26.4 C
Hubli
ಏಪ್ರಿಲ್ 18, 2024
eNews Land
ಕೃಷಿ ಸುದ್ದಿ

ಮನೆ ಮನೆಗೆ ಕೃಷಿ ಮಾಹಿತಿ ರಥ: ಶಾಸಕ ನಿಂಬಣ್ಣವರ

ಇಎನ್ಎಲ್ ಕಲಘಟಗಿ: ಆಧುನಿಕ ಕೃಷಿಗೆ ವಿಜ್ಞಾನದ ಮೂಲಕ ಸಮಗ್ರ ಕೃಷಿ ಮಾಹಿತಿ ನಿಮ್ಮ ಮನೆ ಬಾಗಿಲಿಗೆ ಬರಲಿದೆ ಎಂದು ಶಾಸಕ ಸಿ.ಎಮ್.ನಿಂಬಣ್ಣವರ ಹೇಳಿದರು.

ಇದನ್ನು ಓದಿ:ಇಎನ್ಎಲ್ ಎಕ್ಸಕ್ಲೂಸಿವ್: ವಾಸ್ತು ಪುರುಷ ಮಟಾಶ್ ಹಿಂದಿನ ಮಸಲತ್ತಿನ ಇಂಚಿಂಚು ಇನ್ಫಾರ್ಮೇಶನ್!! ಸ್ಕೆಚ್, ಮಟಾಶ್

ಪಟ್ಟಣದ ಹನುಮಂತ ಗುಡಿ ಸರ್ಕಲ್‌ ಹತ್ತಿರದಿಂದ ಕೃಷಿ ಅಭಿಯಾನ ರಥಕ್ಕೆ ಚಾಲನೆ ನೀಡಿ ಇದೊಂದು ಸರ್ಕಾರದ ಮಹತ್ವದ ಯೋಜನೆ ಇದ್ದು, ಇದರ ಸದುಪಯೋಗ ಪಡಿಸಿಕೊಳ್ಳಲು ಹೇಳಿದರು. ಸಹಾಯಕ ಕೃಷಿ ನಿರ್ದೇಶಕ ಎನ್.ಎಫ್.ಕಟ್ಟೇಗೌಡ್ರ ಮಾತನಾಡಿ ವಿವಿಧ ಬಿತ್ತನೆ ಬೀಜಗಳ ವಿತರಣೆ, ಬೆಳೆ ವಿಮೆ, ಬೆಳೆ ಸಮೀಕ್ಷೆ, ಕೃಷಿ ಯಾಂತ್ರೀಕರಣ, ಸೂಕ್ಷ್ಮ ನೀರಾವರಿ ಯೋಜನೆ, ರಾಷ್ಟ್ರೀಯ ಆಹಾರ ಭದ್ರತೆ ಯೋಜನೆ, ಸಸ್ಯ ಸಂರಕ್ಷಣೆ, ಸಾವಯವ ಗೊಬ್ಬರ, ರೈತ ಸಿರಿ, ಸಮಗ್ರ ಕೃಷಿ ಪದ್ದತಿ, ಮುಂತಾದವುಗಳ ಮಾಹಿತಿ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ, ತಾವೆಲ್ಲರೂ ಇದರಲ್ಲಿ ಪಾಲ್ಗೊಂಡು ಉತ್ತಮ ಮಾದರಿ ಕೃಷಿಕರಾಗಿ ಆರ್ಥಿಕ ಅಭಿವೃದ್ಧಿ ಹೊಂದಿರಿ ಎಂದರು.
ಈ ಸಂದರ್ಭದಲ್ಲಿ ಪ.ಪಂ.ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ, ಗಂಗಾಧರ ಗೌಳಿ, ಸುನೀಲ್ ಗಬ್ಬೂರ, ಕೃಷ್ಣಾಜಿ ತಹಶೀಲ್ದಾರ, ಕೃಷಿ ಇಲಾಖೆ ವಿ.ವಾಯ್.ಕಟ್ಟಿ, ಎಮ್.ಸಿ.ಕುಮಚಗಿ, ಆತ್ಮಾ ಸಿಬ್ಬಂದಿಗಳಾದ ಆಕಾಶ ಪಾಟೀಲ, ಶಿವರಾಜ ಗೋಲಪ್ಪನವರ, ಹಾಗೂ ತಾಲೂಕಿನ ರೈತರು ಪಾಲ್ಗೊಂಡಿದ್ದರು.

ಇದನ್ನು ಓದಿ: ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯ ಭೀಕರ ಹತ್ಯೆ: ಲವ್ ಕಂ ರಾಜಕೀಯ ದ್ವೇಷ ಕಾರಣ ?

Related posts

ಅವನೂ ಗೆದ್ದಿಲ್ಲ, ಇವನೂ ಸೋತಿಲ್ಲ!! ಬೆಟ್ಟಿಂಗ್ ಮಾಡ್ತಿದ್ದೋರು ಮಾವನ ಮನೆಗೆ!!

eNewsLand Team

ತಾಲೂಕಾದರೂ ಬದಲಾಗದ ಅಣ್ಣಿಗೇರಿ ಹಣೆಬರಹ

eNEWS LAND Team

ಮಹಿಳಾ ಉದ್ಯಮಿಗಳಿಗೆ ಪ್ರತ್ಯೇಕ ಆರ್ಥಿಕ ಸಂಸ್ಥೆ ರಚನೆಗೆ ಚಿಂತನೆ

eNewsLand Team