24.3 C
Hubli
ಮೇ 26, 2024
eNews Land
ರಾಜ್ಯ ಸುದ್ದಿ

ನಾನು ಅಂಬೇಡ್ಕರ್ ವಾದಿ, ಮೀಸಲಾತಿ ಹೆಚ್ಚಳ ದಿಟ್ಟ ನಿರ್ಧಾರ : ಸಿಎಂ ಬೊಮ್ಮಾಯಿ

For news, articles and advertisement

For more information: enewsland@gmail.com

ಇದನ್ನು ಓದಿ:ಬಿಜೆಪಿ ಮತ ಬ್ಯಾಂಕ್ ಬಿಟ್ಟು ಹೋಗೋಲ್ಲ: ಸಿಎಂ ಬೊಮ್ಮಾಯಿ
ಇಎನ್ಎಲ್ ರಾಯಚೂರು: ನಾನು ಅಂಬೇಡ್ಕರ್ ವಾದಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದಾಗಿ ಸಿಎಂ ಬೊಮ್ಮಾಯಿ ತಿಳಿಸಿದರು. 

ಇದನ್ನು ಓದಿ:ಜಗದೀಶ್ ಶೆಟ್ಟರ್ ಅವರನ್ನು ನಾಡಿನ ಜನತೆ ಕ್ಷಮಿಸುವುದಿಲ್ಲ: ಬಿ.ಎಸ್.ಯಡಿಯೂರಪ್ಪ
ಅವರು ಇಂದು ರಾಯಚೂರಿನಲ್ಲಿ ಪರಿಶಿಷ್ಟ ಸಮುದಾಯದ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ  ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ಇದನ್ನು ಓದಿ:ಜಗದೀಶ್ ಶೆಟ್ಟರ್ ರಾಜೀನಾಮೆ ನೋವು ತಂದಿದೆ: ಸಿಎಂ ಬೊಮ್ಮಾಯಿ
ಶಿಕ್ಷಣ, ಉದ್ಯೋಗ ಮೀಸಲಾತಿ ನೀಡುವ ಮೂಲಕ ಸ್ವಾಭಿಮಾನಿ ಬದುಕು ಬದುಕಬೇಕೆಂಬ ಅಂಬೇಡ್ಕರ್ ಅವರ ದೂರದೃಷ್ಟಿ ಯಿಂದ ಇದು ಸಾಧ್ಯವಾಗಿದೆ. ಈ ಜನಾಂಗಕ್ಕೆ ನ್ಯಾಯ ನೀಡಬೇಕು ಎಂದು ಮೀಸಲಾತಿ ಹೆಚ್ಚಳ ಮಾಡುವ ದಿಟ್ಟ ನಿರ್ಧಾರ ಮಾಡಲಾಗಿದೆ ಎಂದರು.

ಇದನ್ನು ಓದಿ:ಜನರ ಅಭೂತಪೂರ್ವ ಬೆಂಬಲ ಸಿಕ್ಕಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮತ ಬ್ಯಾಂಕ್
ಹಿಂದಿನ ಸರ್ಕಾರಗಳು ಈ ನಿರ್ಧಾರ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.  ಸಾಮಾಜಿಕ ನ್ಯಾಯವನ್ನು ಕೇವಲ ಭಾಷಣದಲ್ಲಿ ಹೇಳಿದರು. ಪರಿಶಿಷ್ಟರನ್ನು ಕೇವಲ ಮತ ಬ್ಯಾಂಕ್ ಮಾಡಿಕೊಂಡಿದ್ದಾರೆ ಎಂದರು.

