35.4 C
Hubli
ಏಪ್ರಿಲ್ 29, 2024
eNews Land
ರಾಜ್ಯ

ಕಾವೇರಿ ಹೆಚ್ಚುವರಿ ನೀರು ಸಮುದ್ರಕ್ಕೆ ಹರಿಯುವ ಬದಲು ರಾಜ್ಯದ ಹಿತಾಶಕ್ತಿಗೆ ಪೂರಕವಾಗಿ ತುರ್ತಾಗಿ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲಿ

ಇಎನ್ ಎಲ್ ಬೆಂಗಳೂರು: ಕಾವೇರಿ ಅಂತಿಮ ತೀರ್ಪಿನಲ್ಲಿ ಸೂಚಿಸಿರುವ ತಮಿಳುನಾಡಿನ 179 ಟಿಎಂಸಿ ಹಂಚಿಕೆ  ನೀರನ್ನು ಹರಿಸಿ ಹೆಚ್ಚುವರಿ ನೀರನ್ನು ರಾಜ್ಯಕ್ಕೆ ಬಳಸಿಕೊಳ್ಳಲು ಅಗತ್ಯವಾಗಿ ಮೇಕೆದಾಟು ಅಣೆಕಟ್ಟೆ ನಿರ್ಮಿಸಲು ರಾಜ್ಯ ಸರ್ಕಾರ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಬೇಕು.
ತಮಿಳುನಾಡಿನ ಒತ್ತಡದ ಮುಲಾಜಿಗೆ ಮಣಿಯಬಾರದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ಒತ್ತಾಯಿಸಿದ್ದಾರೆ

ಕೇಂದ್ರ ಸರ್ಕಾರ ಭತ್ತಕ್ಕೆ ಬೆಂಬಲ ಬೆಲೆ ಏರಿಕ್ಕೆ ಮಾಡಿರುವುದು
ಬಕಾಸುರನ ಹೊಟ್ಟೆಗೆ
ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ ಒಂದು ಚೀಲ ಗೊಬ್ಬರಕ್ಕೆ 500ರೂ ಏರಿಕೆಯಾಗಿದೆ ರೈತರ ಬತ್ತಕ್ಕೆ 140ರೂ ಮಾತ್ರ ಏರಿಕೆ ಯಾಕೆ?

ಗೋಹತ್ಯ ನಿಷೇಧ
ಕಾಯ್ದೆ ರದ್ದು ಬೇಡ ರಾಜಕೀಯ ಪಕ್ಷಗಳು ಗೋವುಗಳ ವಿಚಾರದಲ್ಲಿ ರಾಜಕಾರಣ ಮಾಡಬಾರದು
ಕೋಣನಿಗೂ ಹಸುವಿಗೂ ಹೋಲಿಕೆ ಮಾಡಿರುವುದು ಸರಿಯಲ್ಲ
ಹಸುಗಳು ರೈತರ ಬದುಕಿಗೆ ಆಸರೆಯಾಗಿ ಜೀವನಾಡಿಯಾಗಿ ಕಾಯಕ ಮಾಡುತ್ತವೆ ರೈತರು ಗೌರವ ಭಾವನೆಯಿಂದ ಪೂಜಿಸುತ್ತೇವೆ ಗೋವುಗಳನ್ನು  ಹತ್ಯೆ ಮಾಡಿದರೆ ಏನು ತಪ್ಪು ಎಂದು ಹೇಳುವುದು ಒಪ್ಪುವಂತದ್ದಲ್ಲ.
ಕಾನೂನಿನಲ್ಲಿರುವ  ಅಡೆ ತಡೆಗಳನ್ನು ನಿವಾರಿಸಿ ತಪ್ಪೇನಿಲ್ಲ.ಗೋಹತ್ಯೆ ಕಾಯ್ದೆ ರದ್ದು ಮಾಡಲು ರೈತರು ಒಪ್ಪುವುದಿಲ್ಲ

