35 C
Hubli
ಮೇ 11, 2024
eNews Land
ಸಣ್ಣ ಸುದ್ದಿ

ಅಣ್ಣಿಗೇರಿ: ಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರಿಜೀ ಜನ್ಮದಿನ

ಇಎನ್‌ಎಲ್ ಅಣ್ಣಿಗೇರಿ: ಪಟ್ಟಣದ ಶ್ರೀಮತಿ ನಿಂಗಮ್ಮ ಎಸ್ ಹೂಗಾರ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಮಹಾತ್ಮಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜಿ ಜನ್ಮದಿನಾಚರಣೆ ಸಂಭ್ರಮದಿoದ ಆಚರಿಸಲಾಯಿತು.
ಪ್ರಾಥಮಿಕ,ಪ್ರೌಢಶಾಲೆ, ಪದವಿ ಪೂರ್ವ ಕಾಲೇಜ ವಿಭಾಗದ ಶಿಕ್ಷಕರು, ಶಿಕ್ಷಕಿಯರು, ವಿದ್ಯಾರ್ಥಿಗಳು, ಮಹಾವಿದ್ಯಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡಿದರು. ಎನ್.ಎಸ್.ಎಸ್.ಸ್ವಯಂ ಸೇವಕ ಸೇವಕಿಯರು 1969 ರಲ್ಲಿ ಆರಂಭಗೊ0ಡ ಮಹತ್ಮಾ ಗಾಂಧೀಜಿ ಕನಸಿನ ಸ್ವಚ್ಛತಾ ಭಾರತದ ಅಭಿಯಾನದಲ್ಲಿ ತೊಡಗಿದರು.
ಮಹತ್ಮಾಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಜಿ ಜನ್ಮದಿನಾಚರಣೆ ನಿಮಿತ್ಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು.
ಅಧ್ಯಕ್ಷತೆವಹಿಸಿದ ಪ್ರಧಾನ ಗುರುಮಾತೆ ಕುಸುಮಾ ಹಡಗಲಿ ಮಾತನಾಡಿ ಗಾಂಧೀಜಿಯವರು ಅಹಿಂಸಾ ಮಾರ್ಗ, ಸತ್ಯದ ಮಾರ್ಗ ಪಾಲಿಸಿ, ದೇಶಕ್ಕೆ ಸ್ವಾತಂತ್ರ್ಯ ತಂದ ಕೊಟ್ಟರು. ಅವರ ಆದರ್ಶ ತತ್ವಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಸನ್ಮಾರ್ಗದತ್ತ ನಡೆದು ಅವರ ಕನಸನ್ನು ಸಾಕಾರಗೊಳಿಸುವಲ್ಲಿ ಸನ್ನದ್ದರಾಗಬೇಕೆಂದರು.
ಮುಖ್ಯ ಅತಿಥಿ ಶಿಕ್ಷಕಿ ರೂಪಾ ವಂಡಕರ ಮಾತನಾಡಿ ಗಾಂಧೀಜಿ ಅವರು ಬದುಕಿನ ನೈಜ ಘಟನೆಗಳು, ಹೋರಾಟ, ದೇಶಪ್ರೇಮ, ದೇಶಭಕ್ತಿ, ಕುರಿತು ವಿವರಿಸಿದರು.ಮಹತ್ಮಾ ಗಾಂಧೀಜಿಯವರು ಜೊತೆ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರು ಪ್ರಮುಖ ಪಾತ್ರವಹಿಸಿರುವುದನ್ನು ಸ್ಮರಿಸಿದರು, ಕರೋ ಯಾ ಮರೋ ಎಂಬ ಘೋಷಣೆ ಮಾಡಿಸಿದರು. ದಕ್ಷಿಣ ಆಪ್ರೀಕಾದಲ್ಲಿ ಕರಿಯರು, ಬಿಳಿಯರು ಬೇಧಭಾವ ಹೋಗಲಾಡಿಸುವ ಹೋರಾಟದಲ್ಲಿ ತೊಡಗಿದರು ಎಂದರು.
ವಿದ್ಯಾರ್ಥಿಗಳು ಮಹತ್ಮಾಗಾಂಧೀಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರೀ ಕುರಿತು ಭಾಷಣಗಳನ್ನು ಮಾಡಿದರು. ದೇಶಭಕ್ತಿಗೀತೆಗಳನ್ನು ಹಾಡಿದರು. ಸೌಮ್ಯ ಸೋಲಾರಗೊಪ್ಪ ನಿರೂಪಿಸಿದರು. ಸವಿತಾ ದುಂದೂರ ಸ್ವಾಗತಿಸಿದರು. ನಾಗವೇಣಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಎಸ್.ಎಸ್.ಹರ್ಲಾಪೂರ, ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಅಧ್ಯಾಪಕರು. ಶಿಕ್ಷಕರು. ವೃಂದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related posts

ಅಣ್ಣಿಗೇರಿ ಗಾಣಿಗ ಸಮುದಾಯ ಟ್ರಸ್ಟ್ ಭೂಮಿಪೂಜೆ: ಮಾಜಿ ಡಿಸಿಎಂ ಲಕ್ಷ್ಮಣ ಸವದಿ: 21ಲಕ್ಷ ಭರವಸೆ

eNEWS LAND Team

ಹಳೇ ಹುಬ್ಬಳ್ಳಿ ಶ್ರೀ ವೀರಭದ್ರೇಶ್ವ ಪಲ್ಲಕ್ಕಿ ಉತ್ಸವಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ

eNEWS LAND Team

ಅಣ್ಣಿಗೇರಿ: ವಸತಿ ಯೋಜನೆಗಳಿಗೆ ಅರ್ಜಿ ಅಹ್ವಾನ

eNEWS LAND Team