30 C
Hubli
ಮಾರ್ಚ್ 21, 2023
eNews Land
ಸುದ್ದಿ

ಅಣ್ಣಿಗೇರಿ ರತ್ನ ಪ್ರಶಸ್ತಿ ಪ್ರದಾನ

Listen to this article

ಇಎನ್ಎಲ್ ಅಣ್ಣಿಗೇರಿ: ಪಟ್ಟಣದ ಮಾಜಿ ಕ್ರೇಡಿಲ್ ಅಧ್ಯಕ್ಷ ಷಣ್ಮುಖ ಗುರಿಕಾರ ಅವರಿಗೆ ದಿ.ರಾಜಕುಮಾರ ಅಭಿಮಾನ ಬಳಗದ 5ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಅಣ್ಣಿಗೇರಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಾನಿಧ್ಯವಹಿಸಿದ್ದ ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ಶ್ರೀಗಳು ಮಾತನಾಡಿ ಸಮಾಜದಲ್ಲಿ ರಾಜಕುಮಾರ ಅಭಿಮಾನ ಬಳಗ ಜನಪರ ಕೆಲಸಗಳನ್ನು ಮಾಡುವುದರ ಮೂಲಕ ಸ್ವಸ್ತ ಸಮಾಜ ನಿರ್ಮಾಣದಡೆಗೆ ದಿಟ್ಟ ಹೆಜ್ಜೆಯನ್ನಿಡುವಂತಾಗಲಿ ಎಂದು ಹಾರೈಸಿದರು.
ನಿವೃತ್ತ ಯೋಧರಾದ ಬಸವರಾಜ ಕಪ್ಪತ್ತನವರ ಹಾಗೂ ಸಮಾಜದ ವಿವಿದ ಕ್ಷೇತ್ರದಲ್ಲಿ ಸಾಧನೆಗ್ಯದ ಸಾಧಕರನ್ನು ಸನ್ಮಾನಿಸಲಾಯಿತು.
ಅಣ್ಣಿಗೇರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಷಣ್ಮುಖ ಗುರಿಕಾರ ಮಾತನಾಡಿ,ಪಟ್ಟಣದ ಜನಪರ ಕಾರ್ಯ ಹಾಗೂ ಜೀವನದುದ್ದಕ್ಕೂ ಕೈಗೊಂಡ ಸಾಮಾಜಿಕ ಚಿಂತನೆ, ಕಳಕಳಿ, ಸೇವೆ ಗುರ್ತಿಸಿ, ರಾಜಕುಮಾರ ಹಾಗೂ ಪುನೀತ ರಾಜಕುಮಾರ ಅಭಿಮಾನ ಬಳಗ ಅಮೃತಸಿರಿ ಪ್ರಶಸ್ತಿಗೆ ಆಯ್ಕೆ ಮಾಡಿ, ನನ್ನ ಬದುಕಿನಲ್ಲಿ ದೊಡ್ಡ ಪ್ರಶಸ್ತಿ ನೀಡಿ ಗೌರವಿಸಿದ್ದಿರಿ. ಇನ್ಯಾವ ಪ್ರಶಸ್ತಿ ಅವಶ್ಯಕತೆ ನನಗಿಲ್ಲ. ಎಂದು ಭಾವುಕರಾಗಿ ಅಭಿನಂದಿಸಿದರು.
ಭದ್ರಾಪೂರ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಶಂಕ್ರಣ್ಣ ಯಾದವಾಡ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.ಬಿಜೆಪಿ ಮುಖಂಡ ಶಿವಾನಂದ ಮುತ್ತಣ್ಣವರ, ಹಾಗೂ ಜಯ ಕರ್ನಾಟಕ ಸಂಘದ ಆಧ್ಯಕ್ಷ ಸುದೀಂದ್ರ ಎಂ ಮುಧೋಳ ಸಭೆ ಉದ್ದೇಶಿಸಿ ಮಾತನಾಡಿದರು.
ಜ್ಯೂನಿಯರ್ ವಿಷ್ಣವರ್ಧನ ಅವರಿಂದ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮಗಳು ಜರುಗಿದವು. ದಿ.ಪುನೀತರಾಜಕುಮಾರ ಅವರಿಗೆ ಶೃದ್ದಾಂಜಲಿ ನುಡಿನಮನ ಸಲ್ಲಿಸಲಾಯಿತು. ಮಹಮ್ಮದ ರಫೀಕ್ ಮುಳಗುಂದ ಕರೋಕೆ ಹಾಡಿ ರಂಜಿಸಿದರು. ಪಟ್ಟಣದ ಶಾಲಾ ಕಾಲೇಜ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಬಸವರಾಜ ಮರಡ್ಡಿ, ಬಸವರಾಜ ಯಳವತ್ತಿ, ಚಂಬಣ್ಣ ಹಾಳದೋಟರ, ರವಿರಾಜ ವೇರ್ಣೆಕರ, ಅರ್ಜುನ ಕಲಾಲ, ಮುತ್ತು ಸೂಡಿ, ನಿಂಗಪ್ಪ ಸಮಾಜಿ, ಈಶಪ್ಪ ಹೊಂಬಳ, ನಿಂಗಪ್ಪ ಬಡೆಪ್ಪನವರ, ಸುಭಾಸ ಕಡೇಮನಿ, ಬಸವರಾಜ ಬಿಲ್ಲದಣ್ಣವರ, ಯಲ್ಲಪ್ಪ ಜಂತ್ಲಿ, ವಸಂತ ಬೆನಕನಹಳ್ಳಿ, ರಾಜಕುಮಾರ ಅಭಿಮಾನ ಬಳಗದ ಸರ್ವ ಸದಸ್ಯರು ಹಾಗೂ ಉಪಸ್ಥಿತರಿದ್ದರು.

Related posts

30.33 ಅನಧಿಕೃತ ಬೀಜ ದಾಸ್ತಾನು ಜಪ್ತಿ; ಪ್ರಕರಣ ದಾಖಲು

eNEWS LAND Team

ಅಂಗವಿಕರಿಗೆ ತ್ರಿಚಕ್ರ ವಾಹನ ವಿತರಿಸಿದ: ಶಾಸಕಿ ಕುಸುಮಾವತಿ

eNEWS LAND Team

ಏರುಗತಿಯಲ್ಲಿ ಸೆನ್ಸೆಕ್ಸ್ ಸೂಚ್ಯಂಕ

eNewsLand Team