31 C
Hubli
ಮಾರ್ಚ್ 28, 2024
eNews Land
ರಾಜ್ಯ

ನೈಋತ್ಯ ರೈಲ್ವೆ ಈಗ ಹಸಿರು ರೈಲ್ವೆ ‌ಆಗ್ತಿದೆ, ಹೇಗೆ ಗೊತ್ತಾ?

ಇಎನ್ಎಲ್ ಧಾರವಾಡ:

ಹಸಿರು ರೈಲ್ವೆಯಾಗುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿರುವ ನೈಋತ್ಯ ರೈಲ್ವೆಯು ಇದೀಗ ಇನ್ನೂ ನಾಲ್ಕು ರೈಲುಗಳನ್ನು ಎಲೆಕ್ಟ್ರಿಕ್ ಲೋಕೋಮೋಟಿವ್ ಮೂಲಕ ಸಂಚರಿಸಲು ಎಲೆಕ್ಟ್ರಿಕ್ ಟ್ರ್ಯಾಕ್ಷನ್’ನಲ್ಲಿ ಪರಿವರ್ತಿಸಲಾಗಿದೆ.

ಮಾ. 28 ರಿಂದ ತಿರುಪತಿಯಿಂದ ಸೇವೆ ಪ್ರಾರಂಭ ವಾಗುವಂತೆ ಹಾಗೂ ದಿನಾಂಕ 29.03.2022 ರಿಂದ ಛತ್ರಪತಿ ಶಾಹು ಮಹಾರಾಜ್ ಟರ್ಮಿನಸ್ ಕೊಲ್ಹಾಪುರದಿಂದ ಸೇವೆ ಪ್ರಾರಂಭವಾಗುವಂತೆ ರೈಲು ಸಂಖ್ಯೆ 17415/17416 ತಿರುಪತಿ – ಛತ್ರಪತಿ ಶಾಹು ಮಹಾರಾಜ್ ಟರ್ಮಿನಸ್ ಕೊಲ್ಹಾಪುರ – ತಿರುಪತಿ ನಿತ್ಯ ಸೇವೆಯ ಹರಿಪ್ರಿಯ ಎಕ್ಸ್ ಪ್ರೆಸ್ ಅನ್ನು ಗುಂತಕಲ್ – ಎಸ್ಎಸ್ಎಸ್ ಹುಬ್ಬಳ್ಳಿ – ಗುಂತಕಲ್ ಗಳ ನಡುವೆ ಎಲೆಕ್ಟ್ರಿಕ್ ಲೋಕೋಮೋಟಿವ್ ನಿಂದ ಸಂಚರಿಸುತ್ತದೆ. ಈ ಮೊದಲು, ಈ ರೈಲು ಪ್ರಾರಂಭದಿಂದ ಕೊನೆಯ ನಿಲ್ದಾಣದವರೆಗೆ ಅಂದರೆ ತಿರುಪತಿಯಿಂದ ಛತ್ರಪತಿ ಶಾಹು ಮಹಾರಾಜ್ ಟರ್ಮಿನಸ್ ಕೊಲ್ಹಾಪುರದವರೆಗೆ ಡೀಸೆಲ್ ಲೋಕೋಮೋಟಿವ್ ನೊಂದಿಗೆ ಸಂಚರಿಸುತ್ತಿತ್ತು.

