23 C
Hubli
ಸೆಪ್ಟೆಂಬರ್ 25, 2023
eNews Land
ರಾಜ್ಯ

ಒಂದು ಓಟು, ಒಂದು ನೋಟು ಅಭಿಯಾನ ನಡೆಸಿದ KRS ಮತ್ತು JDU

ಒಂದು ಓಟು, ಒಂದು ನೋಟು ಅಭಿಯಾನ ನಡೆಸಿದ KRS ಮತ್ತು JDU

 

ಇಎನ್ಎಲ್

“ಹಾನಗಲ್ : ವಿಧಾನಸಭಾ ಕ್ಷೇತ್ರದಲ್ಲಿ KRS ಪಕ್ಷದ ವತಿಯಿಂದ ಒಂದು ಓಟು ಒಂದು ನೋಟು ಅಭಿಯಾನವನ್ನು ನಡೆಸಿದರು ಇದಕ್ಕೆ ಸಹಕಾರ ಎಂಬಂತೆ ಸಂಯುಕ್ತ ಜನತಾದಳ ರಾಜ್ಯ ಅಧ್ಯಕ್ಷರಾದ ಶ್ರೀ ಮಹಿಮಾ ಪಟೇಲ್ ರವರು ಬೆಂಬಲಿಸಿದರು.

KRS ಪಕ್ಷದ ರಾಜ್ಯ ಅಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಮಾತನಾಡಿ JCB ಪಕ್ಷಗಳು ನೀತಿ ಸಂಹಿತೆ ಯನ್ನು ಉಲ್ಲಂಗಿಸಿ ಚುನಾವಣೆ ನಡೆಸುತ್ತಿವೆ. ಜನಪರ ರಾಜಕಾರಣದ ವಿರುದ್ದವಾಗಿ ದುಡ್ಡಿನ ಹಂಚಿಕೆಗೆ ಮುಗಿಬಿದ್ದು ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ತಿಳಿಸಿದರು .

ಇದೇ ಸಂದರ್ಭದಲ್ಲಿ JDU ಪಕ್ಷದ ರಾಜ್ಯ ಅದ್ಯಕ್ಷರಾದ ಮಹಿಮಾ ಪಟೇಲ್ ಮಾತನಾಡಿ ಹಣದ ಆಧಾರದ ಮೇಲಿನ ರಾಜಕಾರಣಕ್ಕಿಂತ ಸೇವೆ ಆಧರಿತ ರಾಜಕಾರಣ ಮುಕ್ಯ, ರಾಜ್ಯದಲ್ಲಿ ಗೊಂದಲ ರಾಜಕಾರಣ ಸೃಷ್ಟಿಯಾಗಿದೆ ಇಲ್ಲಿ ಜನಸೇವೆಯ ರಾಜಕಾರಣ ಅತೀ ಮುಖ್ಯ ಹಾಗೂ ಅಧಿಕಾರದ ವಿಕೇಂದ್ರೀಕರಣ ಅತಿ ಮುಖ್ಯ ಎಂದು ತಿಳಿಸಿದರು. ದೇಶದಲ್ಲಿರುವ 2000 ರಿಂದ 2500 ನೀಚ ರಾಜಕಾರಣಿಗಳನ್ನು ಹೊರದೂಡಿದಾಗ ಸುಸಮ್ಮತ ರಾಜಕಾರಣ ನಿರ್ಮಾಣವಾಗಲು ಸಾದ್ಯ ಎಂದು ತಿಳಿಸಿದರು…
KRS ಪಕ್ಷದ ಉಪಾಧ್ಯಕ್ಷರಾದ ಲಿಂಗೇಗೌಡ S.H. ರ ನೇತೃತ್ವದಲ್ಲಿ ಪಕ್ಷದ ರಾಜ್ಯ ಜಂಟಿಕಾರ್ಯದರ್ಶಿ ಪ್ರಸನ್ನ B.K., ರಾಜ್ಯ ಸಂಘಟನಾ ಕಾರ್ಯದರ್ಶಿ ಜ್ಞಾನಸಿಂಧು ಸ್ವಾಮಿ, ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಮಂಜುನಾಥ ಜಿ.ಎಸ್. ಹಾಗೂ ಪಕ್ಷದ ಕಾರ್ಯಕರ್ತರು ಸೇರಿ ಪಕ್ಷದ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರ ಮಾಡಿದರು. KRS ಪಕ್ಷದ ಧ್ಯೇಯ ಮತ್ತು ಸಿದ್ದಾಂತ ಹಾಗೂ ಇವರ ಪ್ರಚಾರ ವೈಖರಿಯನ್ನು ಮತದಾರರು ಪ್ರಶಂಸಿಸುವುದು ಕಂಡು ಬಂದಿತು.

Related posts

A separate authority for the management of Bengaluru traffic density: CM Bommai

eNEWS LAND Team

ಯೋಜನಾಬದ್ಧವಾಗಿ ಬೆಂಗಳೂರಿನ ಅಭಿವೃದ್ಧಿಗೆ ಚಿಂತನೆ : ಸಿಎಂ ಬೊಮ್ಮಾಯಿ

eNEWS LAND Team

ಬೆಳಗಾವಿಯಲ್ಲಿ ಪುಂಡಾಟಿಕೆ ಘಟನೆ ಖಂಡಿಸಿದ ಮುಖ್ಯ ಮಂತ್ರಿ ಬೊಮ್ಮಾಯಿ‌

eNEWS LAND Team