34 C
Hubli
ಮಾರ್ಚ್ 23, 2023
eNews Land
ರಾಜ್ಯ

ಹುಬ್ಬಳ್ಳಿ : ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ‌.

Listen to this article

ಇಎನ್ಎಲ್ ಅ.16

ಹುಬ್ಬಳ್ಳಿ : ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ‌.

ಬಿಎಸ್ ವೈ ನಾನು ಭೇಟಿಯಾಗಿದ್ದು ಅಪ್ಪಟ ಸುಳ್ಳು.
ಯಾರಾದರೂ ಅದನ್ನ ಪ್ರೂವ್ ಮಾಡಿದರೆ ನಾನು ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳುತ್ತೆನೆ.

ಬಿಎಸ್ ವೈ ಆರ್ ಎಸ್ ಎಸ್ ನಿಂದ ಬಂದವರು‌.
ನಾವು ಅವರು ತದ್ವಿರುದ್ದ, ಅವರನ್ನು ಭೇಟಿಯಾಗಿದ್ದು ಸುಳ್ಳು.
ಅಧಿಕಾರದಲ್ಲಿರುವವರ ಮನೆ ಬಾಗಿಲಿಗೆ ನಾನು ಯಾವತ್ತು ಹೋಗಿಲ್ಲ.
ಅದು ನನ್ನ ಪ್ರಿನ್ಸಿಪಲ್‌ ,ಹೀಗಾಗಿ ನಾನು ಬಿಎಸ್ ವೈ ಭೇಟಿಯಾಗಿಲ್ಲ.

ಸಲೀಂ-ಉಗ್ರಪ್ಪ ಸಂಭಾಷಣೆ ಹಿಂದೆ ಸಿದ್ದು ಕೈವಾಡ ಎನ್ನುವ ಶೆಟ್ಟರ್ ಆರೋಪ ವಿಚಾರ.
ಹಾಗಿದ್ದರೆ ಯತ್ನಾಳ್,ವಿಶ್ವಾನಾಥ ಅವರಿಗೂ ನಾನೇ ಹೇಳಿದ್ನಾ..?
ಹಿಂದೆ ಅನಂತಕುಮಾರ-ಬಿಎಸ್ ವೈ ಮಾತನಾಡಿದ್ದರು ಅದಕ್ಕು ನಾನೇ ಕಾರಣನನಾ..?
ಇವರೆಲ್ಲಾ ಸಿಎಂ ಆದವರು ಹೀಗೇ ಮಾತನಾಡಿದ್ರೆ ಹೇಗೆ.
ಎಲ್ಲದಕ್ಕೂ ಸಿದ್ದರಾಮಯ್ಯ ಟಾರ್ಗಟ್ ಮಾಡಿದರೆ ಹೇಗೆ?

ಜಾತಿ ಸಮೀಕ್ಷೆ ಬಗ್ಗೆ ಕೂಡಾ ಜಗದೀಶ್ ಶೆಟ್ಟರ್ ಸುಳ್ಳು ಹೇಳ್ತಿದ್ದಾರೆ‌.
ನನ್ನ ಕಾಲದಲ್ಲಿ ಸಮೀಕ್ಷೆ ಪೂರ್ಣ ಆಗಿದ್ದರೆ ನಾನೇ ಹೊರ ತರ್ತಿದ್ದೆ.

ಚಾಣಕ್ಯ ವಿವಿ ಆರ್ ಆರ್ ಎಸ್ ನ ಪ್ರೇರಿತ.
೧೧೬,೧೬ ಏಕರೆ ಭೂಮಿಯನ್ನು ಕೇವಲ ೫೦ ಕೋಟಿಗೆ ನೀಡಿದ್ದಾರೆ.

ಅದು ಸಧ್ಯ ಸಾವಿರಾರು ಕೋಟಿ ಬೆಲಬಾಳೊ ಭೂಮಿ.

ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ ೧೦೧ ಕ್ಕೆ ಸ್ಥಾನಕ್ಕೆ ಬಂದಿದೆ.
ಇದು ಪ್ರಧಾನಿ‌‌ ಮೋದಿ ಅವರ ಕೊಡುಗೆ.
ನಾನು ದೇಶ ಉದ್ದಾರ, ,ಸ್ವರ್ಗ, ಅಚ್ಚೇ ದಿನ್ ಮಾಡುತ್ತೇನೆ ಎಂದವರು.

ಈವಾಗ ಜನ ಹಸಿವನಿಂದ ಬಳಲುವಂತೆ ಮಾಡಿದರು.
ಅನ್ನಭಾಗ್ಯ ಯೋಜನೆ ಸೋಮಾರಿಗಳನ್ನು ಮಾಡುತ್ತಿದೆ ಎನ್ನುವ ಹೆಚ್ ಡಿಕೆ ಆರೋಪ.
ಹೊಟ್ಟೆ ತುಂಬಿದವರು ಹಾಗೇ ಹೇಳುತ್ತಾರೆ.
ಹಸಿವು ಯಾರು ಅನುಭವಿಸಿದ್ದಾರೆ ಅವರು ರ್ಯಾರು ಈ ರೀತಿ ಹೇಳಲ್ಲ.
ಅವರು ಹೇಳಿದ್ದೆಲ್ಲಾ ವೇದ ವ್ಯಾಕ್ಯವಲ್ಲ.
ಬಡವರು ಆ ಬಗ್ಗೆ ಹೇಳಲಿ, ಅವರು ಅಕ್ಕಿ ಕೊಡಬೇಡಿ ಅಂತ ಹೇಳ್ತಾರಾ..?
ಹೆಚ್ ಡಿಕೆ ಮಾತಿಗೆ ಕಿಮ್ಮತ್ತು ಕೊಡಲ್ಲ.

ಅಲ್ಪ ಸಂಖ್ಯಾತರಿಗೆ ಕಾಂಗ್ರೆಸ್ ನಲ್ಲಿ ಸ್ಥಾನಮಾನ ನೀಡ್ತಿಲ್ಲ ಎನ್ನುವ ಸಿಎಂ ಇಬ್ರಾಹಿಂ ಹೇಳಿಕೆ ವಿಚಾರ.
ಇಬ್ರಾಹಿಂಗೆ ಎಂಎಲ್ ಸಿ ಮಾಡಿರುವುದು ಯಾರು.
ಇಬ್ರಾಹಿಂಗೆ ಟಾಂಗ್ ನೀಡಿದ ಸಿದ್ದು.

ಟಿಪ್ಪು ಬಗ್ಗೆ ಓದಿಕೊಳ್ಳಲು ಹೇಳುತ್ತೇನೆ. ಸುಮ್ನೆ ಈವಾಗ ಟಿಪ್ಪು ಜಯಂತಿ ವಿರೋಧ ಮಾಡುವುದು ಸರಿಯಲ್ಲ.

ಸಿದ್ದು-ಡಿಕೆಶಿ ಬೇರೆ ಕಡೆ ಪ್ರಚಾರ ವಿಚಾರ.
ಶೆಟ್ಟರ್-ಬೊಮ್ಮಾಯಿ ಒಂದೇ ಕಡೆ ಹೋಗ್ತಾರಾ..?
ಎಲ್ಲ ಕಡೆ ಕವರ್ ಮಾಡಬೇಕು ಅಂದರೆ ಬೇರೆ ಬೇರೆ ಕಡೆ ಪ್ರಚಾರ ಮಾಡ್ಲೇಬೇಕು.
ಹಾನಗಲ್,ಸಿಂದಗಿ ನಮಗೆ ಒಳ್ಳೆ ವಾತವರಣವಿದೆ.

Related posts

ರಾಜ್ಯಪಾಲರ ಪ್ರವಾಸ

eNEWS LAND Team

ಚಂಬೆಳಕಲ್ಲಿ ಒಂದಾದ ಚನ್ನವೀರ ಕಣವಿ

eNewsLand Team

ಆಡುವಾಗ ಗೆಲ್ಲಲೆಂದೇ ಆಡಬೇಕು: ಸಿಎಂ ಬೊಮ್ಮಾಯಿ

eNEWS LAND Team