37 C
Hubli
ಏಪ್ರಿಲ್ 25, 2024
eNews Land
ಸುದ್ದಿ

ಅಣ್ಣಿಗೇರಿ ತಾ.ಪಂ ಕಚೇರಿಯಲ್ಲಿ ಖಾಲಿ ಕುರ್ಚಿಗಳ ಆಡಳಿತ!!

ವಚನ ಹೂಗಾರ

ಇಎನ್ಎಲ್ ಅಣ್ಣಿಗೇರಿ: ಪಟ್ಟಣದ ತಾಲೂಕ ಪಂಚಾಯತ ಕಾರ್ಯಲಯ ಆರಂಭಗೊಂಡು ಒಂದು ವರ್ಷ ಗತಿಸಿದರೂ ಈವರೆಗೂ ಪೂರ್ಣಾವಧಿ ಸಿಬ್ಬಂದಿಯೇ ಇಲ್ಲ. ಕೇವಲ ಕಾರ್ಯದರ್ಶಿಗಳು ಮಾತ್ರ ಕಛೇರಿಗೆ ಒಬ್ಬರೇ ಬರುತ್ತಿದ್ದು, ಆಲ್ ಇನ್ ಒನ್ ಕರ್ತವ್ಯನಿರತರಿದ್ದು, ಇಲಾಖೆಯ ಆದೇಶ ಪತ್ರಗಳನ್ನು ಜನರ ಅಹವಾಲುಗಳನ್ನು ಅಧಿಕಾರಿಗಳಿಗೆ ರವಾನಿಸುತ್ತಿದ್ದು,

ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ಜನರ ಸಮಸ್ಯೆಗೆ ಖಾಲಿ ಕುರ್ಚಿಗಳೇ ಉತ್ತರ ನೀಡುವ ದುರಾದೃಷ್ಟಕರ ಪರಿಸ್ಥಿತಿಗೆ ಸ್ಪಷ್ಟ ಉದಾಹರಣೆಯಾಗಿದೆ. ಸಾರ್ವಜನಿಕ ಸೇವೆಗೆ ಆಡಳಿತವಿಲ್ಲದೇ ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. 2021 ಜ.24 ರಂದು ತಾ.ಪಂ ಕಾರ್ಯಲಯ ಉದ್ಘಾಟನೆ ನೇರವೆರಿಸಿ, ಸಾರ್ವಜನಿಕ ಸೇವೆಗೆ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಚಾಲನೆ ನೀಡಿದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ತಾ.ಪಂ ಕಾರ್ಯಲಯ ಆವರಣದಲ್ಲಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೇರವೆರಿಸಿದರು. ₹50ಲಕ್ಷ ವೆಚ್ಚದಲ್ಲಿ ತಾ.ಪಂ ಕಟ್ಟಡ ನಿರ್ಮಾಣ ಕಾಮಗಾರಿ ಕೈಗೊಂಡಿದ್ದು ಇನ್ನು ಪೂರ್ಣಗೊಂಡಿಲ್ಲ.

ತಾ.ಪo ಕಾರ್ಯನಿರ್ವಾಹಕ ಅಧಿಕಾರಿಗಳಿಲ್ಲ. 13 ಸಿಬ್ಬಂದಿ ಅವಶ್ಯಕತೆಯಿದ್ದು, ಹಲವಾರು ಬಾರಿ ತಾ.ಪಂ ಅಧ್ಯಕ್ಷರು ಜಿ.ಪಂ. ತಾ.ಪಂ. ಅಧಿಕಾರಿಗಳನ್ನು ಭೇಟಿ ಮಾಡಿ ಜಿಲ್ಲಾಡಳಿತ ಗಮನಕ್ಕೆ ತಂದರೂ, ಈವರೆಗೂ ಸಿಬ್ಬಂದಿ ನೇಮಕ ಮಾಡಿಕೊಳ್ಳದೇ, ಕೇವಲ ಗುತ್ತಿಗೆ ಆಧಾರ ಮೇಲೆ ಸಿಬ್ಬಂದಿ ನೇಮಕಾತಿಗೆ ಆನ್ ಲೈನ್ ಅರ್ಜಿ ಕರೆದಿದೆ ವಿನಹ: ನೇಮಕಾತಿ ಪ್ರಕ್ರಿಯೇ ಕೈಗೊಂಡಿಲ್ಲ. ಅಧ್ಯಕ್ಷರ ಅಧಿಕಾರ ಅವಧಿ ಪೂರ್ಣಗೊಂಡಿದ್ದು, ಇನ್ನೂ ತಾ.ಪಂ ಚುನಾವಣೆಯೇ ಜರುಗಿಲ್ಲ.

