪ್ಟರ್‌ಗಳು ಬುಧವಾರ ಕೊಯಮತ್ತೂರಿನಿಂದ ವೆಲ್ಲಿಂಗ್ಟನ್ ಸೇನಾ ಕೇಂದ್ರಕ್ಕೆ ಹೋಗುತ್ತಿದ್ದವು. ರಾವತ್ ಅವರು ಉಪನ್ಯಾಸ ನೀಡಲು ಹೆಲಿಕಾಪ್ಟರ್ ಮೂಲಕ ತೆರಳುತ್ತಿದ್ದರು. ಅವರ ಹೆಲಿಕಾಪ್ಟರ್ ಪತನಗೊಂಡಿದ್ದು, ಇದರಲ್ಲಿ 14 ಅಧಿಕಾರಿಗಳು ಪ್ರಯಾಣಿಸುತ್ತಿದ್ದರು.
ಈವರೆಗೆ ಏಕಾಏಕಿ ಹವಾಮಾನ ವೈಪರೀತ್ಯ ಕಾರಣದಿಂದ ಹೆಲಿಕಾಪ್ಟರ್ ಪತನಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೇವಲ ಐದು ನಿಮಿಷದಲ್ಲಿ ಕ್ಯಾಪ್ಟರ್ ಲ್ಯಾಂಡ್ ಆಗಬೇಕಿತ್ತು. ಹೆಲಿಪ್ಯಾಡ್ ಕೇವಲ ಹತ್ತು ಕಿಮೀ ದೂರದಲ್ಲಿ ಹೆಲಿಕಾಪ್ಟರ್ ಪತನವಾಗಿದೆ.
ರಾವತ್ ಅವರಿಗೆ ಶೇ. 80ಕ್ಕೂ ಹೆಚ್ಚು ಸುಟ್ಟ ಗಾಯವಾಗಿದೆ ಎನ್ನಲಾಗಿದೆ. ಮೂವರಿಗೆ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದು ಸದ್ಯದ ಮಾಹಿತಿ.
ಘಟನಾ ಸ್ಥಳಕ್ಕೆ ವಾಯುಸೇನಾ ಮುಖ್ಯಸ್ಥ ವಿವೇಕ ರಾಮ್ ಚೌಧರಿ ಆಗಮಿಸುತ್ತಿದ್ದಾರೆ. ದುರ್ಘಟನೆಗೆ ಇಡೀ ದೇಶ ಮರುಗುವಂತಾಗಿದೆ.