24 C
Hubli
ಮಾರ್ಚ್ 21, 2023
eNews Land
ಪ್ರವಾಸ

ರೈಲುಗಳ ಸೇವೆ ರದ್ದು/ ರೈಲಿನ ಮಾರ್ಗ ಬದಲಾವಣೆ

Listen to this article

ಎನ್ಎಲ್ ಹುಬ್ಬಳ್ಳಿ:

I.ರೈಲುಗಳ ಸೇವೆ ರದ್ದು/ ರೈಲಿನ ಮಾರ್ಗ ಬದಲಾವಣೆ

ಮಲುಗೂರು ರೈಲ್ವೆ ನಿಲ್ದಾಣದ ರೈಲ್ವೆ ಗೇಟ್ ಸಂಖ್ಯೆ 64 ರಲ್ಲಿ ದಿನಾಂಕ 17.01.2022, 18.01.2022, 20.01.2022 ಮತ್ತು 21.01.2022 ರಂದು ರಸ್ತೆ ಕೆಳ ಸೇತುವೆಗಾಗಿ ಸೆಗ್ಮೆಂಟಲ್ ಬಾಕ್ಸ್‌ ಗಳ ಅಳವಡಿಕೆ ಕಾಮಗಾರಿಯ ಸಲುವಾಗಿ ಲೈನ್ ಬ್ಲಾಕ್ ಇರುವ ನಿಮಿತ್ತ ರೈಲುಗಳ ಸೇವೆಯಲ್ಲಿ ಈ ಕೆಳಗಿನಂತೆ ಬದಲಾವಣೆಗಳನ್ನು ಮಾಡಲಾಗಿದೆ.

ರೈಲುಗಳ ಸೇವೆ ರದ್ದು:

1. ದಿನಾಂಕ 17.01.2022, 18.01.2022, 20.01.2022 ಮತ್ತು 21.01.2022 ರಂದು ಬೆಂಗಳೂರು ಕಂಟೋನ್ಮೆಂಟ್‌ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 06595 ಬೆಂಗಳೂರು ಕಂಟೋನ್ಮೆಂಟ್ – ಧರ್ಮಾವರಂ ಮೆಮು ವಿಶೇಷ ಪ್ಯಾಸೆಂಜರ್ ನ ಸೇವೆಯನ್ನು ರದ್ದುಗೊಳಿಸಲಾಗುತ್ತದೆ.

2. ದಿನಾಂಕ 17.01.2022, 18.01.2022, 20.01.2022 ಮತ್ತು 21.01.2022 ರಂದು ಧರ್ಮಾವರಂ ನಿಂದ ಪ್ರಾರಂಭವಾಗುವ ರೈಲು ಸಂಖ್ಯೆ 06596 ಧರ್ಮಾವರಂ – ಬೆಂಗಳೂರು ಕಂಟೋನ್ಮೆಂಟ್ ಮೆಮು ವಿಶೇಷ ಪ್ಯಾಸೆಂಜರ್ ನ ಸೇವೆಯನ್ನು ರದ್ದುಗೊಳಿಸಲಾಗುತ್ತದೆ.

ರೈಲಿನ ಮಾರ್ಗ ಬದಲಾವಣೆ:

1. ದಿನಾಂಕ 16.01.2022 ರ ರೈಲು ಸಂಖ್ಯೆ. 16613 ರಾಜಕೋಟ್ – ಕೊಯಮತ್ತೂರು ಎಕ್ಸ್ ಪ್ರೆಸ್ ರೈಲು ಗುಂತಕಲ್, ರೇಣಿಗುಂಟಾ, ಜೋಲಾರಪೆಟ್ಟೈ ಹಾಗೂ ತಿರುಪತ್ತೂರು ನಿಲ್ದಾಣಗಳ ಮಾರ್ಗವಾಗಿ ಬದಲಾದ ಮಾರ್ಗದಲ್ಲಿ ಸಂಚರಿಸುವುದು. ಗುತ್ತಿ, ಅನಂತಪುರ, ಧರ್ಮಾವರಂ, ಹಿಂದುಪೂರ, ಯಲಹಂಕ, ಕೃಷ್ಣರಾಜಪುರಂ ಮತ್ತು ಬಂಗಾರಪೇಟೆ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

