34.9 C
Hubli
ಮೇ 12, 2024
eNews Land
ಸಣ್ಣ ಸುದ್ದಿ

ಅಣ್ಣಿಗೇರಿ:ತಾಪಂ ಕಛೇರಿ ಹಾಗೂ ವಿವಿಧ ಬಡಾವಣೆಗಳಲ್ಲಿ ಸ್ವಚ್ಛತಾ ಹಿ ಸೇವಾ ಆಂದೋಲನ. ಯಾರ್ಯಾರು ಭಾಗಿ ನೋಡಿ!

ಇಎನ್‌ಎಲ್ ಅಣ್ಣಿಗೇರಿ: ಅಣ್ಣಿಗೇರಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಹಾಗೀರದಾರ ನೇತೃತ್ವದಲ್ಲಿ  ಸಿಬ್ಬಂದಿ ವರ್ಗ,  ಸ್ವಚ್ಛತಾ ಹಿ ಸೇವಾ ಅಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ತಾಪಂ ಆವರಣದಲ್ಲಿ ಸಹಾಯಕ ನಿರ್ದೇಶಕ ಸುರೇಶ ಸಿಂಗನಹಳ್ಳಿ ಸಿಬ್ಬಂದಿ ವರ್ಗ ಪ್ರತಿಜ್ಞಾವಿಧಿ ಸ್ವೀಕರಿಸಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು.

ತಾಲೂಕಿನ ಎಲ್ಲಾ ಗ್ರಾಪಂಗಳಲ್ಲಿ ನೋಡಲ್ ಅಧಿಕಾರಿಗಳು ನೇತತೃತ್ವದಲ್ಲಿ ಸ್ವಚ್ಛತಾ ಅಂದೋಲನ ಕಾರ್ಯಕ್ರಮ ಆಯೋಜಿಸಿ ಗ್ರಾಮಗಳ ಸ್ವಚ್ಛತಾ ಕಾರ್ಯದಲ್ಲಿ ಗ್ರಾಪಂ ಸಿಡಿಪಿಓ ಸಿಬ್ಬಂದಿ ವರ್ಗ ಉಪಸ್ಥಿತರಿದ್ದು, ಅಂದೋಲನ ಯಶಸ್ವಿಗೆ ಕಾರಣೀಭೂತರಾದರು.

ಅಣ್ಣಿಗೇರಿ ಪುರಸಭೆ ಮುಖ್ಯಾಧಿಕಾರಿ ವಾಯ್.ಜಿ.ಗದ್ದಿಗೌಡರ, ತಹಶೀಲ್ದಾರ ಶಿವಾನಂದ ಹೆಬ್ಬಳ್ಳಿ, ಪೋಲಿಸ್ ಠಾಣಾಧಿಕಾರಿ ಸಿದ್ದಾರೂಢ ಆಲದಕಟ್ಟಿ, ಸಿಬ್ಬಂದಿ ವರ್ಗ, ಪೌರಕಾರ್ಮಿಕರು, ಪ್ರತಿಜ್ಞಾವಿಧಿ ಸ್ವೀಕರಿಸಿ ಪುರಾತನ ಕೆರೆ, ವಿವಿಧ ಬಡಾವಣೆಗಳಲ್ಲಿ ಗಟಾರು, ರಸ್ತೆ, ಶೌಚಾಲಯ, ಒಳಚರಂಡಿ, ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರು.

ದಾಸೋಹಮಠದ ಶಿವಕುಮಾರ ಶ್ರೀಗಳು ಸ್ವಚ್ಛತಾ ಅಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಪೌರಕಾರ್ಮಿಕರು ಅಧಿಕಾರಿಗಳು ಜೊತೆಗೆ ಸ್ವಚ್ಛತಾ ಕಾರ್ಯಕ್ಕೆ ಶುಭ ಕೋರಿ, ರಸ್ತೆ ಪಕ್ಕದಲ್ಲಿದ್ದ ಸಸಿಗಳಿಗೆ ನೀರು ಹರಿಸುವ ಮೂಲಕ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿದರು.
ಪಟ್ಟಣದ ವಿವಿಧ ಸಂಘಟನೆಗಳ ಸ್ವಸಹಾಯ ಮಹಿಳಾ ಸಂಘಗಳ ಪ್ರತಿನಿಧಿಗಳು, ದಲಿತ ವಿಮೋಚನಾ ಸಮಿತಿಯ ಪದಾಧಿಕಾರಿಗಳು, ಪುರಸಭೆ ಆಡಳಿತ ಮಂಡಳಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗ ಸ್ವಚ್ಛತಾ ಆಂದೋಲನದ ಕುರಿತು ಘೋಷಣೆಗಳನ್ನು ಕೂಗಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು.

Related posts

ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಅರವಿಂದ ಪಾಟೀಲ್ ನೇಮಕ

eNEWS LAND Team

ಇಂದು ಅಣ್ಣಿಗೇರಿಗೆ ಜಿಲ್ಲಾಧಿಕಾರಿ ಭೇಟಿ

eNEWS LAND Team

ಮಳೆ ಹಾನಿ ಅಧ್ಯಯನ ತಂಡದ ಎದುರು ರೈತರು ಗರಂ!

eNEWS LAND Team