ಇದನ್ನು ಓದಿ:ಚುನಾವಣಾ ಅಕ್ರಮ ತಡೆಯಲು ಸಾರ್ವಜನಿಕರು ‘ಸಿ-ವಿಜಿಲ್’ ಆ್ಯಪ್ ನ್ನು  ಸದ್ಬಳಕೆ ಮಾಡಿಕೊಳ್ಳಲಿ: ಡಿಸಿ ಗುರುದತ್ತ ಹೆಗಡೆ
ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ
ಭಾರತದ ಜನಸಂಖ್ಯೆ 130 ಕೋಟಿ. ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಕರ್ನಾಟಕದಲ್ಲಿ  ಆರು ಜಾತಿಗಳು ಎಸ್ .ಸಿ ಗೆ ಸೇರಿದ್ದವು. ಈಗ 103 ಜಾತಿಗಳಿವೆ
ಜನಸಂಖ್ಯೆಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮೀಸಲಾತಿ ಪ್ರಮಾಣ ಹೆಚ್ಚಾಗಿರಲಿಲ್ಲ. ಜಾತಿಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಿದರು. ಆದರೆ ಮೀಸಲಾತಿ ಹೆಚ್ಚಿಸುವ ಪ್ರಯತ್ನ ಮಾಡಲಿಲ್ಲ. ಸಂವಿಧಾನದಲ್ಲಿ  ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿ ಹೆಚ್ಚಿಸಲು ಅಂಬೇಡ್ಕರ್ ಹೇಳಿದ್ದು, ಆ ಕೆಲಸವಾಗಿಲ್ಲ. ಬೇರೆ ರಾಜ್ಯಗಳಲ್ಲಿ 25 / 30 ರಷ್ಟಿಲ್ಲ.  ಇಂದಿರಾ ಸಹಾನಿ ಪ್ರಕರಣದ ತೀರ್ಪನ್ನು ನಾಗಮೋಹನ್ ದಾಸ್ ಸಮಿತಿ ಎತ್ತಿ ಹಿಡಿದು ಶಿಫಾರಸ್ಸು ಮಾಡಿದೆ ನ್ಯಾ. ಸುಭಾಷ್ ಅಡಿ ನೇತೃತ್ವದ ಸಮಿತಿ  ತನ್ನ ನಿರ್ಧಾರ ಪ್ರಕಟಿಸಿದ ಹಿನ್ನೆಲೆಯಲ್ಲಿ ಸರ್ಕಾರ ಮೀಸಲಾತಿ ಹೆಚ್ಚಿಸಿದೆ.

ಇದನ್ನು ಓದಿ:ಬಿಜೆಪಿಯಿಂದ ಶೆಟ್ಟರ್ ಔಟ್ ಆರ್ ಇನ್; ಇಂದು‌ ಸಂಜೆ ಫೈನಲ್, ಲಿಂಗಾಯತ ನಾಯಕಗೆ ಇದೆಂಥಾ ಅವಮಾನ ?
ಮುಕ್ತಿ ದೊರೆಯಬೇಕು
ಶಿಕ್ಷಣ, ಉದ್ಯೋಗ ಇಲ್ಲದಿದ್ದರೆ ಸಾಮಾಜಿಕವಾಗಿ ಗುಲಾಮರಾಗಿ ಬದುಕುವ ರೀತಿಗೆ ಮುಕ್ತಿ ತರಬೇಕು. ಮೀಸಲಾತಿ ಮುಟ್ಟಲು ಸಾಧ್ಯವಿಲ್ಲ. ರಾಜಕೀಯ ಜಾಗೃತಿ ಅಗತ್ಯ. ಬಡತನದಲ್ಲಿ ಹುಟ್ಟಿದವರು ಬಡತನದಲ್ಲಿಯೇ ಸಾಯಬೇಕೆಂಬ ಕಾನೂನಿಲ್ಲ. ಅವರೂ ಮುಂದೆ ಬಂದ ಸಬಲರಾಗಬೇಕು. ಬಡತನ ಮುಕ್ತ ಬದುಕು , ಸ್ವಾಭಿಮಾನದ ಬದುಕು ಬದುಕಬೇಕು ಎಂದರು.