ಹಾಗೆಯೇ ದಿನಾಂಕ 30.03.2022 ರಿಂದ ಎಸ್ಎಸ್ಎಸ್ ಹುಬ್ಬಳ್ಳಿಯಿಂದ ಸೇವೆ ಪ್ರಾರಂಭವಾಗುವಂತೆ ಹಾಗೂ ದಿನಾಂಕ 31.03.2022 ರಿಂದ ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಸೇವೆ ಪ್ರಾರಂಭವಾಗುವಂತೆ ರೈಲು ಸಂಖ್ಯೆ 17313/17314 ಎಸ್ಎಸ್ಎಸ್ ಹುಬ್ಬಳ್ಳಿ – ಎಂಜಿಆರ್ ಚೆನ್ನೈ ಸೆಂಟ್ರಲ್ – ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ ಪ್ರೆಸ್, ಎಸ್ಎಸ್ಎಸ್ ಹುಬ್ಬಳ್ಳಿ – ಗುಂತಕಲ್ ಗಳ ನಡುವೆ ಎಲೆಕ್ಟ್ರಿಕ್ ಲೋಕೋಮೋಟಿವ್ ನಿಂದ ನಡುವೆಎಲೆಕ್ಟ್ರಿಕ್ ಲೋಕೋಮೋಟಿವ್ ನಿಂದ ಸಂಚರಿಸುತ್ತದೆ. ಈ ಮೊದಲು, ಈ ರೈಲು ಗುಂತಕಲ್ ಮತ್ತು ಎಂಜಿಆರ್ ಚೆನ್ನೈ ಸೆಂಟ್ರಲ್ ಗಳ ನಡುವೆ ಎಲೆಕ್ಟ್ರಿಕ್ ಲೋಕೋಮೋಟಿವ್ ನೊಂದಿಗೆ ಸಂಚರಿಸುತ್ತಿತ್ತು.

ಇದನ್ನು ಓದಿ

ಬ್ರಾಹ್ಮಣ ವಧು ವರರ ಸಮಾವೇಶ!! ಎಲ್ಲಿ? ಯಾವಾಗ?ಇಲ್ಲಿದೆ ಡಿಟೈಲ್ಸ್

ಮೈಸೂರು – ಕೆಎಸ್ಆರ್ ಬೆಂಗಳೂರು – ಧರ್ಮಾವರಂ – ಗುಂತಕಲ್ – ರಾಯಚೂರು – ವಾಡಿ- ಕಲ್ಬುರ್ಗಿ ಹಾಗೂ ಸೊಲ್ಲಾಪುರಗಳ ಹರಿಪ್ರಿಯ ಎಕ್ಸ್ ಪ್ರೆಸ್ ಶೇ.64 ರಷ್ಟು ಮಾರ್ಗದಲ್ಲಿ ಅಂದರೆ ಒಟ್ಟು 900 ಕೀ ಮೀಗಳ ಪ್ರಯಾಣದಲ್ಲಿ ಎಸ್ಎಸ್ಎಸ್ ಹುಬ್ಬಳ್ಳಿ – ಗುಂತಕಲ್ ಗಳ ನಡುವೆ 574 ಕೀ ಮೀ ಎಲೆಕ್ಟ್ರಿಕ್ ಎಂಜಿನ್ ನೊಂದಿಗೆ ಸಂಚರಿಸುತ್ತದೆ. ಹಾಗೆಯೇ ಎಸ್ಎಸ್ಎಸ್ ಹುಬ್ಬಳ್ಳಿ – ಎಂಜಿಆರ್ ಚೆನ್ನೈ ಸೆಂಟ್ರಲ್ – ಎಸ್ಎಸ್ಎಸ್ ಹುಬ್ಬಳ್ಳಿ ಎಕ್ಸ್ ಪ್ರೆಸ್ ಶೇ.100 ಅಂದರೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ಎಂಜಿನ್ ನೊಂದಿಗೆ ಸಂಚರಿಸುತ್ತದೆ. ಈ ನಾಲ್ಕು ರೈಲುಗಳನ್ನು ಅವುಗಳ ಸೇವೆಯ ಹೆಚ್ಚಿನ ಮಾರ್ಗದಲ್ಲಿ ಎಲೆಕ್ಟ್ರಿಕಲ್ ಎಂಜಿನ್ ನೊಂದಿಗೆ ಸಂಚರಿಸುವುದರಿಂದ ಪ್ರತಿದಿನ ಸುಮಾರು 5,000 ಲೀಟರ್ ಗಳಷ್ಟು ಡೀಸೆಲ್ ನ ಉಳಿತಾಯವಾಗುವುದು.

