34 C
Hubli
ಮೇ 3, 2024
eNews Land
ಮಹಿಳೆ ಸುದ್ದಿ

ಫ್ಯಾಷನ್‌ಯುಗ ಮಹಿಳೆಯರಿಗೆ ಪೂರಕ: ಭಾಗ್ಯಶ್ರೀ ಜಾಗೀರದಾರ

ಇಎನ್ಎಲ್ ಕಲಘಟಗಿ: ಸ್ವಾವಲಂಬಿಗಳಾಗಲು ಮಹಿಳೆಯರಿಗೆ ವಸ್ತು-ವಿನ್ಯಾಸ ವಿದ್ಯೆಯು ಪೂರಕವಾಗಿದೆ. ಇದು ಫ್ಯಾಷನ್‌ಯುಗ ಎಂದು ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಭಾಗ್ಯಶ್ರೀ ಜಾಗೀರದಾರ ಹೇಳಿದರು.

ಇದನ್ನು ಓದಿ: ಮನೆ ಮನೆಗೆ ಕೃಷಿ ಮಾಹಿತಿ ರಥ: ಶಾಸಕ ನಿಂಬಣ್ಣವರ

ಸ್ಥಳೀಯ ಪ.ಪಂ ಸಭಾಭವನದಲ್ಲಿ ಮನು ವಿಕಾಸ ಸಂಸ್ಥೆ, ಈಡಲ್‌ಗಿವ್ ಫೌಂಡೇಶನ್ ಮತ್ತು ದಲ್ಯಾನ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಒಂದು ದಿನದ ಪುನರಾವಲೋಕನ ಸಭೆಯಲ್ಲಿ ಮಾತನಾಡಿ ಇಲ್ಲಿ ಮುಗ್ಧ ಮನಸಿನ ಜನರಿದ್ದಾರೆ, ನೀವು ಕಲಿತ ವಿದ್ಯೆಯನ್ನು ವಾಟ್ಸಾಪ್, ಫೇಸ್‌ಬುಕ್‌ಗಳ ಮೂಲಕ ಪ್ರಚಾರ, ಅನುಭವ ಪಡೆಯಿರಿ, ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮನು ವಿಕಾಸ ಸಂಸ್ಥೆಯು ತುಂಬಾ ಶ್ರಮಿಸುತ್ತಿದೆ, ಇದನ್ನು ತಾವೆಲ್ಲರೂ ಸದುಪಯೋಗಪಡಿಸಿಕೊಳ್ಳಿರಿ ಎಂದರು.

ಇದನ್ನು ಓದಿ:ಅಣ್ಣಿಗೇರಿ ಸಾರ್ವಜನಿಕ ಕೇಂದ್ರ ಗ್ರಂಥಾಲಯ ಶಾಖೆ ಗ್ರಂಥಪಾಲಕರ ವರ್ಗಾವಣೆ ರದ್ದುಗೊಳಿಸಲು ಆಗ್ರಹ
ಪ್ರಾಸ್ಥಾವಿಕವಾಗಿ ಮಾತನಾಡಿದ ಗಣಪತಿ ಯಲಿವಾಳ, ಗಣಪತಿ ಭಟ್ ಅವರ ಸತತ ಪರಿಶ್ರಮದಿಂದ 2003 ರಿಂದ ಮನುವಿಕಾಸ ಸಂಸ್ಥೆಯು ಸಾಮಾಜಿಕ ಸೇವೆ, ನೀರು ಸಂರಕ್ಷಣೆ, ಮಹಿಳಾ ಸ್ವ ಸಹಾಯ ಸಂಘಗಳ ಸ್ಥಾಪನೆ, ಸಿದ್ದಿ ಜನಾಂಗದವರಿಗೆ ಅರಿವು ಮೂಡಿಸುವುದು ಮುಂತಾದ ಜನೋಪಯೋಗಿ ಕಾರ್ಯ ಮಾಡುತ್ತಿದೆ, ಮುಂದಿನ ದಿನಗಳಲ್ಲಿ ಮಹಿಳೆಯರಿಗಾಗಿ ಕ್ಯಾಟರಿಂಗ್, ಹಾಲಿನ ಡೈರಿ ಮುಂತಾದ ತರಬೇತಿಗಳನ್ನು ಏರ್ಪಡಿಸಲಾಗುತ್ತದೆ ಎಂದರು. ಸಂಪೂನ್ಮೂಲ ವ್ಯಕ್ತಿಗಳಾದ ಪ್ರಿಯಾ ಗೋದಾನಪುರ ಮಾತನಾಡಿ ತರಬೇತಿದಾರರಿಗೂ ಪರಿಶ್ರಮ ಇರುತ್ತದೆ, ಸ್ವತ: ದುಡಿದಾಗಲೇ ಹಣದ ಬೆಲೆ ತಿಳಿಯುತ್ತದೆ ಎಂದರು. ವಿ.ಜಿ.ಅಂಗಡಿ, ಶರಣಪ್ಪ ಉಣಕಲ್, ಕ.ಸಂ.ಸೇನೆ ತಾಲೂಕಾಧ್ಯಕ್ಷ ಸಾತಪ್ಪ ಕುಂಕೂರ ಮಾತನಾಡಿದರು. ತಾಲೂಕಿನ ಹಿರಿಯ ಪತ್ರಕರ್ತ ರವಿ ಬಡಿಗೇರ, ಗೀತಾ ನೀಲಕಣಿ, ಮಾಧುರಿ ಪಟಗಾರ, ನೀಲಾ ಉಪ್ಪಿನ, ಸಂಜು ಲಮಾಣಿ, ಮಂಜುನಾಥ ತೋರ್ಲೆಕರ ಸೇರಿದಂತೆ 100ಕ್ಕೂ ಹೆಚ್ಚು ಮಹಿಳೆಯರು ಭಾಗಹಿಸಿದ್ದರು.

ಇದನ್ನು ಓದಿ:ಇಎನ್ಎಲ್ ಎಕ್ಸಕ್ಲೂಸಿವ್: ವಾಸ್ತು ಪುರುಷ ಮಟಾಶ್ ಹಿಂದಿನ ಮಸಲತ್ತಿನ ಇಂಚಿಂಚು ಇನ್ಫಾರ್ಮೇಶನ್!! ಸ್ಕೆಚ್, ಮಟಾಶ್

Related posts

ವಾಲ್ಮೀಕಿ ಪುತ್ಥಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಾಲಾರ್ಪಣೆ

eNEWS LAND Team

ಐಎನ್‌ಎಸ್ ವಾಗ್ಶೀರ್ ಲೋಕಾರ್ಪಣೆ

eNewsLand Team

ನಮ್ಮಲ್ಲಿ ಹುಟ್ಟಿದ ಜೈನ ಧರ್ಮ ಜಗತ್ತಿಗೆ ಶಾಂತಿ ಸಂದೇಶ ನೀಡುತ್ತಿದೆ: ಡಾ. ಜಿ. ಪರಮೇಶ್ವರ

eNewsLand Team