2. ದಿನಾಂಕ 16.01.2022 ರ ರೈಲು ಸಂಖ್ಯೆ. 19567 ಟುಟಿಕೊರಿನ್ – ಓಖಾ ಎಕ್ಸ್ ಪ್ರೆಸ್ ರೈಲು ಸೇಲಂ, ಜೋಲಾರಪೆಟ್ಟೈ, ರೇಣಿಗುಂಟಾ ಹಾಗೂ ಗುಂತಕಲ್ ನಿಲ್ದಾಣಗಳ ಮಾರ್ಗವಾಗಿ ಬದಲಾದ ಮಾರ್ಗದಲ್ಲಿ ಸಂಚರಿಸುವುದು. ಬಂಗಾರಪೇಟೆ, ಕೃಷ್ಣರಾಜಪುರಂ, ಯಲಹಂಕ, ಹಿಂದುಪೂರ, ಧರ್ಮಾವರಂ ಮತ್ತು ಅನಂತಪುರ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

3. ದಿನಾಂಕ 16.01.2022 ಮತ್ತು 20.01.2022 ರ ರೈಲು ಸಂಖ್ಯೆ. 12252 ಕೊರ್ಬಾ – ಯಶವಂತಪುರ ಎಕ್ಸ್ ಪ್ರೆಸ್ ರೈಲು ಧೋಣ್, ಪೆಂಡೆಕಲ್ಲು, ಗುಂತಕಲ್, ರೇಣಿಗುಂಟಾ, ಜೋಲಾರಪೆಟ್ಟೈ, ಹಾಗೂ ಯಶವಂತಪುರ ನಿಲ್ದಾಣಗಳ ಮಾರ್ಗವಾಗಿ ಬದಲಾದ ಮಾರ್ಗದಲ್ಲಿ ಸಂಚರಿಸುವುದು. ಅನಂತಪುರ, ಧರ್ಮಾವರಂ ಮತ್ತು ಯಲಹಂಕ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

4. ದಿನಾಂಕ 19.01.2022 ರ ರೈಲು ಸಂಖ್ಯೆ. 12976 ಜೈಪುರ – ಮೈಸೂರು ಎಕ್ಸ್ ಪ್ರೆಸ್ ರೈಲು ಗುಂತಕಲ್, ಬಳ್ಳಾರಿ, ರಾಯದುರ್ಗ, ಚಿಕ್ಕಜಾಜೂರು, ತುಮಕೂರು ಹಾಗೂ ಕೆ.ಎಸ್.ಆರ್ ಬೆಂಗಳೂರು ನಿಲ್ದಾಣಗಳ ಮಾರ್ಗವಾಗಿ ಬದಲಾದ ಮಾರ್ಗದಲ್ಲಿ ಸಂಚರಿಸುವುದು. ಅನಂತಪುರ್, ಧರ್ಮಾವರಂ, ಹಿಂದುಪೂರ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.

II.ರೈಲಿನ ನಿಯಂತ್ರಣ / ರೈಲು ಸೇವೆಯ ವೇಳಾಪಟ್ಟಿಯ ಮರುಹೊಂದಾಣಿಕೆ:

ಯಶವಂತಪುರ ಯಾರ್ಡ್ ನಲ್ಲಿ ದಿನಾಂಕ 21.01.2022 ರಂದು ಇಂಜಿನಿಯರಿಂಗ್ ಕೆಲಸಕ್ಕೆ ಸಂಬಂಧಿತ (ಥಿಕ್ ವೆಬ್ ಸ್ವಿಚ್‌ಗಳ) ಕಾಮಗಾರಿಯ ಸಲುವಾಗಿ ಲೈನ್ ಬ್ಲಾಕ್ ಇರುವ ನಿಮಿತ್ತ ರೈಲುಗಳ ಸೇವೆಯಲ್ಲಿ ಈ ಕೆಳಗಿನಂತೆ ಬದಲಾವಣೆಗಳನ್ನು ಮಾಡಲಾಗಿದೆ.