ನೈಋತ್ಯ ರೈಲ್ವೆಯಲ್ಲಿ ಕಳೆದ ಎರಡು ಹಣಕಾಸು ವರ್ಷದಲ್ಲಿ ಅಂದರೆ. 2019-20 ಹಾಗೂ 2020-21ರಲ್ಲಿ ಪ್ರತಿ ವರ್ಷ 24 ರೈಲುಗಳಂತೆ ಒಟ್ಟು 48 ರೈಲುಗಳನ್ನು ಎಲೆಕ್ಟ್ರಿಕ್ ಎಂಜಿನ್ ನೊಂದಿಗೆ ಸಂಚರಿಸುವಂತೆ ವಿಸ್ತ ರಿಸಲಾಗಿದೆ/ಕಾರ್ಯಗತಗೊಳಿಸಲಾಗಿದೆ.

ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸಂಜೀವ್ ಕಿಶೋರ್ ರವರು ಪ್ರಸ್ತುತ ಹಣಕಾಸು ವರ್ಷದಲ್ಲಿ ಈಗಾಗಲೇ, 26 ರೈಲುಗಳನ್ನು ಎಲೆಕ್ಟ್ರಿಕ್ ಲೋಕೋಮೋಟಿವ್ ನಿಂದ ಸಂಚರಿಸಲು ಎಲೆಕ್ಟ್ರಿಕ್ ಟ್ರ್ಯಾಕ್ಷನ್ ನಲ್ಲಿ ಪರಿವರ್ತಿಸಲಾಗಿದೆ. ಹಾಗೂ ಇನ್ನೂ ನಾಲ್ಕು ರೈಲುಗಳ ಸೇವೆ ದಿನಾಂಕ 28.03.2022 ರಿಂದ ಪ್ರಾರಂಭವಾಗುತ್ತಿದೆ ಎಂದು ಹೇಳಿದರು.

ವಿಶೇಷವಾಗಿ ಈಗಾಗಲೇ ವಿದ್ಯುದೀಕರಣ ಕಾರ್ಯ ಪೂರ್ಣವಾಗಿರುವ ಭಾಗಗಳನ್ನೊಳಗೊಂಡಂತೆ, ಕನಿಷ್ಠ ಪಕ್ಷ ಇನ್ನೂ 10 ರೈಲುಗಳನ್ನು ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ಎಂಜಿನ್ ನೊಂದಿಗೆ ಸಂಚರಿಸಲು ನೈಋತ್ಯ ರೈಲ್ವೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

ಪ್ರಸ್ತುತ ಹಣಕಾಸು ವರ್ಷದಲ್ಲಿ ವರ್ಷದಲ್ಲಿ ನೈಋತ್ಯ ರೈಲ್ವೆ ಸಾಧಿಸಿದ ದಾಖಲೆಯ ವಿದ್ಯುದೀಕರಣದಿಂದ ಇದು ಸಾಧ್ಯವಾಗಿದೆ.
ಏಪ್ರಿಲ್ 2021 ರಿಂದ ಇಲ್ಲಿಯವರೆಗೆ ತನ್ನ ಸಂಪರ್ಕ ಜಾಲದ 511.7 ರೂಟ್ ಕೀ.ಮೀಗಳ ವಿದ್ಯುದೀಕರಣವನ್ನು ನೈಋತ್ಯ ರೈಲ್ವೆ ಪೂರ್ಣಗೊಳಿಸಿದೆ.

Related posts

ಹುಬ್ಬಳ್ಳಿ : ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ‌.

eNEWS LAND Team

ಹೆಚ್ಚುವರಿ ಅಕ್ಕಿ ಕೊಳ್ಳಲು ನಿರಾಕರಿಸಿದ ಕೇಂದ್ರ ಸರ್ಕಾರ: ಸಿಎಂ ಸಿದ್ರಾಮಯ್ಯ

eNewsLand Team

ಸೋಲು ಗೆಲುವು ಸಮವಾಗಿ ಸ್ವೀಕರಿಸುತ್ತೇವೆ : ಸಿ.ಎಂ.ಬೊಮ್ಮಾಯಿ

eNEWS LAND Team