ತಾ.ಪಂ ವ್ಯಾಪ್ತಿಗೆ 21 ಗ್ರಾಮಗಳು, 9 ಗ್ರಾಮ ಪಂಚಾಯತಿ, 2ಜಿಲ್ಲಾ ಪಂಚಾಯತಿ, ತಾಲೂಕಿನ ಅನೇಕ ಗ್ರಾಮಗಳ ಸಮಸ್ಯೆಗಳಿಗೆ ವಿವಿಧ ಇಲಾಖೆಗಳನ್ನು ಒಳಗೊಂಡ ತಾ.ಪಂ ಆಡಳಿತ ಕಾರ್ಯ ನಡೆಸದೇ ಹೋದ್ರೆ ಜನರ ಸಮಸ್ಯೆ ಆಲಿಸುವರು ಯಾರು? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಗ್ರಾಮೀಣ ಜನತೆ ನಮ್ಮ ಗ್ರಾಮ, ಮನೆ, ಓಣಿ, ಪ್ರದೇಶ ವ್ಯಾಪ್ತಿಯ ಕೆಲಸಕ್ಕೆ ಧಾವಿಸಿಬರುವ ಜನತೆ ಅಧಿಕಾರವರ್ಗವಿಲ್ಲದ ಕಾರಣ ಕೈಬಿಟ್ಟು ಹಿಂದುರುಗಬೇಕಿದೆ. 

ಜೆಡಿಎಸ್ ಸದಸ್ಯರ ಆಡಳಿತ ಮಂಡಳಿಯ ಮಲ್ಲರಡ್ಡಿ ಹನಮರಡ್ಡಿ ಕುರಹಟ್ಟಿ, ದೇವಿಂದ್ರಪ್ಪ ಫಕ್ಕೀರಪ್ಪ ರೋಣದ ತಾ.ಪಂ ಅಧ್ಯಕ್ಷರಾಗಿ ಆಡಳಿತ ಮಾಡಿದರು. ನವಲಗುಂದ ತಾಲೂಕ ಪಂ ಕಾರ್ಯಲಯ ಮೂಲಕ ಅಣ್ಣಿಗೇರಿ ತಾಲೂಕಿನ ಅನೇಕ ಗ್ರಾಮಗಳ ಕಾಮಗಾರಿಗಳ ಅಭಿವೃದ್ಧಿಗೆ ಅಲ್ಲಿಂದಲೇ ಅನುದಾನ ಸದ್ಭಳಿಸಿ, ಅಭಿವೃದ್ದಿ ಮಾಡಿದ್ದಾರೆ. ಕೇವಲ ಅಣ್ಣಿಗೇರಿ ತಾ.ಪಂ ಕಾರ್ಯಲಯ ಆಟಕುಂಟು ಲೆಕ್ಕಕ್ಕಿಲ್ಲದಂತಾಗಿದೆ. ಯಾವುದೇ ಆಡಳಿತ ಕೆಲಸ ಅಣ್ಣಿಗೇರಿ ತಾ.ಪಂ ಕಾರ್ಯಲಯದಿಂದ ನಡೆಸಲಿಲ್ಲ. ಕೇವಲ ಒಂದು ಕೆಡಿಪಿ ಸಭೆ, ಹಾಗೂ 3 ಸಾಮಾನ್ಯ ಸಭೆ ಮಾತ್ರ ನಡೆಸಿದ್ದಾರೆ. 

