25 C
Hubli
ಮೇ 25, 2024
eNews Land
ಮಹಿಳೆ ರಾಜ್ಯ ಸಣ್ಣ ಸುದ್ದಿ

ಮಾಲಿನಿ ಮಲ್ಯ ನಿಧನ: ನಳಿನ್‍ಕುಮಾರ್ ಕಟೀಲ್ ಸಂತಾಪ

ಇಎನ್ಎಲ್ ಬೆಂಗಳೂರು: ಪ್ರಖ್ಯಾತ ಬರಹಗಾರ ಕೋಟ ಡಾ. ಶಿವರಾಮ ಕಾರಂತ ಅವರ ಆಪ್ತ ಸಹಾಯಕಿ ಮತ್ತು ಕೋಟ ಡಾ. ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಅಧ್ಯಕ್ಷೆ ಮಾಲಿನಿ ಮಲ್ಯ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ಸೂಚಿಸಿದ್ದು, ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಕಾರಂತರ ಆಪ್ತ ಸಹಾಯಕಿಯಾಗಿ ದುಡಿದ ಮಾಲಿನಿ ಮಲ್ಯ, ಕಾರಂತರ ಕೊನೆಕ್ಷಣದವರೆಗೂ ಅವರ ಜೊತೆಗಿದ್ದವರು. ಕಾರಂತರ ನಿಧನದ ಬಳಿಕ ಸಾಲಿಗ್ರಾಮದಲ್ಲಿ ಕಾರಂತ ಸ್ಮೃತಿ ಭವನ ನಿರ್ಮಿಸಿದ ಮಾಲಿನಿ ಮಲ್ಯ, ಶಿವರಾಮ ಕಾರಂತರ ಬದುಕು ಹಾಗೂ ಬರಹಗಳನ್ನು ಕನ್ನಡಿಗರಿಗೆ ಉಣಬಡಿಸಿದ್ದರು. ಸ್ವತಃ ಕಾದಂಬಗಾರ್ತಿಯಾಗಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಮೃತರ ಕುಟುಂಬದವರು, ಬಂಧುಗಳಿಗೆ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಪರಮಾತ್ಮನು ನೀಡಲಿ ಎಂದು ನಳಿನ್‍ಕುಮಾರ್ ಕಟೀಲ್ ಅವರು ಪ್ರಾರ್ಥಿಸಿದ್ದಾರೆ.

Related posts

ಮಾರುಕಟ್ಟೆ ಬೆಲೆ ಪರಿಷ್ಕರಣೆ ಆಕ್ಷೇಪಣೆಗೆ ಆಹ್ವಾನ

eNEWS LAND Team

ಕಸಾಪ ಅಣ್ಣಿಗೇರಿ ತಾಲೂಕ ಘಟಕ ಹಾಗೂ ಹೋಬಳಿ ಪದಾಧಿಕಾರಿ ಪದಗ್ರಹಣ

eNEWS LAND Team

ರಾಜ್ಯದ ಆರು ಪ್ರಾದೇಶಿಕ ಸ್ಥಳಗಳಲ್ಲಿ ಚಿತ್ರ ಕಲಾ ಗ್ಯಾಲರಿ ಪ್ರಾರಂಭ: ಬೊಮ್ಮಾಯಿ

eNewsLand Team