28.2 C
Hubli
ಮೇ 1, 2024
eNews Land
ರಾಜಕೀಯ ರಾಜ್ಯ

ಬಿಜೆಪಿಯಿಂದ ಶೆಟ್ಟರ್ ಔಟ್ ಆರ್ ಇನ್; ಇಂದು‌ ಸಂಜೆ ಫೈನಲ್, ಲಿಂಗಾಯತ ನಾಯಕಗೆ ಇದೆಂಥಾ ಅವಮಾನ ?

ಇದನ್ನು ಓದಿ: ರಾಷ್ಟ್ರೀಯ ನಾಯಕರ ಪ್ರವಾಸದ ಕುರಿತು ಚರ್ಚೆ: ಸಿಎಂ ಬೊಮ್ಮಾಯಿ

ಇಎನ್ಎಲ್ ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಟೆಕೆಟ್ ನೀಡುವಿಕೆ ಕುರಿತು ಹೈಕಮಾಂಡ್ ಶನಿವಾರ ಸಂಜೆ ತನ್ನ ಫೈನಲ್ ನಿಲುವು ಪ್ರಕಟಿಸುವ ಸಾಧ್ಯತೆ ಇದೆ.
ಈ ಬಗ್ಗೆ ಸ್ವತಃ ಮಾಧ್ಯಮದ ಬಳಿ ಮಾತನಾಡಿರುವ ಶೆಟ್ಟರ್, ಸಂಜೆ 6 ಗಂಟೆಯೊಳಗೆ ಹೈಕಮಾಂಡ್ ನಿಂದ ಸುದ್ದಿ ಬರಲಿದೆ. ಹೈಕಮಾಂಡ್ ಏನು ನಿರ್ಧಾರ ಮಾಡುತ್ತದೆ ಎಂಬುದನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳುವೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಬಿಜೆಪಿ ತೊರೆದವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ – ಅರುಣ್ ಸಿಂಗ್

ಅಭಿಮಾನಿಗಳ ಸಭೆ ಬಳಿಕ ಮಾತನಾಡಿರುವ ನೀಡಿದ ಶೆಟ್ಟರ್, ಟಿಕೆಟ್ ಬೇಕೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಈಗಾಗಲೇ ಅವರನ್ನು ಬೆಂಬಲಿಸಿ ಮಹಾನಗರ ಪಾಲಿಕೆಯ ಹಲವಾರು ಬಿಜೆಪಿ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಅವುಗಳಿನ್ನೂ‌ ಅಂಗೀಕಾರವಾಗಿಲ್ಲ.

ಇದನ್ನು ಓದಿ: ಗೌರಿ ಲಂಕೇಶ್ ಪ್ರಕರಣ ನಡೆಸುತ್ತಿರುವ ವಕೀಲ ಕೃಷ್ಣಮೂರ್ತಿ ಮೇಲೆ ಗುಂಡಿನ ದಾಳಿ!!

ಶೆಟ್ಟರ್ ಏನೇ ನಿರ್ಧಾರ ತೆಗೆದುಕೊಂಡರೂ ಅವರೊಂದಿಗೆ‌ ನಾವಿರುತ್ತೇವೆ ಎಂದು ಅಭಿಮಾನಿಗಳು ಘೋಷಣೆ ಮಾಡಿದ್ದಾರೆ. ಒಟ್ಟಾರೆ ಶೆಟ್ಟರ್ ರಾಜಕೀಯ ಭವಿಷ್ಯವೇ ಇಂದು ಸಂಜೆ ಹೊರಬೀಳಲಿದೆ. ಜನಸಂಘದ ನಾಯಕರಾಗಿ, ಬಿಜೆಪಿ ಕಟ್ಟಿದ ನಾಯಕರ ಪೈಕಿ ಒಬ್ಬರಾದ ಶೆಟ್ಟರ್ ಇದೀಗ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡಬೇಕಾದ ಪರಿಸ್ಥಿತಿ ಬಂದೊದಗಿದೆ.

ಇದನ್ನು ಓದಿ: ಮೊದಲ ಪಟ್ಟಿಯಲ್ಲೇ ಬಿಜೆಪಿಗೆ ಮ್ಯಾಜಿಕ್ ನಂಬರ್: ತೇಜಸ್ವಿ ಸೂರ್ಯ

ಒಂದು ವೇಳೆ ಅವರಿಗೆ ಟಿಕೆಟ್ ಮಿಸ್ ಆದರೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಅಥವಾ ಕಾರ್ಯಕರ್ತ, ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಅವರ ನಡುವೆ ಯಾರಿಗೆ ಬಿಜೆಪಿ ಅಧಿಕೃತ ಅಭ್ಯರ್ಥಿ ಪಟ್ಟ ದೊರೆಯಬಹುದು ಎಂಬ ಕುತೂಹಲಕ್ಕೂ ಇಂದಿನ ಸಂಜೆಯೇ ತೆರೆ ಬೀಳುವ ಸಾಧ್ಯತೆ ಇದೆ.

ಇದನ್ನು ಓದಿ: ಚುನಾವಣಾ ಕರ್ತವ್ಯ ಲೋಪ;  ಹು.ಧಾ ಪೂರ್ವ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿ ಮತಗಟ್ಟೆ ಅಧಿಕಾರಿ ನವೀನ ಸೂರ್ಯವಂಶಿರನ್ನು ಅಮಾನತ್ತುಗೊಳಿಸಿ ಡಿಸಿ ಆದೇಶ

Related posts

*ಮೂರು ಪ್ರಕರಣವಿದ್ದರೆ ಕ್ಲಸ್ಟರ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

eNewsLand Team

ಕುಮಾರಸ್ವಾಮಿ ಸಿಎಂ ಆಗೋದು ತಪ್ಪಿಸಲು ಸಾಧ್ಯವಿಲ್ಲ: ಹುಣಸಿಮರದ

eNewsLand Team

ಬೆಂಗಳೂರಿನ ಸಮಗ್ರ ರಸ್ತೆಗಳ ದುರಸ್ತಿಯನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಲಾಗುವುದು ಸಿಎಂ

eNewsLand Team