ಜನರ ಸೇವೆಗೆ ಮುಕ್ತ ಅವಕಾಶ ಕಲ್ಪಿಸಬೇಕಾದ ಕಛೇರಿಗಳು ಭಿಕೋ ಎನ್ನುತಿವೆ ಎಂದರೆ ತಾ.ಪಂ. ಜಿ.ಪಂ. ಶಾಸಕರು, ಜನಪ್ರತಿನಿಧಿಗಳು, ಜಿಲ್ಲಾ.ಆಡಳಿತ ಕಣ್ಣಿದ್ದು ಕುರುಡರಂತೆ ಕಿವಿಯಿದ್ದು ಕಿವುಡರಂತೆ ಜಾಣ್ಮೆ ತೋರುತ್ತಾ ಕಾಲಹರಣ ಮಾಡುತಿದೆ. ಆದಷ್ಟು ಬೇಗನೇ ಪೂರ್ಣವಧಿ ಸಿಬ್ಬಂದಿ, ಅಭಿಯಂತರರನ್ನು ನೇಮಕಾತಿಗೊಳಿಸಿ ತಾ.ಪಂ ಕಛೇರಿ ಸಾರ್ವಜನಿಕರ ಸೇವೆಗೆ ಲಭ್ಯವಾಗಲು ಅವಕಾಶ ಕಲ್ಪಿಸುತ್ತಾರೋ ಎಂಬುದನ್ನು ಕಾಯ್ದು ನೋಡಬೇಕಿದೆ. 

ತಾ.ಪಂ ಕಾರ್ಯಾಲಯಕ್ಕೆ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ, ಅಭಿಯಂತರರು, ಅದಷ್ಟು ಬೇಗನೆ ನೇಮಕಾತಿಗೊಳಿಸುತ್ತೇವೆ. ಈಗಾಗಲೇ ₹50ಲಕ್ಷ ವೆಚ್ಚದಲ್ಲಿ ತಾ.ಪಂ ಕಾರ್ಯಲಯ ಸ್ವಂತ ಕಟ್ಟಡ ಕಾಮಗಾರಿ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಕಟ್ಟಡ ಪೂರ್ಣಗೊಂಡ ನಂತರ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ

ಸರ್ಕಾರ ನೂತನ ತಾಲೂಕ ಕೇಂದ್ರಗಳಲ್ಲಿ ತಾ.ಪಂ ಕಾರ್ಯಲಯಕ್ಕೆ ಸ್ವಂತ ಕಟ್ಟಡ, ಕಾರ್ಯನಿರ್ವಾಹಕ ಅಧಿಕಾರಿ, ಸಿಬ್ಬಂದಿವರ್ಗ ಸಮೇತ ಸಾರ್ವಜನಿಕ ಸೇವೆಗೆ ಪೂರ್ಣಾವಧಿ ಕರ್ತವ್ಯ ನಿಭಾಯಿಸಲು ಕ್ರಮಕೈಗೊಳ್ಳುವ ಅವಶ್ಯಕತೆಯಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ವಿಕೇಂದ್ರೀಕರಣಕ್ಕೆ ತಾ.ಪಂ ಕಾರ್ಯಲಯದಿಂದ ಸಾರ್ವಜನಿಕ ಸೇವೆಗೆ ಪೂರ್ಣಾವಧಿ ಅಧಿಕಾರಿಗಳ ವರ್ಗ, ಆಡಳಿತಕ್ಕೆ ಸಚಿವರು ತಕ್ಷಣವೇ ಸೂಕ್ತ ಕ್ರಮಕೈಗೊಳ್ಳಬೇಕೆಂದ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ.

 

 

Related posts

ಹುಬ್ಬಳ್ಳಿಲಿ ಝೋಮ್ಯಾಟೊ, ಸ್ವಿಗ್ಗಿ ರೀತಿ ಮನೆಮನೆಗೆ ಊಟ ಪೂರೈಸಲಿದೆ ಡಬ್ಬಾವಾಲಾ

eNewsLand Team

ಮಜೇಥಿಯಾ ಫೌಂಡೇಶನ್: ಕೆಸಿಟಿಆರ್‌ಐ ಕ್ಯಾಂಪಸ್‌ನ ಹಾಸ್ಪೈಸ್ ರಮಿಲಾ ಪ್ರಶಾಂತಿ ಮಂದಿರದಲ್ಲಿ ಜಾಗತಿಕ ಶಸ್ತ್ರಚಿಕಿತ್ಸಾ ದಿನಾಚರಣೆ

eNEWS LAND Team

ಇಂದು ಬಿಎಫ್‌ಸಿ ನಾರ್ತ್ ಈಸ್ಟ್ ಯುನೈಟೆಡ್ ಹಣಾಹಣಿ

eNewsLand Team