37 C
Hubli
ಮೇ 4, 2024
eNews Land
ತಂತ್ರಜ್ಞಾನ

WhatsApp Messenger: Release of feature to silence unknown calls

ENL DESK: Unsaved on phone to free users from the annoyance of unknown and spam calls WhatsApp has released a new feature that automatically silences phone calls from numbers. For this it is enough to enable silent unknown number option in WhatsApp setting. WhatsApp will silence calls from unknown numbers. This new feature was announced by Meta CEO Mark Zuckerberg on Tuesday, WhatsApp will now silence unknown calls. Android and iPhone users can now take advantage of this facility. This feature has been released in the wake of increasing complaints about the increasing number of spam calls on WhatsApp. WhatsApp has used artificial intelligence for this. The company said that this will reduce the amount of spam calls by 50%.

ಅಪರಿಚಿತ ವಾಟ್ಸಾಪ್ ಕರೆ ಸೈಲೆಂಟ್ ಮಾಡುವ ಫೀಚರ್ ಬಿಡುಗಡೆ

ಇಎನ್ಎಲ್ ಡೆಸ್ಕ್: ಅಪರಿಚಿತ ಮತ್ತು ಸ್ಪ್ಯಾಮ್ ಕರೆಗಳ ಕಿರಿಕಿರಿಯಿಂದ ಬಳಕೆದಾರರಿಗೆ ಮುಕ್ತಿ ನೀಡಲು ಫೋನ್‌ನಲ್ಲಿ ಸೇವ್ ಆಗಿರದ ನಂಬರ್‌ಗಳಿಂದ ಬರುವ ಫೋನ್ ಕರೆಗಳನ್ನು ಸ್ವಯಂಚಾಲಿತವಾಗಿ ಸೈಲೆಂಟ್ ಮಾಡುವ ಹೊಸ ಫೀಚರನ್ನು ವಾಟ್ಸಾಪ್ ಬಿಡುಗಡೆ ಮಾಡಿದೆ. ಇದಕ್ಕಾಗಿ ವಾಟ್ಸಾಪ್ ಸೆಟ್ಟಿಂಗ್‌ನಲ್ಲಿ ಸೈಲೆಂಟ್ ಅನ್‌ನೋನ್ ನಂಬರ್ ಆಯ್ಕೆಯನ್ನು ಎನೇಬಲ್ ಮಾಡಿದರೆ ಸಾಕು. ಗೊತ್ತಿಲ್ಲದ ನಂಬರ್‌ಗಳಿಂದ ಬರುವ ಕರೆಗಳನ್ನು ವಾಟ್ಸಾಪ್ ಸೈಲೆಂಟ್ ಮಾಡಲಿದೆ. ಈ ಹೊಸ ಫೀಚರನ್ನು ಮಂಗಳವಾರ ಘೋಷಿಸಿದ ಮೆಟಾ ಸಿಇಒ ಮಾರ್ಕ್ ಜುಕರ್‌ ಬರ್ಗ್, ಈಗ ವಾಟ್ಸಾಪ್ ಅನ್‌ನೋನ್ ಕಾಲ್‌ಗಳನ್ನು ಸೈಲೆಂಟ್ ಮಾಡಲಿದೆ. ಆ್ಯಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರು ಈಗ ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ. ವಾಟ್ಸಾಪ್‌ನಲ್ಲಿ ಸ್ಪ್ಯಾಮ್ ಕರೆಗಳ ಪ್ರಮಾಣ ಹೆಚ್ಚಾಗುತ್ತಿದೆ ಎಂಬ ದೂರುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಈ ಫೀಚರನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕಾಗಿ ಕೃತಕ ಬುದ್ಧಿಮತ್ತೆಯನ್ನು ವಾಟ್ಸಾಪ್ ಬಳಕೆ ಮಾಡಿಕೊಂಡಿದ್ದು. ಇದು ಸ್ಪ್ಯಾಮ್ ಕರೆಗಳ ಪ್ರಮಾಣವನ್ನು ಶೇ.50ರಷ್ಟು ಕಡಿಮೆ ಮಾಡಲಿದೆ ಎಂದು ಕಂಪನಿ ಹೇಳಿದೆ.

 

Related posts

ಟ್ವಿಟ್ಟರ್ ಸಿಇಒ ಹುದ್ದೆ ತೊರೆದ ಜಾಕ್ ಡಾರ್ಸಿ

eNewsLand Team

ಮುಂದಿನ ವರ್ಷದಿಂದ ಜಿಲ್ಲಾ ಕೇಂದ್ರಗಳಲ್ಲಿ ಸರ್.ಎಮ್.ವಿ ಜನ್ಮ ದಿನಾಚರಣೆ: ಸಿಎಂ ಬೊಮ್ಮಾಯಿ

eNEWS LAND Team

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಫೈರ್ ಫೈಟಿಂಗ್ ಸಿಮ್ಯುಲೇಟರ್

eNewsLand Team