26.4 C
Hubli
ಮೇ 2, 2024
eNews Land
ಸುದ್ದಿ

ಅಣ್ಣಿಗೇರಿಯಲ್ಲಿ ನಕಲು ಮುಕ್ತ ಪರೀಕ್ಷಾ ಕೇಂದ್ರಗಳು!!

 

ಇಎನ್ಎಲ್ ಅಣ್ಣಿಗೇರಿ: ಧಾರವಾಡ ಜಿಲ್ಲೆಯಲ್ಲಿ ಅತ್ಯಂತ ಕಟ್ಟುನಿಟ್ಟಿನ ಶಿಸ್ತುಬದ್ಧ ಯಾವುದೇ ಅಹಿತಕರ ಘಟನೆಗೆ ಸಾಕ್ಷಿಯಾಗದೇ ಪ್ರಾಮಾಣಿಕವಾಗಿ ಪರೀಕ್ಷೆ ನಡೆಸುವ ನಕಲು ಮುಕ್ತ ಪರೀಕ್ಷಾ ಕೇಂದ್ರವೆoದು ಅಣ್ಣಿಗೇರಿ ಶಿಕ್ಷಣ ಸಂಸ್ಥೆಯ ಎರಡು ಪರೀಕ್ಷಾ ಕೇಂದ್ರಗಳು ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿವೆ. ಪರೀಕ್ಷಾ ಕೇಂದ್ರದ ಸುತ್ತಮುತ್ತಲೂ ಪೋಲಿಸ್ ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. 23 ಬ್ಲಾಕ್‌ಗಳಲ್ಲಿ 23 ಕ್ಕೂ ಹೆಚ್ಚು ಕೊಠಡಿ ಪರೀಕ್ಷಾ ಮೇಲ್ವಿಚಾರಕರು, ವಿವಿಧ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.   

ಪಟ್ಟಣದ ಶ್ರೀ ಅಮೃತೇಶ್ವರ ಸಂಯಕ್ತ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 280 ವಿದ್ಯಾರ್ಥಿಗಳು, ಹಾಗೂ ಶ್ರೀ ಎನ್.ಎಸ್.ಹುಬ್ಬಳ್ಳಿ ಬಾಲಕಿಯರ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ 231 ವಿದ್ಯಾರ್ಥಿಗಳು, ಒಟ್ಟು 511 ವಿದ್ಯಾರ್ಥಿಗಳು ಹಾಜರಾಗಿದ್ದರು. ಪಟ್ಟಣದ-9 ಹೈಸ್ಕೂಲ್ ಗ್ರಾಮೀಣ ಪ್ರದೇಶದ-1 ಹೈಸ್ಕೂಲ್, ಒಟ್ಟು 10 ಹೈಸ್ಕೂಲ್ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಪಶ್ನೆ ಪತ್ರಿಕೆಗೆ ಉತ್ತರವನ್ನು ಸಂತಸದಿoದ ಬರೆದರು.

Related posts

ಸೈನಿಕರಿಗೆ ಗುಡ್ ನ್ಯೂಸ್!! ಶೌರ್ಯ ಪ್ರಶಸ್ತಿ ವಿಜೇತರಿಗೆ ಇನ್ಮೇಲೆ ಭರ್ಜರಿ ನಗದು ಬಹುಮಾನ? ಎಷ್ಟು ನೋಡಿ

eNewsLand Team

ಮನೆಯಿಂದಲೇ ಮತದಾನ ಮಾಡಲು ಒಪ್ಪಿಗೆ ನೀಡಿದ ವಿಕಲಚೇತನರ ಹಾಗೂ 80 + ವಯಸ್ಸಾದವರ ಮನೆಗೆ ಏ.29,30 ಹಾಗೂ ಮೇ 1 ರಂದು ಚುನಾವಾಣಾ ಸಿಬ್ಬಂದಿ ಭೇಟಿ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

eNEWS LAND Team

ಅಣ್ಣಿಗೇರಿ ತಾ.ಪಂ ಕಚೇರಿಯಲ್ಲಿ ಖಾಲಿ ಕುರ್ಚಿಗಳ ಆಡಳಿತ!!

eNEWS LAND Team