34.9 C
Hubli
ಮೇ 12, 2024
eNews Land
ಸಣ್ಣ ಸುದ್ದಿ

ನಲವಡಿ: ಮಾದಕವಸ್ತುಗಳಿಂದ ಮಕ್ಕಳನ್ನು ರಕ್ಷಿಸಲು ಪಾಲಕರ ಮತ್ತು ಶಿಕ್ಷಕರ ಪಾತ್ರ ಬಹುಮುಖ್ಯ: ಪ್ರಕಾಶ ಅಂಗಡಿ

ಇಎನ್‌ಎಲ್ ಅಣ್ಣಿಗೇರಿ: ಮಾದಕ ವಸ್ತುಗಳೆಂಬ ರಾಕ್ಷಸರಿಂದ ಮಕ್ಕಳು ಮತ್ತು ಯುವ ಜನಾಂಗವನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮದಾಗಿದೆ. ಇಂತಹ ಗಂಭೀರ ಸಮಸ್ಯೆಗಳಿಂದ ರಕ್ಷಿಸುವ ಕಾರ್ಯ ಪಾಲಕರು ಹಾಗೂ ಶಿಕ್ಷಕರದು ಆಗಿದೆ. ಕಾನೂನು ನೆರವು ಅರಿವು ತಿಳಿದುಕೊಳ್ಳುವುದು ಅತ್ಯಂತ ಅವಶ್ಯವಿದ್ದು, ಗಂಭೀರ ಸಮಸ್ಯೆಗನ್ನು ಕಾನೂನು ಚೌಕಟ್ಟಿನಲ್ಲಿ ಪರಿಹರಿಸಿಕೊಳ್ಳುವಲ್ಲಿ ಅರಿವು ಇರಬೇಕಾಗಿರೋದು ಅಗತ್ಯವೆಂದರು. 1985 ರಲ್ಲಿ NDPS act ಜಾರಿಗೆ ಬಂತು. ಈ ಕಾನೂನಿನಲ್ಲಿ 37 ಕಲಂನಲ್ಲಿ ಹೇಳಿದಂತೆ ಮಾದಕ ವಸ್ತುಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಿದರೆ, ಮನೆಯಲ್ಲಿ ಸೇವಿಸಿ ಸಿಕ್ಕರೆ ಕಾನೂನು ಪ್ರಕಾರ ಅಪರಾಧವಾಗುತ್ತದೆ. ಅಂತವರಿಗೆ 1 ಲಕ್ಷ ರೂಗಳು ದಂಡ ಹಾಗೂ 10 ವರ್ಷ ಜೈಲು ಶಿಕ್ಷೆಯಾಗುತ್ತದೆ. ಇದು ನಾನ್’ಬೇಲೆಬಲ್ ಅಪರಾಧವಾಗಿರುತ್ತದೆ. ಮಾದಕ ವಸ್ತುಗಳಿಂದ ಆಗುವ ಅಡ್ಡ ಪರಿಣಾಮಗಳ ಬಗ್ಗೆ ಸವಿಸ್ತಾರವಾಗಿ ಹಿರಿಯ ನ್ಯಾಯವಾದಿ ಪ್ರಕಾಶ ಅಂಗಡಿ ತಿಳಿಸಿಕೊಟ್ಟರು.

ತಾಲೂಕಿನ ನಲವಡಿ ಗ್ರಾಮದ ಶ್ರೀಮತಿ ಕೆ.ಟಿ.ಮಂಟೂರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನವಲಗುಂದ ತಾಲೂಕ ಕಾನೂನು ಸೇವಾ ಸಮಿತಿ ಹಮ್ಮಿಕೊಂಡ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ವೇಳೆ ಗ್ರಾಪಂ ಉಪಾಧ್ಯಕ್ಷ ಪಾಂಡು ಚಿನ್ನಪ್ಪಗೌಡರ, ಗ್ರಾಪಂ ಸದಸ್ಯ ನಿತೀನ ಗಾಣಿಗೇರ, ಸರಕಾರಿ ಪ್ರೌಢಶಾಲೆ ಪ್ರಧಾನ ಗುರುಗಳು, ವಿದ್ಯಾರ್ಥಿಗಳು, ಶಿಕ್ಷಕರ ವೃಂದ, ಸರಕಾರಿ ಪದವಿ ಪೂರ್ವ ಕಾಲೇಜ ಪ್ರಾಚಾರ್ಯರು, ವಿದ್ಯಾರ್ಥಿಗಳು, ಅಧ್ಯಾಪಕರ ವೃಂದ, ಉಪಸ್ಥಿತರಿದ್ದರು.

Related posts

ಅಣ್ಣಿಗೇರಿ ಸ್ಥಿರಾಸ್ತಿಗಳ ಮಾರುಕಟ್ಟೆ ಬೆಲೆ ಪರಿಷ್ಕರಣೆ : ಆಕ್ಷೇಪಣೆ ಆಹ್ವಾನ

eNEWS LAND Team

ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನಕ್ಕೆ ಭೂಮಿಪೂಜೆ

eNEWS LAND Team

ಕಣವಿ ಹೊನ್ನಾಪುರ: ಶ್ರೀ ಸಿದ್ಧಾರೂಢ ಪ್ರಶಸ್ತಿಗೆ ಆಹ್ವಾನ

eNEWS LAND Team