ಇದನ್ನು ಓದಿ:2 ದಿನಗಳಲ್ಲಿ ಗೊಂದಲ ಬಗೆಹರಿಯಲಿದೆ: ಸಿಎಂ ಬೊಮ್ಮಾಯಿ
ಜನ ಜಾಗೃತರಾಗಿದ್ದಾರೆ
ಹಿಂದುಳಿದ ಸಮುದಾಯ ಜಾಗೃತವಾಗಿದೆ, ನಮ್ಮವರು ಯಾರು ಹೋರಾಟಕ್ಕೆ ಯಾರು ಬೆಲೆ ಕೊಡುತ್ತಾರೆ,  ನಮ್ಮ ಭಾವನೆಗಳಿಗೆ ಸ್ಪಂದಿಸುತ್ತಾರೆ,  ನಮ್ಮ ದ್ವನಿಯನ್ನು ಕೇಳುತ್ತಾರೆ, ಯಾರು ನಮ್ಮ ಪರವಾಗಿ ಸಂಕಷ್ಟದಲ್ಲಿ ನಿಲ್ಲುತ್ತಾರೆ, ರಕ್ಷಣೆಯನ್ನು ಕೊಡುತ್ತಾರೆಯೋ ಅವರಿಗೆ ಮತ ನೀಡಬೇಕು ಎಂದರು.

ಇದನ್ನು ಓದಿ:ರಾಷ್ಟ್ರೀಯ ನಾಯಕರ ಪ್ರವಾಸದ ಕುರಿತು ಚರ್ಚೆ: ಸಿಎಂ ಬೊಮ್ಮಾಯಿ
ನಾಟಕ ನಡೆಯುವುದಿಲ್ಲ
ಅಭಿವೃದ್ದಿ, ಶಿಕ್ಷಣ, ಉದ್ಯೋಗ  ನಮ್ಮ ಹಕ್ಕುಗಳನ್ನ ಕೊಡುವವರು,  ಅವರೇ ನಮ್ಮವರು ಎಂಬ ಜಾಗೃತಿ ಮೂಡಬೇಕು. ಹೀಗಾಗಿ ನಮ್ಮ ಮುಂದೆ ಇನ್ನು ನಾಟಕ ನಡೆಯುವುದಿಲ್ಲ,
ಬದಲಾವಣೆಯಾಗಿದೆ, ಇನ್ನು ಮುಂದೆ ಯಾರು ನಮ್ಮ ಪರವಾಗಿ ನಿಲ್ಲುತ್ತಾರೆ ಅವರಿಗೆ ನಮ್ಮ ಮತ ಎಂಬ ತೀರ್ಮಾನ ಜನಗಳು ಮಾಡಬೇಕು. ಸಮಾಜದಲ್ಲಿ ಬಹಳಷ್ಟು ಬದಲಾವಣೆ ಆಗುತ್ತಿದೆ, ಯುವಕರಲ್ಲಿ  ಜಾಗೃತಿ ಮೂಡಿದೆ ಎಂದರು.

ಇದನ್ನು ಓದಿ:ಬಿಜೆಪಿ ತೊರೆದವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ – ಅರುಣ್ ಸಿಂಗ್
ರಾಜಕೀಯ ಇಚ್ಛಾಶಕ್ತಿಯಿಂದ ಮಾಡಿರುವ ತೀರ್ಮಾನದ ಲಾಭ ಪಡೆಯಬೇಕು. ಈ ವಿಚಾರವನ್ನು ಮನೆ ಮನೆಗೆ ತಿಳಿಸಿ ಸಾಮಾಜಿಕ ಕ್ರಾಂತಿ ಮಾಡಬೇಕು ಎಂದರು.

Related posts

ಹುಬ್ಬಳ್ಳಿಯಲ್ಲಿ ಹರಿದ ನೆತ್ತರು! ಇಬ್ಬರಿಗೆ‌ ಚಾಕು ಇರಿತ, ಪೊಲೀಸ್ ಬೇಟೆ ಶುರು!!

eNewsLand Team

Kalaghatagi Former MLA Nimbannavar passed away

eNEWS LAND Team

ಭಾರತದ ಹರ್ನಾಜ್ ಕೌರ್ ಈಗ ಜಗದೇಕ ಸುಂದರಿ!!

eNewsLand Team