27 C
Hubli
ಏಪ್ರಿಲ್ 29, 2024
eNews Land
ಜಿಲ್ಲೆ

ಸಂಜೆ 6 ಗಂಟೆ ಹೊತ್ತಿಗೆ ಜಿಲ್ಲೆಯಲ್ಲಿ ಶೇ.71.76 ರಷ್ಟು ಮತದಾನ; 6 ಗಂಟೆ ನಂತರವೂ ಕೆಲ ಮತಗಟ್ಟೆಗಳಲ್ಲಿ ಮುಂದುವರಿದಿರುವ ಮತದಾನ…

ಇಎನ್ಎಲ್ ಧಾರವಾಡ: ಜಿಲ್ಲೆಯಲ್ಲಿ ಉತ್ತಮ ಮತದಾನವಾಗಿದ್ದು,ಸಂಜೆ 6 ಗಂಟೆಯವರೆಗೆ ಅಂದಾಜು ಶೇ.71.76 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.

ಅವರು ಮಾಧ್ಯಮ ಪ್ರಕಟಣೆ ನೀಡಿ, ಭಾರತ ಚುನಾವಣಾ ಆಯೋಗದ ಆದೇಶದಂತೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಶಾಂತಿಯುತವಾಗಿ ಮತ್ತು ಸುಸೂತ್ರವಾಗಿ ಮತದಾನ ಕಾರ್ಯ ನಡೆದಿದೆ. ಜಿಲ್ಲೆಯ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದಾರೆ.

ಸಂಜೆ 6 ಗಂಟೆಯವರೆಗೆ ಶೇ.71.76 ರಷ್ಟು ಮತದಾನವಾಗಿದೆ. ಮತ್ತು ಸಂಜೆ 6 ಗಂಟೆ ನಂತರ ಮತಗಟ್ಟೆ ಆವರಣದಲ್ಲಿ, ಸರತಿ ಸಾಲಿನಲ್ಲಿದ್ದ ಮತದಾರರು ಕುಂದಗೋಳ, ನವಲಗುಂದ  ಮತಕ್ಷೇತ್ರಗಳಲ್ಲಿ  ಇನ್ನು ಮತದಾನ ಮಾಡುತ್ತಿದ್ದು, ಈಗ ಅಂತಿಮ ಹಂತಕ್ಕೆ ಬಂದಿದೆ.

ಮತದಾನ ಪೂರ್ಣಗೊಳ್ಳುವ ಹೊತ್ತಿಗೆ ಕಳೆದ 2018 ರ ವಿಧಾನಸಭಾ ಚುನಾವಣೆಯಲ್ಲಿ ಆಗಿದ್ದ ಶೇ. 70.70 ಕ್ಕಿಂತ ಹೆಚ್ಚು ಮತದಾನವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಸದ್ಯದಲ್ಲಿ ಮತದಾನ ಕಾರ್ಯ ಪೂರ್ಣಗೊಳ್ಳಲಿದ್ದು, ಜಿಲ್ಲೆಯ ಮತದಾನದ ಅಂತಿಮ ವಿವರ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Related posts

ಗಡಿ ಚೆಕ್ ಪೋಸ್ಟ್ ಗಳಲ್ಲಿ ಚುರುಕಾಗಿ ಕಾರ್ಯನಿರ್ವಹಿಸಿ : ಜಿಲ್ಲಾ ಚುನಾವಣಾಧಿಕಾರಿ ಹಾಗೂ ಡಿಸಿ ಗುರುದತ್ತ ಹೆಗಡೆ

eNewsLand Team

ದಕ್ಷಿಣ ನೌಕಾನೆಲೆ ಕಮಾಂಡರ್ ಆಗಿ ಧಾರವಾಡದ ಅರವಿಂದ್

eNewsLand Team

ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆ ಘೋಷಣೆ; ಮೇ 19ಕ್ಕೆ ಅಧಿಸೂಚನೆ  -ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

eNewsLand Team