27 C
Hubli
ಏಪ್ರಿಲ್ 29, 2024
eNews Land
ಜಿಲ್ಲೆ

ಅಗಡಿ ಗ್ರಾಮದಲ್ಲಿ ವಿಶೇಷ ಚೇತನರ ಸಮನ್ವಯ ವಿಶೇಷ ಗ್ರಾಮ ಸಭೆ

ಇಎನ್ಎಲ್ ಹುಬ್ಬಳ್ಳಿ:

ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ತಾಲೂಕು ಪಂಚಾಯತ ಹುಬ್ಬಳ್ಳಿ ಹಾಗೂ ಗ್ರಾಮ ಪಂಚಾಯತ ಕೋಳಿವಾಡ ಸಹಯೋಗದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆಯ ವಿಕಲಚೇತನರ ಹಕ್ಕುಗಳ ಅಭಿಯಾನ ಅಂಗವಾಗಿ ವಿಶೇಷ ಚೇತನರ ಸಮನ್ವಯ ವಿಶೇಷ ಗ್ರಾಮ ಸಭೆಯನ್ನು ಇಂದು ಅಗಡಿ ಗ್ರಾಮದ ಗ್ರಾಮ ಪಂಚಾಯತ ಸಭಾಭವನದಲ್ಲಿ ನಡೆಸಲಾಯಿತು.

ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ಮಾಂತೇಶ ಕುರ್ತಕೋಟಿ ಅವರು ವಿಕಲಚೇತನರಿಗೆ ಇರುವ ಹಕ್ಕುಗಳು ಹಾಗೂ ವಿಶೇಷ ಚೇತನರ ಇಲಾಖೆ, ಇತರೆ ಇಲಾಖೆಯಿಂದ ಯೋಜನೆಗಳು ಮತ್ತು ವಿಕಲಚೇತನರಿಗೆ ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯ ಕೆಲಸದಲ್ಲಿನ ರಿಯಾಯಿತಿ ಕುರಿತು ಮಾಹಿತಿ ನೀಡಿದರು.

ಗ್ರಾಮ ಪಂಚಾಯತ ಅಧ್ಯಕ್ಷ ತಿಪ್ಪಣ್ಣ ಬರದ್ವಾಡ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಸೋಮಶೇಖರ ಜಗದ ಮತ್ತು ಕಾರ್ಯದರ್ಶಿ ಶಶಿಧರ ಶಿದ್ದಗಿರಿ ಗ್ರಾಮ ಪಂಚಾಯಿತಿ ಅನುಧಾನದಲ್ಲಿ ವಿಕಲಚೇತನರಿಗೆ ಇರುವ ಸೌಲಭ್ಯಗಳ ಕುರಿತು ತಿಳಿಸಿದರು.

ಉಪಾಧ್ಯಕ್ಷರಾದ ಶಂಕರೆವ್ವ ಬಡಿಗೇರ, ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ ಸಿಬ್ಬಂದಿ, ವಿಶೇಷಚೇತನರು, ಪಾಲಕರು, ಗ್ರಾಮಸ್ಥರು ಭಾಗವಹಿಸಿದ್ದರು.

Related posts

ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಆರಂಭ

eNewsLand Team

ಚುನಾವಣಾ ಅಕ್ರಮ ತಡೆಯಲು ಸಾರ್ವಜನಿಕರು ‘ಸಿ-ವಿಜಿಲ್’ ಆ್ಯಪ್ ನ್ನು  ಸದ್ಬಳಕೆ ಮಾಡಿಕೊಳ್ಳಲಿ: ಡಿಸಿ ಗುರುದತ್ತ ಹೆಗಡೆ

eNEWS LAND Team

ಹುಬ್ಬಳ್ಳಿಲಿ 11 ವರ್ಷದ ಬಳಿಕ ಬಿಜೆಪಿ ರಾಜ್ಯ ಕಾರ್ಯಕಾರಿಣಿ: ಸಭೆಗೆ ಬಂದವರಿಗೆ ವಿಶೇಷ ಗಿಫ್ಟ್ ಸಿಗತ್ತೆ!!

eNewsLand Team