30 C
Hubli
ಏಪ್ರಿಲ್ 24, 2024
eNews Land
ದೇಶ ರಾಜಕೀಯ ರಾಜ್ಯ ಸುದ್ದಿ

ಕೂಡಲಸಂಗಮ ಭೇಟಿ ನೀಡಿದ ರಾಹುಲ್ ಗಾಂಧಿ!

ಇ-ನ್ಯೂಸ್ ಲ್ಯಾಂಡ್
ಬಾಗಲಕೋಟೆ/ಕೂಡಲಸಂಗಮ: ಭಾರತದ ಪ್ರಜಾಪ್ರಭುತ್ವ ‌ವ್ಯವಸ್ಥೆಗೆ 12ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ಭದ್ರ ಭುನಾದಿ ಹಾಕಿದ ಕೀರ್ತಿ Basavanna ಅವರಿಗೆ ಸಲ್ಲುತ್ತದೆ ಎಂದು ಕಾಂಗ್ರೆಸ್ ಮುಖಂಡ Rahul Gandhi ಹೇಳಿದರು.

ಭಾನುವಾರ ಕೂಡಲಸಂಗಮದಲ್ಲಿ ಬಸವ ಧರ್ಮ ಪೀಠದಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಕತ್ತಲು ಕವಿದಾಗ ಬೆಳಕು ಬರುತ್ತದೆ. ಮೂಢನಂಬಿಕೆ, ಅಂಧ‌ಶ್ರದ್ಧೆಯ ಸಮಾಜಕ್ಕೆ ಬಸವಣ್ಣ ಬೆಳಕಾಗಿ ಬಂದರು ಎಂದರು.

ಬೇರೆಯವರನ್ನು ಪ್ರಶ್ನಿಸುವುದು ಸುಲಭ. ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವುದು ಕಷ್ಟ. ಪ್ರಶ್ನೆ ಕೇಳಿಕೊಳ್ಳುವುದಷ್ಟೇ ಅಲ್ಲ.‌ ತಾವು ಕಂಡುಕೊಂಡ ಸತ್ಯವನ್ನು ಸಮಾಜದ ಮುಂದಿಡುವ ಧೈರ್ಯ ಮಾಡಿದರು ಎಂದು ಹೇಳಿದರು.

ಜಾತಿ, ಮತ, ಪಂಥಗಳ ಬಗ್ಗೆ ಪ್ರಶ್ನೆ ಮಾಡಿದರು. ಸತ್ಯ ಹಾಗೂ ಜೀವನದ ಸರಿಯಾದ ಮಾರ್ಗ ಕಂಡುಕೊಂಡರು. ಸತ್ಯದ ಮಾರ್ಗವನ್ನು ಜೀವನ‌ ಪೂರ್ತಿ ಅನುಸರಿಸಿದರು ಎಂದರು.

ಹಲವರು ಪ್ರಶ್ನೆ ಕೇಳುತ್ತಾರೆ. ಸತ್ಯವನ್ನೂ ಕಂಡುಕೊಳ್ಳುತ್ತಾರೆ. ಆದರೆ ಭಯಪಟ್ಟುಕೊಂಡು ಸಮಾಜದ ಮುಂದೆ ಇಡುವುದಿಲ್ಲ. ಬಸವಣ್ಣ ಸತ್ಯ ಹೇಳುವ ಮೂಲಕ ವಿಶ್ವ ಗುರುವಾದರು ಎಂದು ಹೇಳಿದರು.

ಸತ್ಯ ಹೇಳಿದ ಬಸವಣ್ಣನ ಮೇಲೆ ಆಕ್ರಮಣವಾಯಿತು. ಬೆದರಿಸುವ ಕೆಲಸ ಆಯಿತು. ಹಿಂದೆ ಸರಿಯಲಿಲ್ಲ. ಅದಕ್ಕೆ ಸಮಾಜ‌ ಅವರನ್ನು ಗೌರವಿಸುತ್ತದೆ. ಪುಷ್ಪವಿರಿಸಿ ಗೌರವ ಸಲ್ಲಿಸುತ್ತದೆ ಎಂದರು.

ಗದುಗಿ‌ನ ತೋಂಟದಾರ್ಯ ಮಠದ ತೋಂಟದಾರ್ಯ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ಅನುಭವ ಮಂಟಪದಲ್ಲಿ ಮಹಿಳೆಗೆ ಅವಕಾಶ‌ ನೀಡುವ ಮೂಲಕ‌ ಮಹಿಳೆಯರಿಗೆ ಮೊದಲ ಬಾರಿಗೆ ಧಾರ್ಮಿಕ ಸ್ವಾತಂತ್ರ್ಯ ಕಲ್ಪಿಸಿದ ಕೀರ್ತಿ ಬಸವಣ್ಣನಿಗೆ ಸಲ್ಲುತ್ತದೆ ಎಂದರು.

Related posts

ನಂದಿನಿ ತನ್ನ ಪ್ರತ್ಯೇಕ ಅಸ್ತಿತ್ವವನ್ನು ಸದಾ ಕಾಯ್ದುಕೊಳ್ಳಲಿದೆ: ಸಿಎಂ ಬೊಮ್ಮಾಯಿ

eNEWS LAND Team

SOUTH WESTERN RAILWAY SERVICE CANCELLATION

eNEWS LAND Team

ಕೃಷಿ ಕಾಯಿದೆ ವಾಪಸ್: ಮುಗಿಲು ಮುಟ್ಟಿದ ರೈತರ ಸಂಭ್ರಮ

eNewsLand Team