eNews Land
ರಾಜ್ಯ

ಸಿದ್ದರಾಮಯ್ಯ ತಾವು ವಿರೋಧ ಪಕ್ಷದ ನಾಯಕ ಅನ್ನೋದನ್ನ ಮರೆತಿದ್ದಾರೆ; ಬಿಎಸ್ವೈ

ಸಿದ್ದರಾಮಯ್ಯ ತಾವು ವಿರೋಧ ಪಕ್ಷದ ನಾಯಕ ಅನ್ನೋದನ್ನ ಮರೆತಿದ್ದಾರೆ; ಬಿಎಸ್ವೈ

ಕುಷ್ಟಗಿ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚಿಗೆ ತಮ್ಮ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ ಅವರಿಗೆ ಶೋಭೆ ತರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.

ಮಂಗಳವಾರ ರಾತ್ರಿ ಸಿಂದಗಿ ಉಪಚುನಾವಣೆಗೆ ತೆರಳುತ್ತಿರುವ ಮಾರ್ಗದ ಮಧ್ಯೆ ಇಲ್ಲಿನ ಸರ್ಕಿಟ್ ಹೌಸ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಮಾಜಿ ಮುಖ್ಯಮಂತ್ರಿಯಾಗಿ ಮತ್ತು ವಿರೋಧ ಪಕ್ಷದ ನಾಯಕರಾಗಿ ಇನ್ನೊಬ್ಬರ ಬಗ್ಗೆ ಹಗುರವಾಗಿ ಮಾತನಾಡಿದರೆ ಅವರ ಘನತೆಗೆ ಧಕ್ಕೆ ಆಗುತ್ತದೆ ಎನ್ನುವುದನ್ನು ಸಿದ್ದರಾಮಯ್ಯ ಅವರು ಮರೆಯಬಾರದು.

ಅಲ್ಲದೇ ಇದನ್ನು ಅರಿತು ಇನ್ನೊಬ್ಬರ ಬಗ್ಗೆ ಆರೋಪ-ಪ್ರತ್ಯಾರೋಪ ಮಾಡುವದನ್ನು ಸಿದ್ದರಾಮಯ್ಯ ಅವರು ರೂಡಿಸಿಕೊಳ್ಳಬೇಕು ಎಂದರು.

ನಮ್ಮದೇ ಗೆಲುವು : ಉಪ ಚುನಾವಣೆಯಲ್ಲಿ ಈ ಬಾರಿ ನೂರಕ್ಕೆ ನೂರು ಇಬ್ಬರು ಅಭ್ಯರ್ಥಿಗಳು ನಮ್ಮ ಪಕ್ಷದವರೇ ಗೆಲ್ಲದಿದ್ದರೆ ಮತ್ತು ಹೆಚ್ಚಿನ ಅಂತರದಿಂದ ಗೆಲ್ಲುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದರು.

ಅಲ್ಲದೆ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಸಾಧನೆ ಮತ್ತು ನಾನು ಮುಖ್ಯಮಂತ್ರಿಯಾಗಿದಾಗ ಎರಡು ಉಪ ಚುನಾವಣೆ ಕ್ಷೇತ್ರಗಳಿಗೆ ಕೊಟ್ಟಿರುವ ಅನುದಾನ ಮಾಡಿರುವ ಕೆಲಸಗಳನ್ನು ಗುರುತಿಸಿ ಅಲ್ಲಿನ ಮತದಾರರು ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ ಎನ್ನುವ ಸಂಪೂರ್ಣ ವಿಶ್ವಾಸ ನನಗಿದೆ.

ಸಿಎಂ ಒಳ್ಳೆ ಕೆಲಸ ಮಾಡುತ್ತಿದ್ದಾರೆ : ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡಿರುವ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಅಲ್ಲದೆ ನಮ್ಮ ಸರ್ಕಾರ ಬಡವರ ಯೋಜನೆಗಳನ್ನು ಜಾರಿ ಮಾಡುವುದರ ಜೊತೆಗೆ ಹೋಗಿದ್ದ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿ ಯಾಗಿ ಯಾಗಿದ್ದಾಗ ಮತ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದೆವು. ಅದಕ್ಕೆ ಸಂಬಂಧಿಸಿದಂತೆ ಈಗಿನ ಮುಖ್ಯಮಂತ್ರಿಗಳು ಈ ಕೆಲಸ ಮಾಡುತ್ತಿದ್ದಾರೆ.

