35 C
Hubli
ಮಾರ್ಚ್ 29, 2024
eNews Land
ರಾಜಕೀಯ ರಾಜ್ಯ

ಸ್ವ ಸಹಾಯ ಸಂಘಗಳ ಉತ್ಪನ್ನಗಳ ಮಾರಾಟಕ್ಕೆ ಶಾಶ್ವತ ಮಾರುಕಟ್ಟೆ ವ್ಯವಸ್ಥೆ ಕೃಷಿ ಸಚಿವ- ಬಿ.ಸಿ.ಪಾಟೀಲ

ಇಎನ್ಎಲ್ ಹಾವೇರಿ:

ಸರ್ಕಾರದ ಆರ್ಥಿಕ ನೆರವನ್ನು ಸದ್ಬಳಕೆಮಾಡಿಕೊಂಡು ಕಿರು ಉದ್ಯಮಗಳನ್ನು ಆರಂಭಿಸಿ ಸ್ವಾವಲಂಬಿಯಾಗಿ ಬೆಳೆಯಲು ಸ್ವ ಸಹಾಯ ಸಂಘಗಳಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಹೇಳಿದರು.
ಭಾನುವಾರ ಹಿರೇಕೆರೂರು ಪೊಲೀಸ್ ಮೈದಾನದಲ್ಲಿ ಆಯೋಜಿಸಲಾದ ಸ್ವ ಸಹಾಯ ಸಂಘದ ಪ್ರತಿನಿಧಿಗಳಿಗೆ ಎನ್.ಆರ್.ಎಲ್.ಎಂ ಯೋಜನೆಯಡಿ ರೂ.4.35ಕೋಟಿ ಸಾಲದ ಚೆಕ್‍ಗಳನ್ನು ವಿತರಿಸಿ ಮಾತನಾಡಿದ ಅವರು ಸ್ವ ಸಹಾಯ ಸಂಘಗಳ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ತಾಲೂಕಾ ಕೇಂದ್ರದಲ್ಲಿ ಶಾಶ್ವತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಗೃಹ ಬಳಕೆಯ ಆಹಾರ ಉತ್ಪನ್ನಗಳಿಗೆ ಹಾಗೂ ಅಲಂಕಾರಿಕ ವಸ್ತುಗಳಿಗೆ ಬೇಡಿಕೆಗಳು ಹೆಚ್ಚಾಗಿವೆ. ಆನ್‍ಲೈನ್‍ನಂತಹ ಉತ್ತಮ ಮಾರುಕಟ್ಟೆ ಅವಕಾಶವನ್ನು ಬಳಸಿಕೊಂಡು ಗೃಹ ಬಳಕೆ ಸಹಾರ ಪದಾರ್ಥ, ಅಲಂಕಾರಿಕ ವಸ್ತು, ಜೇನು ಸಾಕಾಣಿಕೆ ಸೇರಿದಂತೆ ಹಲವು ಸ್ವ ಉದ್ಯೋಗ ಕೈಗೊಳ್ಳಲು ಸಲಹೆ ನೀಡಿದರು.
ಸಾವಯವ ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಇದೆ. ಕೃಷಿಯಲ್ಲಿ ರಾಸಾಯನಿಕ ಬಳಕೆಯಿಂದ ತಿನ್ನುವ ಆಹಾರ, ಬೆಳೆಯುವ ಭೂಮಿ ವಿಷಮಯವಾಗುತ್ತಿದೆ. ಇದರ ಬದಲು ಸಾಯವ ಕೃಷಿ ಪದ್ಧತಿ ಅಳವಡಿಸಿಕೊಂಡು ಮಿಶ್ರ ಬೆಳೆಯ ಪದ್ಧತಿಯ ಮೂಲಕ ಕೃಷಿಯನ್ನು ಲಾಭದಾಯಕವಾಗಿಸಿ ಎಂದು ಸಲಹೆ ನೀಡಿದರು.
ಎರಡು ಕೋಟಿ ರೂ. ವೆಚ್ಚದಲ್ಲಿ ಕಾರ್ಮಿಕ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಶೀಘ್ರವೇ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು. ಕಡಿಮೆ ದರದಲ್ಲಿ ಜನರ ಬಳಕೆಗೆ ನೀಡಲು ಉದ್ದೇಶಿಸಲಾಗಿದೆ ಎಂದರು.
ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಸಾಮಾನ್ಯ ಜನರ ನೆರವಿಗೆ ಸರ್ಕಾರ ಧಾವಿಸಿದೆ. ಕ್ಷೇತ್ರದಲ್ಲಿ 25 ಸಾವಿರ ಆಹಾರ ಕಿಟ್‍ಗಳನ್ನು ಕಾರ್ಮಿಕ ಇಲಾಖೆ ವಿತರಿಸಿದೆ. ಕೋವಿಡ್ ನಿಯಂತ್ರಣದ ನಿಟ್ಟಿನಲ್ಲಿ ಸರ್ಕಾರ ಸಾಕಷ್ಟು ಶ್ರಮವಹಿಸಿದೆ. ಕೋವಿಡ್‍ನಂತಹ ಆರ್ಥಿಕ ಸಂಕಷ್ಟದಲ್ಲೂ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗದಂತೆ ಕ್ರಮವಹಿಸಿದೆ. ಜನರ ಸಂಕಷ್ಟಗಳಿಗೆ ಹಾಗೂ ಆಶೋತ್ತರಗಳಿಗೆ ಸ್ಪಂದಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೀವಿಶಾಸ್ತ್ರ ಮತ್ತು ಪರಿಸರ, ಪ್ರವಾಸೋದ್ಯಮ ಸಚಿವ ಸಚಿವರಾದ ಆನಂದಸಿಂಗ್, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಅವರು ಮಾತನಾಡಿದರು. ವಿವಿಧ ಮುಖಂಡರು ಉಪಸ್ಥಿತರಿದ್ದರು

Related posts

ಗೋವಾದಲ್ಲಿ ಕನ್ನಡ ಭವನ : ಸಿಎಂ ಬೊಮ್ಮಾಯಿ

eNEWS LAND Team

ನಗರದಲ್ಲಿ‌ ಇಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಏನು ಹೇಳಿದರು?

eNEWS LAND Team

ಬೆಂಗಳೂರು ಮಿಷನ್ 2022 ಪ್ರಗತಿ ಪರಿಶೀಲನೆ ನಡೆಸಿದ ಸಿಎಂ ಬೊಮ್ಮಾಯಿ

eNEWS LAND Team