30 C
Hubli
ಮೇ 5, 2024
eNews Land
ಸುದ್ದಿ

ಸರ್ಕಾರದ ವಿರುದ್ಧ ಬಹಿರಂಗವಾಗೇ‌ ಜಗದೀಶ ಶೆಟ್ಟರ್ ಅಸಮಾಧಾನ: ಸಿಎಂ ನಿರ್ಧಾರದ ಬಗ್ಗೆಯೂ..!

ಇಎನ್ಎಲ್ ಬೆಂಗಳೂರು

ಜಿಲ್ಲಾ ಉಸ್ತುವಾರಿ ನೇಮಕದ ಬಗ್ಗೆ ಅಸಮಧಾನ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸರ್ಕಾರದ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಈ ಬಗ್ಗೆ ಸೂಚ್ಯವಾಗಿ ಪಕ್ಷದ ವರಿಷ್ಠರ ಜೊತೆಗೂ ಚರ್ಚೆ ಮಾಡುವುದುದಾಗಿ ಎಚ್ಚರಿಕೆ ನೀಡಿದರು ‌

ಬುಧವಾರ ಹುಬ್ಬಳ್ಳಿ ಸುದ್ದಿಗಾರರ ಜೊತೆ ಮಾತನಾಡಿರುವ ಶೆಟ್ಟರ್, ಆಯಾ ಜಿಲ್ಲೆಯ ಸಚಿವರಿಗೆ ಉಸ್ತುವಾರಿ ನೀಡಬೇಕಿತ್ತು. ಇದು ನನ್ನ ವಯುಕ್ತಿಕ ಅಭಿಪ್ರಾಯ.
ನನ್ನ ಪ್ರಕಾರ ಇದು ಇನ್ ಕನ್ವಿನೆಂಟ್ ಆಗುತ್ತೆ.
ಆಡಳಿತ ಅಭಿವೃದ್ಧಿ ದೃಷ್ಟಿಯಿಂದ ಆಯಾ ಜಿಲ್ಲೆಯವರಿಗೆ ನೀಡಿದ್ರೆ ಒಳ್ಳೆದಾಗುತ್ತಿತ್ತು. ನಾನು ಈಗಾಗಲೇ ಸಿಎಂ ಗಮನಕ್ಕೂ ತಂದಿದ್ದೇನೆ. ಆದ್ರೆ ಪಕ್ಷದ ಪಾಲಿಸಿ,ಪ್ರಯೋಗವಿದೆ‌. ನೋಡೋಣ ಇದು ಯಾವ ರೀತಿ ಪರಿಣಾಮ ಬೀರುತ್ತೆ ಎನ್ನೋದು ಗೊತ್ತಾಗುತ್ತೆ‌. ಅದನ್ನ ನೋಡಿಕೊಂಡು ಪಕ್ಷದ ವರಿಷ್ಠರ ಜೊತೆ ಮಾತನಾಡುತ್ತೇವೆ‌. ಆದ್ರೆ ಬೇರೆ ಜಿಲ್ಲೆಯ ಸಚಿವರಿಗೆ ಉಸ್ತುವಾರಿ ನೀಡಿದ್ದು ಸರಿಯಲ್ಲ ಎಂದು ಹೇಳಿದರು ‌
ಇನ್ನು, ಬಿಜೆಪಿಯ ಕೆಲ ಶಾಸಕರು ನನ್ನ ಸಂರ್ಪಕದಲ್ಲಿದ್ದಾರೆ ಎನ್ನೋ ಸಿದ್ದರಾಮಯ್ಯ ಹೇಳಿಕೆ ವಿಚಾರ‌. ಸುಮ್ನೆ ಹುಳ ಬಿಡೋ ಕೆಲಸ ಸಿದ್ದರಾಮಯ್ಯ ಮಾಡ್ತಿದ್ದಾರೆ.
ಅದು ನಿಜವಾಗಿದ್ರೆ ಹೆಸರು ಬಹಿರಂಗ ಪಡಿಸಲಿ.
ಧೈರ್ಯವಿದ್ರೆ ಹೆಸರು ಬಹಿರಂಗ ಪಡಿಸಿಲಿ.
ಕದ್ದು ಮುಚ್ಚಿ ಮಾಡೋದು ಅವಶ್ಯಕತೆ ಇಲ್ಲ.
ಈ ರೀತಿ ಹೇಳಿ ಬಿಜೆಪಿ ಬಗ್ಗೆ ನೆಗಿಟಿವಿಟಿ ಕ್ರಿಯೇಟ್ ಮಾಡ್ತಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರೋಕೆ ಹೊರಟಿರೋರು ಮುರ್ಖರು‌. ಈಗ ಕಾಂಗ್ರೆಸ್ ನ್ನ ದೇಶದಲ್ಲಿ ದುರ್ಬಿನ್ ಹಾಕಿಕೊಂಡು ಹುಡುಕಬೇಕಿದೆ.
ಬಿಜೆಪಿಯನ್ನ ಅಲುಗಾಡಿಸೋಕೆ ಯಾರಿದಂದಲೂ ಸಾಧ್ಯವಿಲ್ಲ ಎಂದರು.

Related posts

ಹೆಲಿಕಾಪ್ಟರ್ ಪತನ; ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್‌) ಬಿಪಿನ್‌ ರಾವತ್‌ ನಿಧನ

eNewsLand Team

ಬರ್ಬರ ಹತ್ಯೆಗೈದು ಹಳಿ ಮೇಲೆ ಒಗೆದುಹೋದ ದುಷ್ಕರ್ಮಿಗಳು

eNewsLand Team

SWR: CHANGE IN TRAIN SERVICES/ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ

eNEWS LAND Team