24 C
Hubli
ಸೆಪ್ಟೆಂಬರ್ 27, 2023
eNews Land
ಸುದ್ದಿ

30.33 ಅನಧಿಕೃತ ಬೀಜ ದಾಸ್ತಾನು ಜಪ್ತಿ; ಪ್ರಕರಣ ದಾಖಲು

ಇಎನ್ಎಲ್ ಹುಬ್ಬಳ್ಳಿ: ಹುಬ್ಬಳ್ಳಿ ಶಹರದ ಅಮರಗೋಳದ ಎಪಿಎಂಸಿ ಆವರಣದಲ್ಲಿರುವ ವಿವಿಧ ಬಿತ್ತನೆ ಬೀಜಗಳ ದಾಸ್ತಾನು ಮಳಿಗೆಗಳಿಗೆ ಕೃಷಿ ಇಲಾಖೆಯ ಜಾಗೃತ ದಳದ ಅಧಿಕಾರಿಗಳ ತಂಡ ಭೇಟಿ ನೀಡಿ ಸುಮಾರು 30.33 ಲಕ್ಷ ರೂ.ಮೌಲ್ಯದ ಅನಧಿಕೃತ ಬಿತ್ತನೆ ಬೀಜ ದಾಸ್ತಾನು ವಶಪಡಿಸಿಕೊಂಡು ,ಎರಡು ಅಂಗಡಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:ಮೋದಿ ಮೋದಿಯೇ ನೆಹರು ನೆಹರುನೇ‌ ಎಂದು ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟಾಂಗ್

ಮೆ. ಗಾಯತ್ರಿದೇವಿ ಅಗ್ರೋ ಸರ್ವೀಸಸ್ ಮಾರಾಟ ಮಳಿಗೆಯಲ್ಲಿ ಹೈಬ್ರಿಡ್ ಮುಸುಕಿನ ಜೋಳ ಎಂಎಎಚ್ 14- 5 ತಳಿಯ 32 ಕ್ವಿಂಟಾಲ್, ಡೆಲ್ಟಾ 90 ವಿ 90 ತಳಿಯ 28 ಕ್ವಿಂಟಾಲ್, ಹೈ. ಮುಸುಕಿನ ಜೋಳ ಈಗಲ್ 10 ತಳಿಯ 22 ಕ್ವಿಂಟಾಲ್, ಹೈ. ಮುಸುಕಿನ ಜೋಳ ಈಗಲ್ 20 ತಳಿಯ 24.4 ಕ್ವಿಂಟಾಲ್ ಮತ್ತು ಸೋಯಾಬಿನ್ 26.75 ಕ್ವಿಂಟಾಲ್ ಸೇರಿದಂತೆ ಒಟ್ಟಾರೆಯಾಗಿ ರೂ.18.48 ಲಕ್ಷ ಮೌಲ್ಯದ ಅನಧಿಕೃತವಾಗಿ ಸಂಗ್ರಹಿಸಿದ ದಾಸ್ತಾನನ್ನು ಜಪ್ತಿ ಮಾಡಲಾಯಿತು.

ಇದನ್ನೂ ಓದಿ:ಮೂರು, ನಾಲ್ಕನೇ ರಂಗ ಸೃಷ್ಟಿಯಾದರೂ ಬಿಜೆಪಿಗೆ ಸಾಟಿಯಾಗಲ್ಲ: ಶೆಟ್ಟರ್

ಮೆ. ಈಗಲ್ ಸೀಡ್ಸ್ ಆ್ಯಂಡ್ ಬಯೋಟೆಕ್ ಲಿಮಿಟೆಡ್ ಮಾರಾಟ ಮಳಿಗೆಯಲ್ಲಿ ಹೈ.ಮುಸುಕಿನ ಜೋಳ ಈಗಲ್ 10 ತಳಿಯ 33.20 ಕ್ವಿಂಟಾಲ್, ಹೈ. ಮುಸುಕಿನ ಜೋಳ ಈಗಲ್ 20 ತಳಿಯ 30 ಕ್ವಿಂಟಾಲ್ ಸೇರಿದಂತೆ ಒಟ್ಟಾರೆಯಾಗಿ ರೂ.11.85 ಲಕ್ಷ ಮೌಲ್ಯದ ಅನಧಿಕೃತ ದಾಸ್ತಾನನ್ನು ಜಪ್ತಿ ಮಾಡಲಾಯಿತು.

ಇದನ್ನೂ ಓದಿ:ಸನ್ನಡತೆ; ಐದು ಜೈಲು ಹಕ್ಕಿಗಳೀಗ ಫ್ರೀ ಬರ್ಡ್ಸ್!! ಯಾರವರು??

ಈ ಎರಡೂ ಅಂಗಡಿಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಕ್ರಮ ಕೈಗೊಳ್ಳಲಾಯಿತು.

ಜಾಗೃತ ದಳದ ಅಧಿಕಾರಿಗಳಾದ
ರಾಘವೇಂದ್ರ ಬಮ್ಮಿಗಟ್ಟಿ, ವಿ.ವಿ. ವಿಠ್ಠಲರಾವ್ , ಉಪ ಕೃಷಿ ನಿರ್ದೇಶಕರಾದ ಮಂಜುನಾಥ ಅಂತರವಳ್ಳಿ ನೇತೃತ್ವದಲ್ಲಿ ಪರಿಶೀಲನೆ ನಡೆಯಿತು.

Related posts

ಅಪ್ರಾಪ್ತೆ ಮೇಲೆ ಅತ್ಯಾಚಾರ: ಬೆಚ್ಚಿಬಿದ್ದ ಧಾರವಾಡ

eNewsLand Team

 ದ.ಆಫ್ರಿಕಾದ ಹೋರಾಟಗಾರ ಡೆಸ್ಮಂಡ್‌ ಟುಟು ನಿಧನ

eNewsLand Team

ಮಿನಿ ಉದ್ಯೋಗ ಮೇಳ: ನವನಗರ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ

eNEWS LAND Team