26.4 C
Hubli
ಏಪ್ರಿಲ್ 18, 2024
eNews Land
ರಾಜ್ಯ

ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಸವರಾಜ ಹೊರಟ್ಟಿ ನಾಮಪತ್ರ ಸಲ್ಲಿಕೆ: ರೆಕಾರ್ಡ್!!

ಇಎನ್ಎಲ್ ಧಾರವಾಡ

ವಿಧಾನಪರಿಷತ್ತಿನ ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿ ಅವರು ಸಹಾಯಕ ಚುನಾವಣಾಧಿಕಾರಿ, ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ದ್ವಿಪ್ರತಿಯಲ್ಲಿ ನಾಮಪತ್ರಗಳನ್ನು ಪ್ರತ್ಯೇಕವಾಗಿ ಸಲ್ಲಿಸಿದರು.
ಮೊದಲ ಬಾರಿ ಸಲ್ಲಿಸುವಾಗ ಪತ್ನಿ ಹೇಮಲತಾ ಹೊರಟ್ಟಿ, ಎನ್.ಎನ್‌.ಸವಣೂರ, ಎರಡನೇ ಬಾರಿ ನಾಮಪತ್ರ ಸಲ್ಲಿಸುವಾಗ ವಿ.ಎಸ್.ಹುದ್ದಾರ,ಶ್ಯಾಮ ಮಲ್ಲನಗೌಡರ ಇದ್ದರು.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಂಗಳವಾರ 2 ಪ್ರತಿ ನಾಮಪತ್ರ ಸಲ್ಲಿಸಿದ್ದೇನೆ. ಮೇ 26ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ಬಂದು ಮತ್ತೊಂದು ನಾಮಪತ್ರ ಸಲ್ಲಿಸುತ್ತೇನೆ’ ಎಂದರು.

‘ದೇಶದ ಇತಿಹಾಸದಲ್ಲೇ ಶಿಕ್ಷಕರ ಕ್ಷೇತ್ರದಿಂದ ಏಳು ಬಾರಿ ಯಾರೂ ಗೆದ್ದಿಲ್ಲ. 8ನೇ ಬಾರಿ ಆಯ್ಕೆಯಾದಲ್ಲಿ ದಾಖಲೆ ಆಗಲಿದೆ. ಅದಕ್ಕಾಗಿಯೇ ಎಲ್ಲರೂ ನನ್ನತ್ತ ಒಲವು ತೋರಿಸುತ್ತಿದ್ದಾರೆ’ ಎಂದರು.

ತಮ್ಮ ಅಂಬಾಸೆಡರ್ ಕಾರಿನ ಕುರಿತು ಮಾತನಾಡಿದ ಹೊರಟ್ಟಿ, ಈ ಕಾರಿನ ಮೇಲೆ ನನಗೇನೋ ಭಾವನಾತ್ಮಕ ಸಂಬಂಧ. ಆ ಪ್ರೀತಿಗಾಗಿ ಕಾರು ತೆಗೆದುಕೊಂಡು ಬಂದಿದ್ಧೇನೆ. ಈವರೆಗೂ 8 ಲಕ್ಷ ಕಿ.ಮೀ. ಓಡಿದೆ. ಶುಭಕಾರ್ಯಗಳಿಗೆ ಈ ಕಾರು ಒಳ್ಳೆಯದು ಎಂಬ ನಂಬಿಕೆ ನಮ್ಮದು. ಹೀಗಾಗಿ ಅಂಥ ಸಂದರ್ಭದಲ್ಲಿ ಈ ಕಾರು ಬಳಸುತ್ತೇವೆ ಎಂದರು.

Related posts

ಸಾಮಾನ್ಯ ಕನ್ನಡಿಗನಿಗೆ ಆರ್ಥಿಕ ಸಬಲತೆ ನೀಡುವುದು ಇಂದಿನ ಅಗತ್ಯ

eNEWS LAND Team

ಚುನಾವಣಾ ಜಾಹಿರಾತು : ಪೂರ್ವಾನುಮತಿ ಕಡ್ಡಾಯ

eNEWS LAND Team

ಹಾನಗಲ್ ಚುನಾವಣೆ ವೇಳೆ ಡಿಕೆಶಿ ಹೇಳಿಕೆಗೆ ಜಗದೀಶ್ ಶೆಟ್ಟರ್ ತಿರುಗೇಟು

eNEWS LAND Team