30 C
Hubli
ಮೇ 5, 2024
eNews Land
ಸುದ್ದಿ

ಈದ್ಗಾ ಮೈದಾನ ನಿಮ್ಮಪ್ಪನ ಸ್ವತ್ತಲ್ಲ, ಸಾರ್ವಜನಿಕ ಸ್ವತ್ತು: ಪ್ರಮೋದ ಮುತಾಲಿಕ್

ಇಎನ್ಎಲ್ ಹುಬ್ಬಳ್ಳಿ: ಇಲ್ಲಿನ ಚನ್ನಮ್ಮ ಸರ್ಕಲ್ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಸರ್ಕಾರ ಹಾಗೂ ಪಾಲಿಕೆ ಮಿನಾಮೇಷ ಎಣಿಸುತ್ತಿದೆ. ಈದ್ಗಾ ಮೈದಾನವೇನೂ ನಿಮ್ಮಪ್ಪನ ಸ್ವತ್ತಲ್ಲ. ಈದ್ಗಾ ಮೈದಾನ ಸಾರ್ವಜನಿಕರ ಸ್ವತ್ತು ಎಂದು ಪ್ರಮೋದ ಮುತಾಲಿಕ್ ಹೇಳಿದರು.

       ಮುಸ್ಲಿಂ ಪ್ರಾರ್ಥನೆಗೆ ಅವಕಾಶ ನೀಡುತ್ತಾರೆ, ಆದರೆ ಗಣೇಶೋತ್ಸವ ಆಚರಣೆಗೆ ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಆಕ್ರೋಶ. ಅನುಮತಿ ಕೊಟ್ಟರೂ ಸರಿ, ಕೊಡದಿದ್ದರೂ ಸರಿ, ಗಣೇಶೋತ್ಸವ ಆಚರಣೆ ಮಾಡೇ ಮಾಡ್ತೀವಿ. ಪಾಲಿಕೆಗೆ ಇದು ಕೊನೆಯ ಗಡವು,

ಈ ಗಡುವು ಮೀರಿದ್ರೆ ನಾವು ಗಣೇಶ ಚತುರ್ಥಿ ಆಚರಣೆ ಮಾಡೇ ಮಾಡುತ್ತೇವೆ. ಸಾವಿರಾರು ಕಾರ್ಯಕರ್ತರ ನೇತೃತ್ವದಲ್ಲಿ ಈದ್ಗಾ ಮೈದಾನದಲ್ಲಿ ಗಣೇಶನನ್ನು ಕೂರಿಸುತ್ತೇವೆ. ತಾಕತ್ ಇದ್ದರೆ ಅದೇನು ಮಾಡ್ಕೋತಿರೋ ನಾವು ನೋಡ್ತೀವಿ ಎಂದು ಪಾಲಿಕೆ ಅಧಿಕಾರಿಗಳಿಗೆ ಹಾಗೂ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಪ್ರಮೋದ್ ಮುತಾಲಿಕ್.
ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೊಡಬೇಕು.
ಅವಕಾಶ ಕೊಡದೆ ಇದ್ದರೆ ಇದೇ ಆ.26 ರಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related posts

ಹಾವೇರಿ: ಜಾನುವಾರುಗಳಿಗೆ ಒಂದು ತಿಂಗಳ ಲಸಿಕಾ ಕಾರ್ಯಕ್ರಮ

eNEWS LAND Team

ಹುಬ್ಬಳ್ಳಿ: ಗಬ್ಬೂರು ವೃತ್ತದಲ್ಲಿ ರಸ್ತೆ ತಡೆದು ರೈತರ ಪ್ರತಿಭಟನೆ

eNewsLand Team

ಜಮೀರ್ ಬಸ್ ಒರೆಸಿಕೊಂಡು ಇದ್ದ, ಶಾಸಕನಾಗಿ ಮಾಡಿದ್ದು ಹೆಚ್ಡಿಕೆ….

eNEWS LAND Team