24 C
Hubli
ಮೇ 6, 2024
eNews Land
ಸುದ್ದಿ

ರೈಲುಗಳ ಸೇವೆಯಲ್ಲಿ ಕೆಲವು ಬದಲಾವಣೆ

ಇಎನ್ಎಲ್ ಹುಬ್ಬಳ್ಳಿ: ತಾವರಗಟ್ಟಿ ಮತ್ತು ಮುಗದ ಮಧ್ಯ ಸಿಗ್ನಲ್ ಸಂಬಂಧಿತ ಕಾಮಗಾರಿ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳನ್ನು ರದ್ದುಗೊಳಿಸಿ, ಭಾಗಶಃ ರದ್ದುಗೊಳಿಸಿ ಹಾಗೂ ಕೆಲವು ರೈಲುಗಳನ್ನು ಮಾರ್ಗ ಮಧ್ಯ ನಿಯಂತ್ರಿಸಲಾಗುತ್ತದೆ. ಅವುಗಳ ಮಾಹಿತಿ ಈ ಕೆಳಗಿನಂತಿವೆ.

ರೈಲುಗಳು ರದ್ದು:

1. ರೈಲು ಸಂಖ್ಯೆ 17334 ಕ್ಯಾಸಲ್ ರಾಕ್ – ಮೀರಜ್ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಏಪ್ರಿಲ್ 4, 2023 ರಂದು ರದ್ದುಗೊಳಿಸಲಾಗುತ್ತಿದೆ.

2. ರೈಲು ಸಂಖ್ಯೆ 17331/17332 ಮೀರಜ್ – ಎಸ್‌.ಎಸ್‌.ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವೆ ಸಂಚರಿಸುವ ದೈನಂದಿನ ಎಕ್ಸ್‌ಪ್ರೆಸ್ ಮತ್ತು 07351 ಮೀರಜ್ – ಲೋಂಡಾ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲುಗಳನ್ನು ಏಪ್ರಿಲ್ 5, 2023 ರಂದು ರದ್ದುಗೊಳಿಸಲಾಗುತ್ತಿದೆ.

ರೈಲು ಭಾಗಶಃ ರದ್ದು:

1. ಏಪ್ರಿಲ್ 4 ರಂದು ಸಿಕಂದರಾಬಾದ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 07336 ಸಿಕಂದರಾಬಾದ್ – ಬೆಳಗಾವಿ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು ಧಾರವಾಡ-ಬೆಳಗಾವಿ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ. ಈ ರೈಲು ಧಾರವಾಡದಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ.

ರೈಲುಗಳ ನಿಯಂತ್ರಣ/ಮರು ವೇಳಾಪಟ್ಟಿ:

1. ಏಪ್ರಿಲ್ 4, 2023 ರಂದು ಪುದುಚೇರಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 11006 ಪುದುಚೇರಿ – ದಾದರ್  ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯದಲ್ಲಿ 60 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.

2. ಏಪ್ರಿಲ್ 5, 2023 ರಂದು ಹುಬ್ಬಳ್ಳಿಯಿಂದ ಹೊರಡುವ ರೈಲು ಸಂಖ್ಯೆ 17317 ಎಸ್.ಎಸ್.ಎಸ್. ಹುಬ್ಬಳ್ಳಿ – ದಾದರ್ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯದಲ್ಲಿ 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.

3. ಏಪ್ರಿಲ್ 6, 2023 ರಂದು ಬೆಳಗಾವಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 07335 ಬೆಳಗಾವಿ – ಸಿಕಂದರಾಬಾದ್ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲನ್ನು ಬೆಳಗಾವಿಯಿಂದ  ಮಧ್ಯಾಹ್ನ 01:10 ಕ್ಕೆ ಹೊರಡುವ ಬದಲು ಮಧ್ಯಾಹ್ನ 02:50 ಗಂಟೆಗೆ (100 ನಿಮಿಷಗಳ ತಡವಾಗಿ) ಸಂಚರಿಸಲಿದೆ.

Related posts

ಲೋಕ ಅದಾಲತ್: 31,301 ಪ್ರಕರಣ ರಾಜಿ ಮೂಲಕ ಇತ್ಯರ್ಥಪಡಿಸಲು ಅವಕಾಶ: ನ್ಯಾ.ಮಲ್ಲಿಕಾರ್ಜುನ ಗೌಡ

eNEWS LAND Team

ಕಾಂಗ್ರೆಸ್ ಅಭ್ಯರ್ಥಿಗಳ ನಾಮಪತ್ರ ಅಸಿಂಧುಗೊಳಿಸಲು ಒತ್ತಡ ಆರೋಪ, ಡಿಕೆಶಿಗೆ ಮಾತನಾಡಲು ವಿಷಯವಿಲ್ಲದೆ ಅನಗತ್ಯ ಆರೋಪ: ಸಿಎಂ ಬೊಮ್ಮಾಯಿ

eNEWS LAND Team

ಅಣ್ಣಿಗೇರಿಲಿ ಅನ್ನದಾತನ ಆತ್ಮಹತ್ಯೆ; ಸಾಯುವಂಥದ್ದು ಏನಾಗಿತ್ತು?

eNewsLand Team