24.3 C
Hubli
ಮೇ 26, 2024
eNews Land
ಸಣ್ಣ ಸುದ್ದಿ

ಮಹಿಳಾ ಸಂಘದಿಂದ ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ ದಿನಾಚರಣೆಯಂದು ಸ್ವಚ್ಚತಾ ಕಾರ್ಯಕ್ರಮ

ಇಎನ್ಎಲ್ ನವಲಗುಂದ: ಮಹಿಳಾ ಸಂಘದಿಂದ ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ ದಿನಾಚರಣೆಯಂದು ಸ್ವಚ್ಚತಾ ಕಾರ್ಯಕ್ರಮದಲ್ಲಿ ಮಹಿಳಾ ಸದಸ್ಯರು ಪಾಲ್ಗೊಂಡು ಪ್ರತಿಜ್ಞಾ ಗೈದರು.

ಗಾಂಧಿ ಜಯಂತಿ ಅಂಗವಾಗಿ ಮಹಿಳಾ ಸ್ವ ಸಹಾಯ ಸಂಘದಿಂದ ಸ್ವಚ್ಚಾತ ಸೇವಾ ಕಾರ್ಯಕ್ರಮ ಮಹಿಳೆಯರು ಮನೆಯ ಕೆಲಸದೊಂದಿಗೆ ಸ್ವ ಸಹಾಯ ಸಂಘಗಳ ಮುಖಾಂತರ ಸ್ವಾವಲಂಬಿಯಾಗಿ ಸಾಮಾಜಿಕ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕೆಂದು ಗುಮ್ಮಗೋಳ ಗ್ರಾಮದ ಪರಮ ಜ್ಯೋತಿ ಮಹಿಳಾ ಸ್ವ ಸಹಾಯ ಸಂಘದ ಅಧ್ಯಕ್ಷ ಮಾದೇವಿ ನವಲೂರ ಹೇಳಿದರು.
ಅವರು ತಾಲೂಕಿನ ಗುಮ್ಮಗೋಳ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಹಾಗೂ ಪರಮಜ್ಯೋತಿ ಮಹಿಳಾ ಸ್ವಸಹಾಯ ಸಂಘದಿಂದ ಗಾಂಧೀಜಿ ಜಯಂತಿ ಅಂಗವಾಗಿ ಸ್ವಚ್ಚತಾ ಸೇವಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಗ್ರಾಮ ಪಂಚಾಯತಿ ಅಧ್ಯಕ್ಷ ಸವಿತಾ ಗಂಗಾಧರಮಠ ಮಾತನಾಡಿ ಗುಮ್ಮಗೋಳ ಗ್ರಾಮ ಪಂಚಾಯತಿ ರಾಜ್ಯಕ್ಕೆ ಉತ್ತಮ ಗ್ರಾಮ ಪಂಚಾಯತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ತಾಲೂಕಿಗೆ ಹೆಸರು ತಂದಿರುತ್ತದೆ. ಅದನ್ನು ಯಥಾವತ್ತಾಗಿ ಸ್ವಚ್ಚತೆಯಿಂದ ಇಟ್ಟುಕೊಂಡು ಹೋಗುವುದು ಗ್ರಾಮಸ್ಥರ ಕೆಲಸವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯಿಂದ ಸ್ವಚ್ಚತಾ ಸೇವಾ ಪ್ರತಿಜ್ಞಾ ವಿಧಿ ಭೋಧಿಸಿದರು.
ಈ ಸಂದರ್ಭದಲ್ಲಿ ಗುಮ್ಮಗೋಳ ಗ್ರಾಮ ಪಂಚಾಯತಿ ಪಿ.ಡಿ.ಓ ಜಗದೀಶ ಹಡಪದ, ಉಪಾಧ್ಯಕ್ಷೆ ಮೀನಾಕ್ಷಿ ವಡ್ಡರ, ಅಕ್ಷತಾ ನವಲೂರ, ಗಂಗವ್ವ ಮಡಿವಾಳರ, ಶಿವಲೀಲಾ ರಾಮನವರ, ರತ್ನವ್ವ ನವಲೂರ, ಸುಧಾ ನವಲೂರ, ಮಾಬನಿ ನದಾಫ ಇತರರು ಇದ್ದರು.

Related posts

ಹಳೇ ಹುಬ್ಬಳ್ಳಿ ಶ್ರೀ ವೀರಭದ್ರೇಶ್ವ ಪಲ್ಲಕ್ಕಿ ಉತ್ಸವಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ

eNEWS LAND Team

ಟ್ರಾನ್ಸಫಾರ್ಮರ್ ಹಾಗೂ ವಿದ್ಯುತ್ ಕಂಬಗಳ ಸ್ಥಳಾಂತರ; ಜೂ.30 ರವರೆಗೆ ವಿದ್ಯುತ್ ವ್ಯತ್ಯಯ

eNEWS LAND Team

ನೆರವಿಗೆ ಧಾವಿಸಿದ ಸಂಸದ ಪ್ರತಾಪ್ ಸಿಂಹ

eNEWS LAND Team