38 C
Hubli
ಮೇ 6, 2024
eNews Land
ಸುದ್ದಿ

ನದಿಗೆ ಬಿದ್ದ ಸೈನಿಕರ ವಾಹನ; ಏಳು ಸೈನಿಕರು ಹುತಾತ್ಮ

ಇಎನ್ಎಲ್ ಲೇಹ್: ತುರ್ತುಕ್ ಸೆಕ್ಟರ್‌ನ ಶ್ಯೋಕ್ ನದಿಗೆ ವಾಹನ ಬಿದ್ದ ಪರಿಣಾಮ 7 ಸೈನಿಕರು ಹುತಾತ್ಮರಾಗಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

26 ಸೈನಿಕರ ತಂಡವು ಪಾರ್ತಾಪುರದ ಟ್ರಾನ್ಸಿಟ್ ಕ್ಯಾಂಪ್‍ನಿಂದ ಉಪವಲಯದ ಹನೀಫ್‍ಗೆ ತೆರಳುತ್ತಿತ್ತು. ಈ ವೇಳೆ ವಾಹನವು ರಸ್ತೆಯಲ್ಲಿ ಸ್ಕಿಡ್ ಆಗಿ ಶ್ಯೋಕ್ ನದಿಯಲ್ಲಿ ಬಿದ್ದಿದೆ. ಇದರ ಪರಿಣಾಮವಾಗಿ ಎಲ್ಲರಿಗೂ ಗಾಯಗಳಾಗಿವೆ ಎಂದು ಭಾರತೀಯ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.

ದ ಕಾಶ್ಮೀರ ಫೈಲ್ಸ್: ಕಲಾವಿದೆಗೆ ಗುಂಡಿಕ್ಕಿದ ನರರಾಕ್ಷಸರು!!

ಶುಕ್ರವಾರ ಲಡಾಖ್‍ನ ತುರ್ತುಕ್ ಸೆಕ್ಟರ್‌ನ ಶ್ಯೋಕ್ ನದಿಯ ಬಳಿ ಸೈನಿಕರು ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದರು. ಅವರ ವಾಹನ ಸ್ಕಿಡ್ ಆಗಿ ಕಮರಿಗೆ ಉರುಳಿದೆ. ಪರಿಣಾಮ 7 ಯೋಧರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ಕೊಟ್ಟ ಅಧಿಕಾರಿಗಳು ಗಾಯಗೊಂಡ ಸೈನಿಕರಿಗೆ ಉತ್ತಮ ವೈದ್ಯಕೀಯ ಆರೈಕೆಯನ್ನು ನೀಡಲು ಎಲ್ಲ ಪ್ರಯತ್ನ ನಡೆಯುತ್ತಿವೆ ಎಂದು ತಿಳಿಸಿದೆ.

Related posts

SPECIAL TRAINS BETWEEN DANAPUR AND BENGALURU

eNEWS LAND Team

ಮಜೇಥಿಯಾ ಫೌಂಡೇಶನ್: ಕೆಸಿಟಿಆರ್‌ಐ ಕ್ಯಾಂಪಸ್‌ನ ಹಾಸ್ಪೈಸ್ ರಮಿಲಾ ಪ್ರಶಾಂತಿ ಮಂದಿರದಲ್ಲಿ ಜಾಗತಿಕ ಶಸ್ತ್ರಚಿಕಿತ್ಸಾ ದಿನಾಚರಣೆ

eNEWS LAND Team

ಆಡಳಿತ ವೈಫಲ್ಯ: ರಿಲಯನ್ಸ್‌ ಕ್ಯಾಪಿಟಲ್‌ ಆಡಳಿತ ಮಂಡಳಿ ರದ್ದು!

eNewsLand Team