29 C
Hubli
ಮೇ 2, 2024
eNews Land
ಸುದ್ದಿ

ಅಂಧರ ಬಾಳಿಗೆ ಬೆಳಕಾದ ಲೂಯಿಸ್ ಬ್ರೈಲ್

ಇಎನ್ಎಲ್  ಹುಬ್ಬಳ್ಳಿ 

ಅಂಧರ ಬಾಳಿಗೆ ಲೂಯಿಸ್ ಬ್ರೆöÊಲ್ ಬೆಳಕಾಗಿದ್ದಾರೆ ಎಂದು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ಮಾಂತೇಶ ಕುರ್ತಕೋಟಿ ಹೇಳಿದರು.

ಇಂದು ಸಿದ್ದಾರೂಢ ಮಠದ ಅಂಧ ಬಾಲಕರ ಸರ್ಕಾರಿ ಶಾಲೆಯಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಇಲಾಖೆಯಿಂದ ಆಯೋಜಿಸಲಾಗಿದ್ದ ವಿಶ್ವ ಲೂಯಿಸ್ ಬ್ರೈಲ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಲೂಯಿಸ್ ಬ್ರೆöÊಲ್ ಅವರು ದೃಷ್ಟಿಹೀನರ ಬದುಕಿಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ. ವಿದ್ಯಾರ್ಥಿಗಳು ಅಂಗವೈಕಲ್ಯವನ್ನು ಮೆಟ್ಟಿ ನಿಂತು ಸಮಾಜದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜಕುಮಾರ ಸಾಬೋಜಿ ಮಾತನಾಡಿ, ಮಕ್ಕಳು ಲೂಯಿಸ್ ಬ್ರೆöÊಲ್ ತರಹ ಒಬ್ಬ ಸಾಧಕರಾಗಬೇಕು. ಸಮಾಜದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳಬೇಕು ಎಂದರು.

ನಿವೃತ್ತ ಶಿಕ್ಷಕ ಸುರೇಂದ್ರ ಜೋರಾಪುರಿ, ಅಣ್ಣಪ್ಪ ಕೋಳಿ ಅವರು ಶಿಕ್ಷಣದ ಕುರಿತು ಮಾತನಾಡಿದರು.

ವಿದ್ಯಾರ್ಥಿ ರಪೀಕ ಮುಲ್ಲಾ ಲೂಯಿಸ್ ಅವರ ಜೀವನ ಚರಿತ್ರೆ ಕುರಿತು ಭಾಷಣ ಮಾಡಿದರು.

ಇದೇ ಸಂದರ್ಭದಲ್ಲಿ ಲೂಯಿಸ್ ಬ್ರೆöÊಲ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಶಾಲೆಯ ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.
ಅಡವಿಶಯ್ಯ ಎಚ್.ಎಸ್. ಸರ್ ನಿರೂಪಿಸಿದರು. ರುದ್ರಪ್ಪ ತಿರ್ಲಾಪುರ ವಂದಿಸಿದರು.

Related posts

ತಾಲೂಕಿನ ಆಡಳಿತದ ನಡೆ ದುಂದೂರ ಗ್ರಾಮದ ಕಡೆ

eNEWS LAND Team

ಕೃಷಿ ವಿವಿ 35 ನೇ ಘಟಿಕೋತ್ಸವ: ಚಿನ್ನದ ಪದಕ ಪಡೆದವರು ಎಷ್ಟು ನೋಡಿ?

eNEWS LAND Team

ಆರೋಗ್ಯ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡುವ ಕುರಿತು ಚರ್ಚೆ: ಸಿಎಂ ಬೊಮ್ಮಾಯಿ

eNewsLand Team