ಇಎನ್ಎಲ್ ಧಾರವಾಡ: ಹುಬ್ಬಳ್ಳಿಯಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಮೊದಲ ಹಂತದ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ.
ಪೂರ್ಣ ಕುಂಭದೊಂದಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನ ಹೋಟೆಲ್ ಆವರಣಕ್ಕೆ ಕರೆತಂದ ಮಹಿಳಾ ಕಾರ್ಯಕರ್ತೆಯರು ಕರತಂದರು.
ದೀನದಯಾಳ ಅವರ ಚಿಂತನೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರವ ಸಾಧನೆ ಸಾರುವ ‘ಪ್ರದರ್ಶಿನಿ’ಗೆ ಅರುಣ್ಬಸಿಂಗ್ ಚಾಲನೆ ನೀಡಿದರು.
ಬಳಿಕ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ವಿಭಾಗಿಯ ಪ್ರಭಾರಿ- ಸಹ ಪ್ರಭಾರಿ, ಹಾಗೂ ಸಂಘಟನ- ಸಹ ಸಂಘಟನ ಪ್ರಮುಖರ ಜೊತೆ ಸಭೆ ಆರಂಭವಾಯಿತು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ, ಬಿಜೆಪಿ ರಾಜ್ಯಾಧ್ಯಕ್ಷ, ಗೋವಿಂದ ಕಾರಜೋಳ ಸೇರಿದಂತೆ ಸಾಕಷ್ಟು ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.