26.4 C
Hubli
ಏಪ್ರಿಲ್ 18, 2024
eNews Land
ಜಿಲ್ಲೆ

ಧಾರವಾಡ ಜಿಲ್ಲೆ ವಿಧಾನಸಭಾ ಚುನಾವಣೆಯ ಅಂತಿಮ ಮತದಾನ ಶೇ.73.19;  ಶಾಂತಿಯುತ ಮತದಾನಕ್ಕೆ ಶ್ರಮಿಸಿದ ಸಿಬ್ಬಂದಿಗೆ, ಸಹಕರಿಸಿದ ಮತದಾರರಿಗೆ ಕೃತಜ್ಞತೆ ತಿಳಿಸಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

ಇಎನ್ಎಲ್ ಧಾರವಾಡ: ಜಿಲ್ಲೆಯಲ್ಲಿ  ಸಂಜೆ 6 ಗಂಟೆ ನಂತರ ಮತದಾನ ಮುಕ್ತಾಯವಾಗಿದ್ದು , ಅಂತಿಮವಾಗಿ ಜಿಲ್ಲೆಯ ಏಳು ವಿಧಾನಸಭಾ ಮತಕ್ಷೇತ್ರಗಳು ಸೇರಿ ಒಟ್ಟು ಶೇಕಡಾವಾರು 73.19 ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ  ಅವರು, ಜಿಲ್ಲೆಯ ಎಲ್ಲ 1642 ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ಮತ್ತು ಕೆಲವು ಮತಗಟ್ಟೆಗಳಲ್ಲಿ 6 ಗಂಟೆ ನಂತರವೂ ಮತದಾನವಾಗಿದ್ದು, ಶಾಂತಿಯುತ ಮತದಾನದ ಮೂಲಕ ಜಿಲ್ಲೆಯ ಮತದಾರರು ಪ್ರಬುದ್ದತೆ ತೋರಿದ್ದಾರೆ.

ಚುನಾವಣೆ ಕಾರ್ಯ ಜಿಲ್ಲೆಯಾದ್ಯಂತ ಶಾಂತಿಯುತವಾಗಿ, ಸುವ್ಯವಸ್ಥಿತವಾಗಿ ಜರುಗಲು ಶ್ರಮವಹಿಸಿದ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಪಂಚಾಯತ ರಾಜ್ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿಗೆ ಮತ್ತು ಶಾಂತಿಯುತ ಮತದಾನಕ್ಕೆ ಸಹಕಾರ ನೀಡಿದ ಮತದಾರರಿಗೆ ಜಿಲ್ಲಾಧಿಕಾರಿಗಳು  ಕೃತಜ್ಞತೆಗಳನ್ನು ತಿಳಿಸಿದ್ದಾರೆ.

ಮತದಾನ ಮುಕ್ತಾಯ ನಂತರದ ಮತದಾನ ವಿವರ:

69 ನವಲಗುಂದ ವಿಧಾನಸಭಾ ಮತಕ್ಷೇತ್ರ ಶೇ. 76.99

70 ಕುಂದಗೋಳ ವಿಧಾನಸಭಾ ಮತಕ್ಷೇತ್ರ ಶೇ. 82.82

71 ಧಾರವಾಡ ವಿಧಾನಸಭಾ ಮತಕ್ಷೇತ್ರ ಶೇ.76.99

72 ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರ ಶೇ.70.74

73 ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರ ಶೇ. 64.30

74 ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರ ಶೇ. 64.33

75 ಕಲಘಟಗಿ ವಿಧಾನಸಭಾ ಮತಕ್ಷೇತ್ರ ಶೇ.81.78

ಜಿಲ್ಲೆಯಲ್ಲಿ  ಮತದಾನ ಮುಕ್ತಯವಾದಾಗ ಒಟ್ಟು  ಆಗಿರುವ ಸರಾಸರಿ ಮತದಾನ ಶೇ. 73.19 ಆಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಕೋವಿಡ್  ನಿಯಂತ್ರಣ ಸರ್ಕಾರದ ಪ್ರಯತ್ನಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ -ಸಚಿವ ಹಾಲಪ್ಪ

eNewsLand Team

ಮತದಾನ ಜಾಗೃತಿಗಾಗಿ ಧಾರವಾಡದಿಂದ ಹುಬ್ಬಳ್ಳಿವರೆಗೆ ಸೈಕಲ್ ಜಾಥಾ ಮಾಡಿದ ಚುನಾವಣಾ ವೀಕ್ಷಕರು

eNEWS LAND Team

30 ವರ್ಷ: ಅಮ್ಮಿನಭಾವಿ ಗ್ರಾಮದೇವತೆಯರ ಜಾತ್ರಾ ಮಹೋತ್ಸವ

eNewsLand Team