ಕಾಡು ಪ್ರಾಣಿಗಳ  ಹಾವಳಿಯಿಂದ ಕಾಡಂಚಿನ ಭಾಗದ ರೈತರ ಬದುಕು ಭಯದಿಂದ ತತ್ತರಿಸುತ್ತಿದೆ ಕಾಡಿನ ಒಳಗೆ ಇರುವ ಎಲ್ಲಾ ರಿಸಾರ್ಟಗಳು ಮೋಜಿನತಾಣಗಳನ್ನು ಬಂದ್ ಮಾಡಲು ಗಣಿಗಾರಿಕೆಯನ್ನು ನಿಲ್ಲಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು  ಸರ್ಕಾರಕ್ಕೆ ಒತ್ತಾಯಿಸುತ್ತೇನೆ

ಇಂದು ರಾಜ್ಯದ ಕಬ್ಬು ಬೆಳೆಗಾರರ ಬಾಕಿ ಹಣ ಕೊಡಿಸುವ ಬಗ್ಗೆ ನ್ಯಾಯಾಲಯದಲ್ಲಿರುವ ತಡೆಯಾಜ್ಞಾ ತೆರವುಗೊಳಿಸುವ ಬಗ್ಗೆ
ಪ್ರಸಕ್ತ ಸಾಲಿನ ಕಬ್ಬಿನ ದರ ನಿಗದಿಪಡಿಸುವ ಬಗ್ಗೆ ಸಕ್ಕರೆ ಹಾಗು ಕ್ನಷಿ ಮಾರುಕಟ್ಟೆ  ಸಚಿವ ಶಿವಾನಂದ ಪಾಟೀಲ್ ಜೊತೆ ರಾಜ್ಯ ಕಬ್ಬು ಬೆಳೆಗಾರ ಸಂಘದ ಪದಾಧಿಕಾರಿಗಳು ಕೃಷಿ ಮಾರುಕಟ್ಟೆ ಸಬಾಂಗಣದಲ್ಲಿ
ಚರ್ಚಿಸಲಾಯಿತು ಈ ವೇಳೆ ಕಬ್ಬು ಹಾಗು ಸಕ್ಕರೆ ಅಭಿವೃದ್ಧಿ ಆಯುಕ್ತ ಶಿವಾನಂದ ಕೆಲಗಿರಿ ಇದ್ದರು

ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ
ರೇವಣ್ಣಯ್ಯಹಿರೇಮಠಪರಶುರಾಮ್ ಎತ್ತಿನ ಗುಡ್ಡ.ಎನ್‌ಹೆಚ್ ದೇವಕುಮಾರ
ಹತ್ತಳ್ಳಿ ದೇವರಾಜ್ ಬರಡನಪುರ ನಾಗರಾಜ್
ಎಚ್ ಎನ್ ದೇವಕುಮಾರ್, ಅತ್ತಹಳ್ಳಿ ದೇವರಾಜ್, ಕಾನೂನು ಸಲಹೆಗಾರ ಕಿಸಾನ್, ನರಸಿಂಹಮೂರ್ತಿ, ಸಿದ್ದಲಿಂಗ ಒಡೆಯರ್, ಮಹಾಂತೇಶ್ ಕೆರುಟಗಿ ಇದ್ದರು.

Related posts

ಸರಕಾರಿ ಜಾಗ ಒತ್ತುವರಿ ಮಾಡಿಕೊಂಡವರ ವಿರುದ್ಧ ಕ್ರಮ ವಸತಿ ಯೋಜನೆಗಳಿಗಾಗಿ 530 ಎಕರೆ ಜಮೀನು ನೀಡಿಕೆ:ಸಚಿವ ಅಶೋಕ

eNEWS LAND Team

*ಮೂರು ಪ್ರಕರಣವಿದ್ದರೆ ಕ್ಲಸ್ಟರ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

eNewsLand Team

ಭಟ್ಕಳದ ಸಮುದ್ರದಲ್ಲಿ ಬೃಹತ್ ತಿಮಿಂಗಿಲ: ಮೀನುಗಾರರು ಕಂಗಾಲು!! ವಿಡಿಯೋ ನೋಡಿ

eNewsLand Team