23.9 C
Hubli
ಏಪ್ರಿಲ್ 1, 2023
eNews Land
ರಾಜ್ಯ

ಕಸಾಪ: ಅಧ್ಯಕ್ಷರಾಗಿ ಮಹೇಶ ಜೋಶಿ ಆಯ್ಕೆ ಬಹುತೇಕ ಖಚಿತ, ನಾಳೆ ಘೋಷಣೆ

Listen to this article

ಇಎನ್ಎಲ್ ಬೆಂಗಳೂರು:

ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಮಹೇಶ ಜೋಶಿ ಆಯ್ಕೆ ಖಚಿತವಾಗಿದೆ. ನಾಳೆ (ನ.24) ನಡೆಯಲಿರುವ ಅಂಚೆ ಮತ ಎಣಿಕೆ ಬಳಿಕ ಅಧಿಕೃತ ಘೋಷಣೆ ಆಗಲಿದೆ.

3.05 ಲಕ್ಷ ಮತದಾರರ ಪೈಕಿ 1.59 ಲಕ್ಷ ಮಂದಿ ಹಕ್ಕು ಚಲಾಯಿಸಿದ್ದರು. ಚಲಾವಣೆಯಾಗಿದ್ದ ಒಟ್ಟಾರೆ ಶೇ 52.09 ಮತಗಳಲ್ಲಿ ಜೋಶಿ ಅವರೇ ಶೇ 43ರಷ್ಟು ಮತಗಳನ್ನು ಸೆಳೆದುಕೊಂಡಿದ್ದಾರೆ. ತಮ್ಮ ಸಮೀಪದ ಸ್ಪರ್ಧಿ ಶೇಖರಗೌಡ ಮಾಲಿ ಪಾಟೀಲ;22,357 ಅವರಿಗಿಂತ ಮೂರು ಪಟ್ಟು ಹೆಚ್ಚಿನ ಅಂದರೆ 68,525 ಮತಗಳನ್ನು ಅವರು ಗಳಿಸಿದ್ದಾರೆ.

ಬುಧವಾರ ಪರಿಷತ್ತಿನ ಚುನಾವಣಾಧಿಕಾರಿಯ ಕೇಂದ್ರ ಕಚೇರಿಯಲ್ಲಿ ಗಡಿನಾಡ ಘಟಕಗಳ ಅಧ್ಯಕ್ಷರ ಚುನಾವಣೆಗೆ ಸಂಬಂಧಪಟ್ಟ ಅಂಚೆ ಮತಪತ್ರಗಳನ್ನು ಎಣಿಕೆ ಮಾಡಲಾಗುತ್ತದೆ.
ರಾಜ್ಯ ಘಟಕದ ಅಧ್ಯಕ್ಷರ ಆಯ್ಕೆಗೆ ಎಲ್ಲ ಜಿಲ್ಲೆಗಳಿಂದ ಬಂದ ಮತಗಳು ಹಾಗೂ ಅಂಚೆ ಮತಗಳನ್ನು ಕ್ರೋಢೀಕರಿಸಿ, ಅದೇ ದಿನ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ.

ದೂರದರ್ಶನ ಕೇಂದ್ರದ ಹೆಚ್ಚುವರಿ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಜೋಶಿ ಅವರು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಬಾಹ್ಯ ಬೆಂಬಲ ಪಡೆದಿದ್ದರು. ಬಿಜೆಪಿ ಸಂಸದರು, ಶಾಸಕರು ಅವರ ಪರ ಪ್ರಚಾರವನ್ನೂ ನಡೆಸಿದ್ದರು.

ಅಭ್ಯರ್ಥಿ;ಪಡೆದ ಮತಗಳು

ಮಹೇಶ ಜೋಶಿ;68,525

ಶೇಖರಗೌಡ ಮಾಲಿ ಪಾಟೀಲ;22,357

‌ವ.ಚ.ಚನ್ನೇಗೌಡ;16,755

ಸಿ.ಕೆ.ರಾಮೇಗೌಡ;14,110

Related posts

ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ

eNEWS LAND Team

ರಾಜ್ಯೋತ್ಸವಕ್ಕೆ ಸಿಎಂ ಬೊಮ್ಮಾಯಿ‌ ಚಾಲನೆ

eNEWS LAND Team

ವಿಧಾನ ಪರಿಷತ್ ಚುನಾವಣಾ ದಿನಾಂಕ ಪ್ರಕಟ

eNEWS LAND Team