35.4 C
Hubli
ಏಪ್ರಿಲ್ 28, 2024
eNews Land
ಸುದ್ದಿ

ಮೃತನ ತಾಯಿಗೆ ಸ್ವಿಮ್ಮಿಂಗ್ ಪೂಲ್ ಮಾಲೀಕರು ಮತ್ತು ವಿಮಾ ಕಂಪನಿಯಿಂದ ಪರಿಹಾರ ಕೊಡಲು ಆಯೋಗದ ಆದೇಶ.

ಮೆಕ್ಕೆಜೋಳ ಬೆಳೆಯುವ ರೈತರು ತಪ್ಪದೇ ನೋಡಿ, ಗಂಗಾ ಕಾವೇರಿ ಸೀಡ್ಸ್ ಕಂಪನಿಗೆ ದಂಡ!

ಇಎನ್ಎಲ್ ಧಾರವಾಡ: ಮಾ.10, 2020 ರಂದು ನವಲಗುಂದದ ಶಿರಾಜ ಅಣ್ಣಿಗೇರಿ ಅನ್ನುವ 26 ವರ್ಷದ ಯುವಕ ಹುಬ್ಬಳ್ಳಿಗೆ ತನ್ನ ಪಾನ ಅಂಗಡಿಗೆ ಬೇಕಾದ ಸಾಮಾನು ಖರೀದಿಸಲು ಸ್ನೇಹಿತರ ಜೊತೆ ಬಂದಿದ್ದನು. ತನ್ನ ಖರೀದಿ ಕೆಲಸ ಮುಗಿದ ಮೇಲೆ ಸ್ನೇಹಿತರೊಂದಿಗೆ ಶಿರಾಜ ಹುಬ್ಬಳ್ಳಿಯ ಹೊಸ ಕೋರ್ಟರಸ್ತೆ, ಹತ್ತಿರ ಇರುವ ಪ್ಲಾಷ್ ಈಜುಕೊಳ್ಳಕ್ಕೆ ಸಾಯಂಕಾಲ 6:00 ಗಂಟೆ ಸುಮಾರಿಗೆ ಈಜಲು ಹೋಗಿದ್ದರು. ಈಜುಕೊಳ್ಳದಲ್ಲಿ ಹಣ ಸಂದಾಯ ಮಾಡಿಟಿಕೇಟ್ ಖರೀದಿಸಿ ಅವರ ನಿಯಮದಂತೆ ಈ ಜಾಡಲು ಪ್ರಾರಂಭಿಸಿದರು. ಆ ರೀತಿ ಈ ಜಾಡುವಾಗ ನೀರಿನಲ್ಲಿ ಮುಳುಗಿ 26 ವರ್ಷದ ಅವಿವಾಹಿತ ಶಿರಾಜ ಮೃತನಾಗಿದ್ದನು. ಈಜುಕೊಳ್ಳದ ಮಾಲೀಕರು ಸರಿಯಾದ ಮುಂಜಾಗರುಕತೆ ತೆಗೆದುಕೊಳ್ಳದ್ದರಿಂದ ಮತ್ತು ನುರಿತ ತರಬೇತುದಾರರನ್ನು ಅಲ್ಲಿ ಇಡದೇಇರುವುದರಿಂದ ತನ್ನ ಮಗ ನೀರಿನಲ್ಲಿ ಮುಳುಗಿ ಸತ್ತಿದ್ದಾನೆ ಕಾರಣ ಈಜುಕೊಳ್ಳದ ಮಾಲೀಕರ ನಿರ್ಲಕ್ಷವೇತನ್ನ ಮಗನ ಸಾವಿಗೆ ಕಾರಣ ಅಂತಾ ದೂರಿದ್ದರು. ಅವರಿಂದ ಸೇವಾ ನ್ಯೂನ್ಯತೆ ಆಗಿದೆ ಅಂತಾ ಹೇಳಿ ಮಾಲೀಕರಿಂದ ರೂ.40 ಲಕ್ಷರೂಪಾಯಿ ಪರಿಹಾರಕೊಡಿಸುವಂತೆ ಮೃತರತಾಯಿ ನವಲಗುಂದದ ಮೈಮುನಬಿ ಅಣ್ಣಿಗೇರಿ ಅವರು ಈಜುಕೊಳ್ಳದ ಮಾಲೀಕರ ವಿರುದ್ಧ ಅವರ ವಿರುದ್ಧ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಸಮಯ ಪ್ರಜ್ಞೆಯಿಂದ ಅವಘಡ ತಪ್ಪಿಸಿದ ಬಸ್ ಚಾಲಕ

ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ವಿಶಾಲಾಕ್ಷಿ.ಅ. ಬೋಳಶೆಟ್ಟಿ ಮತ್ತು ಪ್ರಭು.ಸಿ.ಹಿರೇಮಠ ಸದಸ್ಯರು, ವಿಚಾರಣೆಯ ಕಾಲಕ್ಕೆ ಈಜುಕೊಳ್ಳದ ಮೇಲೆ ನ್ಯೂಇಂಡಿಯಾ ಅಸುರೆನ್ಸ್ ಕಂಪನಿಯ ವಿಮೆ ಇರುವುದರಿಂದ ಅವರನ್ನು ಎದುರುದಾರರನ್ನಾಗಿ ಮಾಡಿ ವಿಚಾರಣೆ ನಡೆಸಲಾಯಿತು. ಈಜುಕೊಳ್ಳದಲ್ಲಿ ಎಲ್ಲಾ ಮುಂಜಾಗರುಕತೆ ವಹಿಸಿರುವುದಾಗಿ ಮತ್ತು ನೂರಿತ ತರಬೇತುದಾರರನ್ನು ಇಟ್ಟಿರುವುದಾಗಿ ಈಜುಕೊಳ್ಳದ ಮಾಲೀಕರು ತಕರಾರು ಎತ್ತಿದ್ದರು. ಮೃತನ ಮರಣೋತ್ತರ ಪರೀಕ್ಷಾ ವರಧಿಯಲ್ಲಿ ಮಧ್ಯದ ಸೇವನೆಯ ವಾಸನೆ ಕಂಡುಬಂದಿದ್ದರಿಂದ ಮೃತನು ವಿಮಾ ಪಾಲಸಿಯ ಷರತ್ತನ್ನು ಉಲ್ಲಂಘಿಸಿದ್ದಾನೆ ಕಾರಣತಾವು ಪರಿಹಾರಕೊಡಲು ಬದ್ಧರಲ್ಲ ಅಂತಾ ವಿಮಾ ಕಂಪನಿ ಸಹ ಆಕ್ಷೇಪಣೆ ಎತ್ತಿತ್ತು. ಈ ಬಗ್ಗೆ ಕುಲಂಕುಶ ವಿಚಾರಣೆ ನಡೆಸಿದ ಆಯೋಗ ಈಜುಕೊಳ್ಳದ ಮಾಲೀಕರು ಮತ್ತು ವಿಮಾ ಕಂಪನಿಯವರ ಆಕ್ಷೆಪಣೆಗಳನ್ನು ತಳ್ಳಿ ಹಾಕಿ ಈಜುಕೊಳ್ಳದ ಮಾಲೀಕರು ಮತ್ತು ಅದರ ವಿಮಾ ಕಂಪನಿಯವರು ದೂರುದಾರರಿಗೆ ಪರಿಹಾರ ಕೊಡಲು ಬದ್ಧರಿದ್ದಾರೆಂದು ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ಚಿಕ್ಕ ವಯಸ್ಸಿನ ಒಬ್ಬನೆ ಮಗನನ್ನು ಕಳೆದುಕೊಂಡ ತಾಯಿ, ದೂರುದಾರಳಿಗೆ ಈಜುಕೊಳ್ಳದ ಮಾಲೀಕರು ಮತ್ತು ವಿಮಾ ಕಂಪನಿಯವರು ಜಂಟಿಯಾಗಿ ಒಟ್ಟು 9 ಲಕ್ಷ 74 ಸಾವಿರ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಪರಿಹಾರ ಕೊಡಲು ಆಯೋಗ ತಿಳಿಸಿದೆ. ಬಂದ ಪರಿಹಾರದಲ್ಲಿ 5 ಲಕ್ಷ ರೂಪಾಯಿಗಳನ್ನು 5 ವರ್ಷದ ಅವಧಿಗೆ ದೂರುದಾರರ ಹೆಸರಿನಲ್ಲಿ ಅವರು ಇಚ್ಚಿಸುವ ರಾಷ್ಟ್ರೀಕೃತ ಬ್ಯಾಂಕು ಅಥವಾ ಅಂಚೆ ಕಛೇರಿಯಲ್ಲಿ ಖಾಯಂ ಠೇವಣಿಯಾಗಿ ಇಡಲು ತಿಳಿಸಿದೆ. ಉಳಿದ ಹಣ ರೂ.4 ಲಕ್ಷ 74 ಸಾವಿರ ರೂಪಾಯಿಗಳನ್ನು ಚೆಕ್ ಮೂಲಕ ದೂರುದಾರರಿಗೆ ಸಂದಾಯ ಮಾಡಲು ತೀರ್ಪಿನಲ್ಲಿ ಆದೇಶಿಸಿದೆ.

ಈ ಬಾರಿಯ ಚುನಾವಣಾ ವಿಶೇಷ ಏನು ಗೊತ್ತಾ?

Related posts

ಉದಾಸಿ ಹಾಗೂ ಸಜ್ಜನರ ಮೂಡೂರ ಗ್ರಾಮದಲ್ಲಿ ಮತಯಾಚಿಸಿದರು

eNEWS LAND Team

ಒಮಿಕ್ರೋನ್ + ಡೆಲ್ಟಾ: ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ; ಸಿಎಂ

eNewsLand Team

ಅಣ್ಣಿಗೇರಿ ರತ್ನ ಪ್ರಶಸ್ತಿ ಪ್ರದಾನ

eNEWS LAND Team