ಅಲ್ಲದೆ ದೇಶದ ಪ್ರಧಾನಿ ಇವರ ಸಾಧನೆಯನ್ನು ನೋಡಿ ಈ ಬಾರಿಯ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಖಂಡಿತವಾಗಿ ಗೆಲ್ಲುತ್ತಾರೆ ಇದನ್ನು ಎರಡನೆಯ ಮಾತಿಲ್ಲ ಎಂದು ಹೇಳಿದರು.

ಇನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ವಿರೋಧ ಪಕ್ಷದ ನಾಯಕರ ಆರೋಪಗಳಿಗೆ ನಾನು ಉತ್ತರ ಕೊಡುವುದಿಲ್ಲ ಇದಕ್ಕೆ ಸರಿಯಾದ ಉತ್ತರವನ್ನು ಎರಡು ಉಪಚುನಾವಣೆಯಲ್ಲಿ ಅಲ್ಲಿ ನ ಮತದಾರರ ಅವರಿಗೆ ಸರಿಯಾಗಿ ಉತ್ತರ ನೀಡಲಿದ್ದಾರೆ ಕಾದು ನೋಡಿ ಎಂದು ಹೇಳಿದರು.

ಧೂಳು ಧೂಳು : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಂಗಳವಾರ ಕುಷ್ಟಗಿಯಿಂದ ಸಿಂದಗಿ ಉಪಚುನಾವಣೆಗೆ ತೆರಳಿದರು ಆದರೆ ಪಟ್ಟಣದ ಹೊರವಲಯದಲ್ಲಿರುವ ಸರ್ಕಿಟ್ ಹೌಸಿನಿಂದ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಿಂದಗಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಎಲ್ಲ ರಸ್ತೆಗಳಲ್ಲಿಯೂ ಬೆಂಗಾವಲು ಕಾರುಗಳು ಸೇರಿದಂತೆ ಇತರೆ ಮುಖಂಡರ ಕಾರುಗಳು ಪಟ್ಟಣದಲ್ಲಿ ಹಾಯ್ದು ಹೋಗುವ ಸಂದರ್ಭದಲ್ಲಿ ಎಲ್ಲ ರಸ್ತೆಗಳು ಧೂಳಿನಿಂದ ಕೂಡಿದ್ದರಿಂದ ಕೆಲಕಾಲ ಸಾರ್ವಜನಿಕರು ಮೂಗ ಮುಚ್ಚಿಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಗಂಗಾವತಿ ಶಾಸಕ ಪರಣ್ಣ ಮನವಳ್ಳಿ, ಸ್ಥಳೀಯ ಬಿಜೆಪಿ ತಾಲೂಕ ಅಧ್ಯಕ್ಷ ಬಸವರಾಜ ಹಳ್ಳೂರ ಸೇರಿದಂತೆ ಪಕ್ಷದ ಮುಖಂಡರು ಇದ್ದರು.

Related posts

ಮಾತಾಡ್ ಮಾತಾಡ್ ಕನ್ನಡ ಘೋಷ ವಾಕ್ಯ : ‘ಕನ್ನಡಕ್ಕಾಗಿ ನಾವು’ ಅಭಿಯಾನ

eNewsLand Team

ಮಳೆಹಾನಿ ಶೀಘ್ರ ಪರಿಹಾರಕ್ಕೆ ಸೂಚನೆ : ಸಿಎಂ ಬೊಮ್ಮಾಯಿ

eNewsLand Team

2022 ರ ಜನವರಿ-ಫೆಬ್ರವರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ಸಾಧ್ಯತೆ

eNewsLand Team