35 C
Hubli
ಮೇ 1, 2024
eNews Land
ಕೃಷಿ

ರಾಜ್ಯದಲ್ಲಿ ಶೀಘ್ರದಲ್ಲೇ ಹೆಸರು ಖರೀದಿ ಕೇಂದ್ರ ಆರಂಭ: ಕೇಂದ್ರ ಸಚಿವ ಜೋಶಿ

ಇಎನ್ಎಲ್ ನವದೆಹಲಿ: ಕರ್ನಾಟಕದಲ್ಲಿ ಬೆಳೆಯುವ ಆಹಾರ ಧಾನ್ಯಗಳಲ್ಲಿ ಹೆಸರುಕಾಳು ಬೆಳೆ ಅತ್ಯಂತ ಮಹತ್ತರ ಮತ್ತು ಅಧಿಕ ಮಟ್ಟದಲ್ಲಿ ಈ ಬಾರಿಯ ಮುಂಗಾರಿನಲ್ಲಿ ಬೆಳೆದಿದ್ದು ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಅತ್ಯಂತ ಅಧಿಕ ಮಟ್ಟದ ಇಳುವರಿ ಬಂದಿದೆ. ಜಿಲ್ಲೆಯಿಂದ ಜಿಲ್ಲೆಗೆ ಈ ಬೆಳೆಯ ಮಾರುಕಟ್ಟೆಯ ಬೆಲೆಯು ವಿಭಿನ್ನವಾಗಿದ್ದು ಭಾರತ ಸರ್ಕಾರ ನಿಗದಿ ಪಡಿಸಿದ ಬೆಂಬಲ ಬೆಲೆಗಿಂತ ಇದು ಕಡಿಮೆ ಆಗಿದೆ.

ರಾಜ್ಯ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಹೆಸರುಕಾಳು ಬೆಲೆಯನ್ನು ಬೆಂಬಲ ಬೆಲೆ ಯೋಜನೆ ಅಡಿ ಖರೀದಿ ಮಾಡಲು ಕೇಂದ್ರಗಳನ್ನು ತೆರೆಯಲು ಕೋರಿ ಪತ್ರ ಬರೆದಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಈ ನಿಟ್ಟಿನಲ್ಲಿ ರಾಜ್ಯದ ಹೆಸರುಕಾಳು ಬೆಳೆದ ರೈತರ ಪರವಾಗಿ ಕೇಂದ್ರದ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್  ಅವರಿಗೆ ಮನವಿ ಮಾಡಿದ್ದು ಅವರು ಅತೀ ಶೀಘ್ರದಲ್ಲಿ ರಾಜ್ಯದ ವಿವಿಧ ಪ್ರದೇಶಗಳಲ್ಲಿ  ಹೆಸರು ಕಾಳನ್ನು ಬೆಂಬಲ ಯೋಜನೆಯಡಿ ಪ್ರತಿ ಕ್ವಿಂಟಲ್ ಗೆ  7755/- ರೂ. ನಂತೆ ಖರೀದಿ ಮಾಡಲು ಕೇಂದ್ರಗಳನ್ನು ತೆರೆಯುವುದಾಗಿ ತಿಳಿಸಿದ್ದಾರೆ ಎಂದು ಕೇಂದ್ರ ಸಚಿವ ಜೋಶಿ ತಿಳಿಸಿ. ಮನವಿಗೆ ಸ್ಪಂದಿಸಿದ ಕೇಂದ್ರ ಕೃಷಿ ಸಚಿವರಿಗೆ ಧನ್ಯವಾದ ತಿಳಿಸಿದ್ದಾರೆ.

Related posts

ಡೆಲ್ಲಿಯಲ್ಲಿ ಕೂತು ಮಹಾದಾಯಿ ಬಗ್ಗೆ ಮಹತ್ವದ ಅಪ್ಡೇಟ್ ಕೊಟ್ಟ ಡಿಕೆಶಿ; ಏನದು?

eNewsLand Team

ಕೃಷಿ ಕಾಯಿದೆ ಹಿಂಪಡೆತದ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದೇನು?

eNEWS LAND Team

ಮೆಕ್ಕೆಜೋಳ ಬೆಳೆಯುವ ರೈತರು ತಪ್ಪದೇ ನೋಡಿ, ಗಂಗಾ ಕಾವೇರಿ ಸೀಡ್ಸ್ ಕಂಪನಿಗೆ ದಂಡ!

eNEWS LAND Team