25.2 C
Hubli
ಮೇ 22, 2024
eNews Land
ಸುದ್ದಿ

ಟಿಕೆಟ್ ಕೈತಪ್ಪಲು ಬಿ.ಎಲ್. ಸಂತೋಷ ಕಾರಣ: ಜಗದೀಶ ಶೆಟ್ಟರ್. ಮಾನಸ ಪುತ್ರ ಯಾರು?

ಇಎನ್ಎಲ್ ಹುಬ್ಬಳ್ಳಿ: ಇಂದು ಶೆಟ್ಟರು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಂತೋಷ ಅವರು ತಮ್ಮ ಮಾನಸ ಪುತ್ರ ಮಹೇಶ ಟೆಂಗಿನಕಾಯಿಗೆ ಟಿಕೆಟ್ ನೀಡುವ ಸಲುವಾಗಿ ಪಕ್ಷವನ್ನು ಕಟ್ಟಿ ಬೆಳೆಸಿದರನ್ನ ಹೊರಹೋಗುವ ಪರಿಸ್ಥಿತಿಯನ್ನು ಪಕ್ಷದಲ್ಲಿ ಸೃಷ್ಟಿಸಲಾಗುತ್ತಿದೆ.

ಈ ಹಿಂದೆ ಸಂತೋಷ ಅವರು ಪ್ರಚಾರ ಮಾಡಿದ, ಉಸ್ತುವಾರಿ ವಹಿಸಿಕೊಂಡ ರಾಜ್ಯಗಳು ಸೋತಿವೆ. ಆದರೂ ವರಿಷ್ಠರು ಈ ವಿಧಾನಸಭಾ ಚುನಾವಣೆಯಲ್ಲಿ ‌ರಾಜ್ಯದ ಉಸ್ತುವಾರಿ‌ ಏಕೆ ನೀಡಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ.

ಟಿಕೆಟ್ ವಿಷಯದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಎಂ‌  ಬೊಮ್ಮಾಯಿ ಗಟ್ಟಿ‌ಯಾದ ನಿಲುವು ತಾಳಲಿಲ್ಲ. ಬಾಯಿಮಾತಲ್ಲಿ ವರಿಷ್ಠರೊಂದಿಗೆ ಮಾತನಾಡಿದ್ದೇನೆ ಅಂತ ಹೇಳಿದರು.

ಬಿಜೆಪಿ ನನ್ನನ್ನು ಚಿಕ್ಕ ಮಕ್ಕಳ ಹಾಗೆ ನಡೆಸಿಕೊಂಡಿದೆ. ಧರ್ಮೆಂದ್ರ ಪ್ರಧಾನ್ ಅವರು ಕರೆ ಮಾಡಿ ಕ್ಷೇತ್ರದಲ್ಲಿ ಬೇರೆಯವರಿಗೆ ಟಿಕೆಟ್ ನೀಡಲಾಗುತ್ತಿದೆ. ಕೂಡಲೆ ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿ ಕಳಿಸಿ ಅಂತಾ ಹೇಳುತ್ತಾರೆ. ಸೌಜನ್ಯಕ್ಕಾದರೂ ನನಗೆ ಯಾವ ಕಾರಣಕ್ಕೆ ಟಿಕೆಟ್ ನೀಡಲಾಗುತ್ತಿಲ್ಲ ಅನ್ನುವುದನ್ನ ಹೇಳಲಿಲ್ಲ.

ಬಿಜೆಪಿ ಕಟ್ಟಿ ಬೆಳಸಿದ ನನಗೆ ವಲ್ಲದ ಮನಸ್ಸಿನಿಂದ, ನೋವಿನಿಂದ ಹೊರಹೋಗುವಂತಾಯಿತು ಎಂದು ಭಾವುಕರಾದ ಶೆಟ್ಟರ್.
ಸಂತೋಷ ಅವರು ಅವರ ಮಾನಸಪುತ್ರನಿಗೆ ನೀಡಿದ ಪ್ರೀತಿಯಲ್ಲಿ ನನಗೆ 1% ನೀಡಿದ್ದರೆ ಈ ಬೆಳವಣಿಗಳು ಆಗುತ್ತಿರಲಿಲ್ಲ.

ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ನಿಷ್ಟನಾಗಿ ಅವರು ನೀಡುವ ಜವಾಬ್ದಾರಿ ವಹಿಸಿಕೊಂಡು ಪಕ್ಷದ ಏಳ್ಗೆಗೆ ಶ್ರಮಿಸುವುದಾಗಿ ಶೆಟ್ಟರ್ ಹೇಳಿಕೆ.

Related posts

RUNNING OF SUMMER SPECIAL TRAIN BETWEEN SECUNDERABAD AND ARSIKERE

eNewsLand Team

ವಿಧಾನಸಭಾ ಚುನಾವಣೆ ನಿಮಿತ್ಯ ಧಾರವಾಡ ಜಿಲ್ಲೆಗೆ ನಿಯೋಜಿತರಾದ ಸಾಮಾನ್ಯ ವೀಕ್ಷಕರ ವಿವರ ನೋಡಿ!

eNEWS LAND Team

ಹುಬ್ಬಳ್ಳಿ ಬಾಲ್ಯವಿವಾಹ; ಬ್ಲ್ಯಾಕ್ ಮೇಲ್

eNewsLand Team