ರೈಲಿನ ನಿಯಂತ್ರಣ:

1. ದಿನಾಂಕ 20.01.2022 ರ ರೈಲು ಸಂಖ್ಯೆ 17392 ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ – ಕೆ.ಎಸ್.ಆರ್ ಬೆಂಗಳೂರು ನಿತ್ಯ ಸೇವೆಯ ಎಕ್ಸ್ ಪ್ರೆಸ್ ರೈಲನ್ನು ಚಿಕ್ಕಬಾಣಾವರ ನಿಲ್ದಾಣದಲ್ಲಿ 40 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು.

ರೈಲು ಸೇವೆಯ ವೇಳಾಪಟ್ಟಿಯ ಮರುಹೊಂದಾಣಿಕೆ:

2. ದಿನಾಂಕ 21.01.2022 ರಂದು ಕೆ.ಎಸ್.ಆರ್ ಬೆಂಗಳೂರು ನಿಲ್ದಾಣದಿಂದ ಬೆಳಗ್ಗೆ 05 ಗಂಟೆಗೆ ಹೊರಡುವ ರೈಲು ಸಂಖ್ಯೆ 06243 ಕೆ.ಎಸ್.ಆರ್ ಬೆಂಗಳೂರು – ಹೊಸಪೇಟೆ ಪ್ರತಿನಿತ್ಯ ಸೇವೆಯ ವಿಶೇಷ ಪ್ಯಾಸೆಂಜರ್ ರೈಲಿನ ಸಮಯವನ್ನು 30 ನಿಮಿಷಗಳ ಮರುಹೊಂದಾಣಿಕೆ ಮಾಡಲಾಗುವುದು.

III.ರೈಲು ಸೇವೆಯ ಭಾಗಶಃ ರದ್ದತಿ

ಬೆಂಗಳೂರು ರೈಲ್ವೆ ಯಾರ್ಡ್‌ನಲ್ಲಿ ದಿನಾಂಕ 19.01.2022 ಹಾಗೂ 26.01.2022 ರಂದು ಇಂಜಿನಿಯರಿಂಗ್ ಕೆಲಸಕ್ಕೆ ಸಂಬಂಧಿತ ಲೈನ್ ಬ್ಲಾಕ್‌ ಇರುವ ನಿಮಿತ್ತ ದಿನಾಂಕ 18.01.2022 ಮತ್ತು 25.01.2022 ರಂದು ಮೈಸೂರು ನಿಲ್ದಾಣದಿಂದ ಪ್ರಾರಂಭವಾಗುವ ರೈಲು ಸಂಖ್ಯೆ.06560 ಮೈಸೂರು – ಕೆ.ಎಸ್‌.ಆರ್ ಬೆಂಗಳೂರು ವಿಶೇಷ ಮೆಮು ರೈಲಿನ ಸೇವೆ ಕೆಂಗೇರಿ ಹಾಗೂ ಕೆ.ಎಸ್.ಆರ್ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಿರುವುದು. ಆ ಕಾರಣ ಈ ದಿನಾಂಕಗಳಂದು ಮೈಸೂರು ನಿಲ್ದಾಣದಿಂದ ಹೊರಟ ರೈಲು ಕೆಂಗೇರಿ ನಿಲ್ದಾಣದಲ್ಲಿ ಕೊನೆಗೊಳ್ಳುವುದು.

Related posts

ಕರ್ನಾಟಕದ 7 ಅದ್ಭುತದ ಸಾಲಲ್ಲಿ ನವಗ್ರಹ ಕ್ಷೇತ್ರ ಸೇರೋಕೆ ವೋಟ್ ಮಾಡಿ. ನಿಮ್ಮ ಜಿಲ್ಲೆ ಭವಿಷ್ಯ ನಿಮ್ಮ ಕೈಯಲ್ಲಿ

eNEWS LAND Team

ದೀಪಾವಳಿ ಮುಗಿಸಿ ಹಿಂದಿರುಗುವವರಿಗೆ ಹೆಚ್ಚುವರಿ ಬಸ್ ವ್ಯವಸ್ಥೆ

eNEWS LAND Team