27.5 C
Hubli
ಮೇ 21, 2024
eNews Land
ಸಣ್ಣ ಸುದ್ದಿ

ವರೂರ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಯಾರು ?

ಇಎನ್ಎಲ್ ಹುಬ್ಬಳ್ಳಿ: ತಾಲೂಕಿನ ವರೂರ ಗ್ರಾಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಗಾಗಿ ಸಭೆಯನ್ನು ಜರುಗಿಸಲಾಯಿತು. ಚುನಾವಣಾ ಜರುಗಿಸಲು ದಿನಾಂಕ ಗೊತ್ತು ಪಡಿಸಿದ ಅಧಿಕಾರಿ ಉಮೇಶ ಬೊಮ್ಮಕ್ಕನವರ  ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಇವರನ್ನು ಜಿಲ್ಲಾಧಿಕಾರಿ ಇವರ ಆದೇಶ ಸಂಖ್ಯೆ ಗ್ರಾಪಂ ಚು ವಹಿ24/2023-24 ದಿ.04-07-2023, ರನ್ವಯ 2020ರ ಎರಡನೇ ಅವಧಿಯ 30 ತಿಂಗಳ ಅವರಿಗೆ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 45ರ ಅನ್ವಯ ದಿ.02-08-2023, ರಂದು 18 ವರೂರ ಗ್ರಾಮ ಪಂಚಾಯತಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆ ಜರುಗಿಸಲು ಗೊತ್ತು ಪಡಿಸಿದ ಅಧಿಕಾರಿಯನ್ನು ನೇಮಿಸಿದ ಬಗ್ಗೆ ಅಧಿಕಾರಿಗಳು ಸಭೆಗೆ ತಿಳಿಸಿದರು, ನಿಗದಿಪಡಿಸಿದ ಸ್ಥಾನ ಮೀಸಲಾತಿಯಂತೆ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಮಹಿಳೆ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಸಾಮಾನ್ಯ ವರ್ಗ ನಿಗದಿಪಡಿಸಿದ ಕುರಿತು ಮಾನ್ಯ ಜಿಲ್ಲಾಧಿಕಾರಿಗಳ ಆದೇಶ ಸಂಖ್ಯೆ ನಂ ಗ್ರಾ  ಪಂ ಚು ವಹಿ 0 7 ಹುಬ್ಬಳ್ಳಿ  2023-24 ದಿನಾಂಕ 26-06-2023 ರ ಸುತ್ತೋಲೆಯನ್ನು ಓದಿ ಹೇಳಲಾಯಿತು ಚುನಾವಣೆ ನಡೆಸುವ ಕುರಿತು ಚುನಾವಣೆ ವೇಳಾ ಪಟ್ಟಿಯೊಂದಿಗೆ ಓದಿ ಹೇಳಲಾಯಿತು 18 ವರೂರ ಗ್ರಾಮ ಪಂಚಾಯತ ಸದಸ್ಯರ ಸಂಖ್ಯೆಯು 11 ಜನ ಸದಸ್ಯರು ಸಭೆಯಲ್ಲಿ ಹಾಜರಿದ್ದರು ಅಗತ್ಯವಿರುವ ಕೋರಂ ಭರ್ತಿಯಾಗಿದ್ದರಿಂದ ಸಭೆಯ ಕಾರ್ಯಕಲಾಪ ಪ್ರಾರಂಭಿಸಲಾಯಿತು ಮೊದಲಿಗೆ ಗೊತ್ತುಪಡಿಸಿದ ಅಧಿಕಾರಿಗಳು ಸಭೆಗೆ ಹಾಜರಿದ್ದ ಸದಸ್ಯರನ್ನು ಸ್ವಾಗತಿಸಿ ಸಭೆಯ ಉದ್ದೇಶ ಹಾಗೂ ಚುನಾವಣೆಯ ನಿಯಮ ಮತ್ತು ಅನುಸರಿಸುವ ಪದ್ಧತಿಗಳ ಕುರಿತು ವಿವರಿಸಲಾಯಿತು. ಜಿಲ್ಲಾಧಿಕಾರಿಗಳ ಅಧಿಸೂಚನೆಯಂತೆ 18 ವರೂರ ಗ್ರಾಮ ಪಂಚಾಯತಿಗೆ ಹಿಂದುಳಿದ ವರ್ಗ ಮಹಿಳೆ ಅಧ್ಯಕ್ಷ ಸ್ಥಾನಕ್ಕೆ ಮತ್ತು ಸಾಮಾನ್ಯ ಅಭ್ಯರ್ಥಿ ಉಪಾಧ್ಯಕ್ಷ ಸ್ಥಾನವನ್ನು ಮೀಸಲಾತಿ ನಿಗದಿ ಪಡಿಸಿದ ಬಗ್ಗೆ ಸಭೆಗೆ ತಿಳಿಸಲಾಯಿತು ಸದರ ಚುನಾವಣಾ ವೇಳಾಪಟ್ಟಿ ಪ್ರಕಾರ ಚುನಾವಣಾ ಸೂಚನಾ ಪತ್ರದಲ್ಲಿ ನಾಮಪತ್ರ ಸಲ್ಲಿಸುವ ಅವಧಿಯನ್ನು ನಿಗದಿಪಡಿಸಿ ದಂತೆ ಮುಂಜಾನೆ 10 ಗಂಟೆಯಿಂದ 12 ಗಂಟೆ ಅವಧಿ ಒಳಗೆ ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮವ್ವ ಪಾರಿಶಪ್ಪ ಮ್ಯಾಗಡಿ, ಉಪಾಧ್ಯಕ್ಷ ಸ್ಥಾನಕ್ಕೆ ನಿಂಗಪ್ಪ ಮಾದೇವಪ್ಪ ಹೊರಓಣಿ ನಾಮಪತ್ರ ಸಲ್ಲಿಕೆಯಾದ ಮೇಲ್ಕಂಡ ವಿವರವನ್ನು ಹಾಜರಿದ್ದ ಸದಸ್ಯರ ಸಮ್ಮುಖದಲ್ಲಿ ಓದಿ ಹೇಳಲಾಯಿತು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಸದರ ನಾಮಪತ್ರಗಳು ಕ್ರಮ ಬದ್ಧವಾಗಿದ್ದು ಹಾಗೂ ಅವರು ತಮ್ಮ ನಾಮಪತ್ರಗಳನ್ನು ಹಿಂದಕ್ಕೆ ಪಡೆದಿಲ್ಲವಾದ್ದರಿಂದ ಲಕ್ಷ್ಮವ್ವ ಪರೀಶಪ್ಪ ಮ್ಯಾಗಡಿ ಇವರು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಶ್ರೀ ನಿಂಗಪ್ಪ ಮಾದೇವಪ್ಪ ಹೊರಓಣಿ ಇವರು ಅ ವಿರೋಧವಾಗಿ, ಆಯ್ಕೆಯಾಗಿರುತ್ತಾರೆಂದು ಘೋಷಿಸಲಾಯಿತು. ತದನಂತರ ಗ್ರಾಮ ಪಂಚಾಯತ್ ಕಾರ್ಯಾಲಯದ ವತಿಯಿಂದ ನೂತನ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮವ್ವ ಪರೀಶಪ್ಪ ಮ್ಯಾಗಡಿ ನೂತನ ಉಪಾಧ್ಯಕ್ಷ ನಿಂಗಪ್ಪ ಮಹಾದೇವಪ್ಪ ಹೊರಓಣಿ ಚುನಾವಣಾ ಕಾರ್ಯಕ್ಕೆ ಅಧಿಕಾರಿ ಉಮೇಶ ಬೊಮ್ಮಕ್ಕನವರ ಕ್ಷೇತ್ರ ಶಿಕ್ಷಣಾಧಿಕಾರಿ ಹುಬ್ಬಳ್ಳಿ ಗ್ರಾಮೀಣ ವಲಯ ಹುಬ್ಬಳ್ಳಿ ಗ್ರಾಮ ಪಂಚಾಯತ, ಸದಸ್ಯರಾದ ರುದ್ರಯ್ಯ ಹಿರೇಮಠ ಚನ್ನಬಸನಗೌಡ ಹನಮಂತಗೌಡ್ರೆ ಕರಿಯಪ್ಪ ಅಣ್ಣಿಗೇರಿ ಈಶ್ವರಗೌಡ  ಪಾಟೀಲ, ವಿಶಾಲಾಕ್ಷಿ ಸಂಗವ್ವ ಮಾಳಕೋಟೆ ಪಕ್ಕೀರವ್ವ ಬಗಾಡಿ ಕಸ್ತೂರವ್ವ ಬಡಪನವರ ಲಕ್ಷ್ಮಿ ಹರಿಜನ ಹಾಗೂ ವರೂರ ಮತ್ತು ಕಂಪ್ಲಿ ಕೊಪ್ಪ ಗ್ರಾಮದ ಸಮಸ್ತ ಗ್ರಾಮಸ್ಥರಿಂದ ಗೌರವಿಸಲಾಯಿತು,

Related posts

Journalism school started in the name of Dr.Vijaya Sankeshwar

eNEWS LAND Team

ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನಕ್ಕೆ ಭೂಮಿಪೂಜೆ

eNEWS LAND Team

ಅಣ್ಣಿಗೇರಿ ಸ್ಥಿರಾಸ್ತಿಗಳ ಮಾರುಕಟ್ಟೆ ಬೆಲೆ ಪರಿಷ್ಕರಣೆ : ಆಕ್ಷೇಪಣೆ ಆಹ್ವಾನ

eNEWS LAND Team